AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಕ್ಷಿಣಕಾಶಿ ನಂಜನಗೂಡು ದೇಗುಲದ ಮುಡಿ ಕೂದಲು ಹಕ್ಕು; ಕೋರ್ಟ್​ನಿಂದ ಐತಿಹಾಸಿಕ ತೀರ್ಪು

ಶ್ರೀಕಂಠೇಶ್ವರ ದೇವಾಲಯದ ಕಪಿಲಾ ಸ್ಥಾನಘಟ್ಟದಲ್ಲಿ ಮುಡಿ ಹರಕೆಯ ತೆಗೆಯುವ ಕೆಲಸ ಮಾಡಲಾಗುತ್ತದೆ. ಈ ಮುಡಿ ತೆಗೆಯುವುದರ ಹಕ್ಕು ಹಾಗೂ ಅದರ ಆದಾಯದ ಬಗ್ಗೆ ಶ್ರೀಕಂಠೇಶ್ವರ ದೇವಸ್ಥಾನ ಹಾಗೂ ಸ್ಥಳೀಯ ನಯನಜ ಕ್ಷತ್ರಿಯರ ಸಂಘದ ನಡುವೆ ವಿವಾದವಿತ್ತು.

ದಕ್ಷಿಣಕಾಶಿ ನಂಜನಗೂಡು ದೇಗುಲದ ಮುಡಿ ಕೂದಲು ಹಕ್ಕು; ಕೋರ್ಟ್​ನಿಂದ ಐತಿಹಾಸಿಕ ತೀರ್ಪು
ಕೂದಲು ಮುಡಿ
TV9 Web
| Updated By: sandhya thejappa|

Updated on:Jun 09, 2021 | 1:45 PM

Share

ಮೈಸೂರು: ದಕ್ಷಿಣಕಾಶಿ ನಂಜನಗೂಡು ದೇವಸ್ಥಾನ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಹೊಂದಿದೆ. ನಂಜನ್ನು ನುಂಗಿ ನಂಜುಂಡನಾಗಿ, ವಿಷವನ್ನು ಕುಡಿದ ವಿಷಕಂಠನಾಗಿ, ಭವರೋಗ ನಿವಾರಕ ಶ್ರೀಕಂಠೇಶ್ವರನಾಗಿ ನೆಲೆ ನಿಂತಿರುವ ಈಶ್ವರ ಸ್ವರೂಪಿಯನ್ನು ಜನರು ಭಯ ಭಕ್ತಿಯಿಂದ ಆರಾಧಿಸುತ್ತಾರೆ. ಪ್ರಾರ್ಥಿಸಿ ಪೂಜಿಸುತ್ತಾರೆ. ಇನ್ನು ನಂಜನಗೂಡು ನಂಜುಂಡೇಶ್ವರನನ್ನು ಹಕೀಮ್ ನಂಜುಂಡ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಅಂದರೆ ವೈದ್ಯ ನಂಜುಂಡ ಅಂತಾ. ಹೀಗಾಗಿಯೇ ಸಾಕಷ್ಟು ಜನರು ನಂಜುಂಡೇಶ್ವರನ ಬಳಿ ಆರೋಗ್ಯ ಸುಧಾರಣೆಗೆ ಹಲವು ಹರಕೆಗಳನ್ನು ಹೊರುತ್ತಾರೆ. ಅನೇಕ ಸೇವೆಗಳನ್ನು ನೆರವೇರಿಸುತ್ತಾರೆ. ಅದರಲ್ಲಿ ಕೂದಲು ತೆಗೆಸುವ ಸೇವೆ ಹರಕೆ ಕೂಡಾ ಒಂದು.

ಶ್ರೀಕಂಠೇಶ್ವರ ದೇವಾಲಯದ ಕಪಿಲಾ ಸ್ಥಾನಘಟ್ಟದಲ್ಲಿ ಮುಡಿ ಹರಕೆಯ ತೆಗೆಯುವ ಕೆಲಸ ಮಾಡಲಾಗುತ್ತದೆ. ಈ ಮುಡಿ ತೆಗೆಯುವುದರ ಹಕ್ಕು ಹಾಗೂ ಅದರ ಆದಾಯದ ಬಗ್ಗೆ ಶ್ರೀಕಂಠೇಶ್ವರ ದೇವಸ್ಥಾನ ಹಾಗೂ ಸ್ಥಳೀಯ ನಯನಜ ಕ್ಷತ್ರಿಯರ ಸಂಘದ ನಡುವೆ ವಿವಾದವಿತ್ತು. ಕಳೆದ 25 ವರ್ಷಗಳಿಂದ ಇದ್ದ ಈ ವಿವಾದಕ್ಕೆ ಕಾನೂನಾತ್ಮಕವಾಗಿ ತೆರೆ ಬಿದ್ದಿದೆ. ದೇವಸ್ಥಾನದ ಆಡಳಿತ ಮಂಡಳಿ ಹಾಗೂ ನಯನಜ ಕ್ಷತ್ರಿಯ ಸಂಘ ಇದರ ಹಕ್ಕು ನಮಗೆ ಸೇರಿದ್ದು ಅಂತಾ ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಈ ವಿಚಾರವಾಗಿ ಟಿ.ನರಸೀಪುರದ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಇದೀಗ ನ್ಯಾಯಾಲಯ ಶ್ರೀಕಂಠೇಶ್ವರ ದೇವಾಲಯದ ಪರವಾಗಿ ತೀರ್ಪು ನೀಡಿದೆ. ಶ್ರೀಕಂಠೇಶ್ವರನಿಗೆ ಹರಕೆ ಮಾಡಿಕೊಂಡವರು ಅರ್ಪಿಸುವ ಮುಡಿಯ ಆದಾಯ, ಅರ್ಪಿಸಿದ ಕೂದಲು ಆಡಳಿತ ಮಂಡಳಿಯ ಹಕ್ಕು ಎಂದು ಮಹತ್ವದ ತೀರ್ಪು ನೀಡಿದೆ. ಟಿ.ನರಸೀಪುರ ನ್ಯಾಯಾಲಯದ ನ್ಯಾಯಾಧೀಶರಾದ ರವೀಂದ್ರ ಅವರು ಇದುವರೆಗೂ ನಡೆದ ವಾದ ಪ್ರತಿವಾದವನ್ನು ಪರಾಮರ್ಶೆ ನಡೆಸಿ, ಈ ಹಕ್ಕು ಸಂಘದಲ್ಲ ಶ್ರೀಕಂಠೇಶ್ವರ ದೇವಸ್ಥಾನದ ಹಕ್ಕು. ಅವರು ಯಾರಿಂದಲಾದರೂ ಮುಡಿ ತೆಗೆಸಬಹುದು ಎಂದು ತೀರ್ಪು ನೀಡಿದ್ದಾರೆ.

25 ವರ್ಷದ ಹಿಂದೆ ಕೋರ್ಟ್​ ಮೆಟ್ಟಿಲೇರಿದ ವಿವಾದ ಸ್ಥಳೀಯ ನಯನಜ ಕ್ಷತ್ರಿಯರ ಸಂಘ ಈ ಹಕ್ಕು ತಮ್ಮ ಸಂಘದ್ದು ಮಾತ್ರ ಎಂದು ಪ್ರತಿಪಾದಿಸುತ್ತ ಬಂದಿದ್ದರು. ಇದೇ ವಿಷಯ ನ್ಯಾಯಾಲಯದ ಮೆಟ್ಟಿಲೇರಿ ಸುಮಾರು 25 ವರ್ಷಗಳಾಗಿತ್ತು. ನಂಜನಗೂಡು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿತ್ತು. ಪ್ರಕರಣ ವಿಚಾರಣೆಯ ಹಂತದಲ್ಲಿದ್ದಾಗ. ನಂಜನಗೂಡು ನ್ಯಾಯಾಧೀಶರು ಶ್ರೀಕಂಠೇಶ್ವರ ದೇವಾಲಯಕ್ಕೆ ಹೋಗಿದ್ದರು. ಈ ವೇಳೆ ಆಡಳಿತ ಮಂಡಳಿ ಸಂಪ್ರದಾಯದಂತೆ ಅವರನ್ನು ಗೌರವಿಸಿದ್ದರು. ಈ ಬಗ್ಗೆ ಪ್ರತಿವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಆದ್ದರಿಂದ ಈ ಪ್ರಕರಣವನ್ನು ನಂಜನಗೂಡು ನ್ಯಾಯಾಲಯದಿಂದ ಟಿ.ನರಸೀಪುರ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಪ್ರಾರಂಭದಲ್ಲಿ ವಕೀಲರಾದ ಶ್ರೀಕಂಠಪ್ರಸಾದ್, ನಂತರದಲ್ಲಿ ವೈದ್ಯನಾಥನ್ ದೇವಸ್ಥಾನದ ಪರವಾಗಿ ವಾದಿಸಿದ್ದರು. ವೈದ್ಯನಾಥನ್ ನಿಧನ ನಂತರ ಪಾಂಡೇ ಅವರು ವಕಾಲತ್ತು ವಹಿಸಿದ್ದರು. ಸದ್ಯ ನ್ಯಾಯಾಲಯದ ತೀರ್ಪು ದೇವಸ್ಥಾನದ ಆಡಳಿತ ಮಂಡಳಿ ಪರ ಬಂದಿರುವುದು ಆಡಳಿತ ಮಂಡಳಿ ಸದಸ್ಯರಿಗೆ ಖುಷಿ ತಂದಿದೆ.

ಈ ತೀರ್ಪಿನಿಂದಾಗಿ ದೇವಾಲಯದ ಆದಾಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದ ದೇವಾಲಯಕ್ಕೆ ಹೆಚ್ಚುವರಿ ವಾರ್ಷಿಕ 2.5 ಕೋಟಿ ರೂ. ಆದಾಯ ಬರುವ ಸಾಧ್ಯತೆ ಇದೆ ಎಂದು ಶ್ರೀಕಂಠೇಶ್ವರ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ರವೀಂದ್ರ ಅಭಿಪ್ರಾಯಪಟ್ಟಿದ್ದಾರೆ.

ವಾರ್ಷಿಕ ಬಾಣ ಬಿರುಸಿನ ಪ್ರದರ್ಶನ ನಡೆಯುವುದು ಅನುಮಾನ? ಶ್ರೀಕಂಠೇಶ್ವರ ದೇವರಿಗೆ ಹರಕೆ ಹೊತ್ತವರ ಮುಡಿ ತೆಗೆಸಿ ನೀಡಿದ ಹಣದಲ್ಲಿ ಮುಡಿಕಟ್ಟೆ ಸಂಘದವರು ಒಂದಿಷ್ಟು ಹಣವನ್ನು ಶೇಖರಿಸಿ ಪ್ರತಿ ಕಾರ್ತಿಕ ಮಾಸದ ಕೊನೇ ಸೋಮವಾರ ನಂಜನಗೂಡಿನಲ್ಲಿ ಶ್ರೀಕಂಠೇಶ್ವರನಿಗೆ ಉತ್ಸವ ಏರ್ಪಡಿಸುತ್ತಿದ್ದರು. ಅದೇ ದಿನ ಸಂಜೆ ಲಕ್ಷಾಂತರ ರೂ. ಖರ್ಚು ಮಾಡಿ ಬಾಣ ಬಿರುಸಿನ ಆಕರ್ಷಕ ಪ್ರದರ್ಶನ ಏರ್ಪಡಿಸುತ್ತಿದ್ದರು. ಈಗ ನ್ಯಾಯಾಲಯದ ತೀರ್ಪಿನಿಂದಾಗಿ ಆ ಹಕ್ಕು ಸಂಘದ ಕೈ ತಪ್ಪುವುದರಿಂದ ಬಾಣ ಬಿರುಸಿನ ವಿಹಂಗಮ ಪ್ರದರ್ಶನ ವೀಕ್ಷಣೆಯಿಂದ ನಂಜುಂಡೇಶ್ವರನ ಭಕ್ತರು ವಂಚಿತರಾಗುವರೇ ಎಂಬುದನ್ನು ಕಾದು ನೋಡಬೇಕಿದೆ.

ಪತ್ರಿಕಾ ಪ್ರಕಟಣೆ

ಇದನ್ನೂ ಓದಿ

ಬಳ್ಳಾರಿ ಜಿಲ್ಲಾಡಳಿತದಿಂದ ಹೊಸ ಪ್ರಯೋಗ; ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗಾಗಿ ಬಾಲ್ಯ ಚೈತನ್ಯ ಆರೈಕೆ ಕೇಂದ್ರ ಸ್ಥಾಪನೆ

ಸೋಂಕಿತರ ಯೋಗಕ್ಷೇಮ ವಿಚಾರಿಸಲು ಬಂದ ಆಶಾ ಕಾರ್ಯಕರ್ತೆ ಮೇಲೆ ಮದ್ಯದ ನಶೆಯಲ್ಲಿದ್ದ ಯುವಕರಿಂದ ಹಲ್ಲೆಗೆ ಯತ್ನ

(Dakshinakshi nanjanagudu temple hair and mudi ritual right; Historical Judgment pronounced by the Court)

Published On - 1:42 pm, Wed, 9 June 21

ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ