ದಕ್ಷಿಣ ಕನ್ನಡ: ಚಲಿಸುತ್ತಿದ್ದ ರೈಲಿನಿಂದ ನೇತ್ರಾವತಿ ನದಿಗೆ ಹಾರಿ ಯುವತಿ ಆತ್ಮಹತ್ಯೆ
ತಾನು ಕೂತಿದ್ದ ಸೀಟ್ನಲ್ಲಿ ಬ್ಯಾಗ್ ಬಿಟ್ಟು ಚಲಿಸುತ್ತಿದ್ದ ರೈಲಿನಿಂದ ನೇತ್ರಾವತಿ ನದಿಗೆ ಹಾರಿ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿಯ ಪಡಸಾಲೆಹಟ್ಟಿ ನಿವಾಸಿ ಎಂ.ಜಿ.ನಯನಾ (27) ಮೃತ ದುರ್ದೈವಿ.
ಮಂಗಳೂರು, ಫೆಬ್ರವರಿ 15: ಚಲಿಸುತ್ತಿದ್ದ ರೈಲಿನಿಂದ (Train) ನೇತ್ರಾವತಿ ನದಿಗೆ (Netravati River) ಹಾರಿ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ (Dakshin Kannada) ಜಿಲ್ಲೆಯ ಬಂಟ್ವಾಳ (Bantwal) ತಾಲೂಕಿನಲ್ಲಿ ನಡೆದಿದೆ. ತುಮಕೂರು (Tumkur) ಜಿಲ್ಲೆ ಮಧುಗಿರಿ (Madhugiri) ತಾಲೂಕಿನ ಮಿಡಿಗೇಶಿಯ ಪಡಸಾಲೆಹಟ್ಟಿ ನಿವಾಸಿ ಎಂ.ಜಿ.ನಯನಾ (27) ಮೃತ ದುರ್ದೈವಿ. ರೈಲಿನಲ್ಲಿ ತಾನು ಕೂತಿದ್ದ ಸೀಟ್ನಲ್ಲಿ ಬ್ಯಾಗ್ ಬಿಟ್ಟು ಯುವತಿ ನದಿಗೆ ಹಾರಿದ್ದಾರೆ. ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಚ್ಚುನಾಯಿ ಕಚ್ಚಿ ವ್ಯಕ್ತಿ ಸಾವು
ಮೈಸೂರು: ಹುಚ್ಚುನಾಯಿ ಕಚ್ಚಿ ವ್ಯಕ್ತಿ ಮೃತಪಟ್ಟಿದ್ದು, ಸೂಕ್ತ ಪರಿಹಾರಕ್ಕೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಹುಣಸೂರು ತಾಲ್ಲೂಕು ಹೆಗ್ಗಂದೂರು ಗ್ರಾಮದ ಸುರೇಶ (48) ಮೃತ ದುರ್ದೈವಿ. ಸುರೇಶ ಜಮೀನಿನಲ್ಲಿ ಕೆಲಸ ಮಾಡಿ ವಾಪಸ್ಸು ಬರುವಾಗ ಹುಚ್ಚುನಾಯಿ ಕಚ್ಚಿತ್ತು. ಇದರಿಂದ ತೀವ್ರವಾಗಿ ಗಾಯಗೊಂಡಿಂದ ಸುರೇಶ್ ಅವರನ್ನು ಹುಣಸೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸುರೇಶ್ ಮೃಪಟ್ಟಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಶಿಕ್ಷಕನಿಂದ ಮಾನಹಾನಿ ಮೆಸೇಜ್ ರವಾನೆ; ಎಸ್ಡಿಎಂ ಶಾಲೆಯಲ್ಲೇ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ, ಸಾವು
32 ಕುರಿಗಳ ನಿಗೂಢ ಸಾವು
ಇನ್ನು ನಂಜನಗೂಡು ತಾಲೂಕಿನ ಕೂಗಲೂರು ಗ್ರಾಮದಲ್ಲಿ 32 ಕುರಿಗಳು ನಿಗೂಢವಾಗಿ ಮೃತಪಟ್ಟಿವೆ. ತುಮಕೂರು ಜಿಲ್ಲೆ ಬಾಣಗೆರೆ ಗ್ರಾಮದ ಕುರಿಗಾಹಿಗಳಾದ ರಂಗಸ್ವಾಮಿ, ರಘು, ಜಯಣ್ಣ ಎಂಬುವರು 4 ತಿಂಗಳ ಹಿಂದೆ 400ಕ್ಕೂ ಹೆಚ್ಚು ಕುರಿಗಳ ಜೊತೆ ಕೂಗಲೂರು ಗ್ರಾಮಕ್ಕೆ ಬಂದಿದ್ದರು. ಇದೀಗ 32 ಕುರಿಗಳು ಮೃತಪಟ್ಟಿದ್ದು, ಕುರಿಗಾಹಿಗಳಿಗೆ ದಿಕ್ಕು ತೋಚದಂತಾಗಿದೆ. ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ