ಹಿರಿಯ ದಲಿತ ಕವಿ, ಸಾಹಿತಿ ಡಾ. ಸಿದ್ದಲಿಂಗಯ್ಯ ನಿಧನ

Siddalingaiah Death: ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ಸೃಷ್ಟಿಸಿದ್ದರು. ಎರಡು ಬರಿ ವಿಧಾನಪರಿಷತ್ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.

ಹಿರಿಯ ದಲಿತ ಕವಿ, ಸಾಹಿತಿ ಡಾ. ಸಿದ್ದಲಿಂಗಯ್ಯ ನಿಧನ
Follow us
TV9 Web
| Updated By: guruganesh bhat

Updated on:Jun 11, 2021 | 8:41 PM

ಬೆಂಗಳೂರು:  ಹಿರಿಯ ದಲಿತ ಕವಿ, ಸಾಹಿತಿ ಡಾ.ಸಿದ್ದಲಿಂಗಯ್ಯ ನಿಧನರಾಗಿದ್ದಾರೆ. 66 ವರ್ಷದ ಅವರು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದಲಿತ ಕವಿ ಎಂದೇ ಪ್ರಖ್ಯಾತರಾಗಿದ್ದ ಅವರು, ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ಸೃಷ್ಟಿಸಿದ್ದರು.  1988-1994 ಮತ್ಎತು 1995-2001ರವರೆಗೆ ಬಾರಿ ವಿಧಾನಪರಿಷತ್ ಸದಸ್ಯರಾಗಿಯೂ ಡಾ.ಸಿದ್ದಲಿಂಗಯ್ಯ ಕಾರ್ಯನಿರ್ವಹಿಸಿದ್ದರು.

ದಲಿತ ಚಳವಳಿಗೆ ಹೊಸ ವೇಗ, ಹೊಸ ಸ್ಪರ್ಶ ಕೊಟ್ಟವರು ಡಾ.ಸಿದ್ದಲಿಂಗಯ್ಯ. ಸಿದ್ದಲಿಂಗಯ್ಯ ಬರೆದ ಕ್ರಾಂತಿಗೀತೆ ‘ದಲಿತರು ಬರುವರು ದಾರಿ ಬಿಡಿ, ದಲಿತರ ಕೈಗೆ ರಾಜ್ಯ ಕೊಡಿ’ ರಾಜ್ಯವ್ಯಾಪಿ ಜನಪ್ರಿಯವಾಗಿತ್ತು. ದಲಿತ ಸಂವೇದನೆಗಳನ್ನು ಸಶಕ್ತವಾಗಿ, ಆಕ್ರೋಶವನ್ನು ಅಕ್ಷರಗಳಾಗಿ ಸಾರಿ ಹೇಳಿದ ಗೀತೆಯಿದು.

ಕ್ರಾಂತಿಗೀತೆ, ನೊಂದವರ ಪಾಡುಗಳನ್ನೇ ಹಾಡಾಗಿಸುತ್ತಿದ್ದ ಈ ಕವಿಯು ಶೃಂಗಾರ ಗೀತೆಗಳನ್ನು ಬರೆಯಬಲ್ಲರು ಎಂದು ನಿರೂಪಿಸಿದ್ದು ಜನಪ್ರಿಯ ಗೀತೆ ‘ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ’ .ಕರ್ನಾಟಕದ ದಲಿತ ಚಳವಳಿಗೆ ಹೋಗ, ಸಂಚಲನ ನೀಡಿದ್ದ ಕ್ರಾಂತಿಗೀತೆ ಕ್ರಾಂತಿ ಗೀತೆ ‘ದಲಿತರು ಬಂದರು ದಾರಿ ಬಿಡಿ’.

1953ರಲ್ಲಿ ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಜನಿಸಿದ್ದ ಅವರು,  ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಬಿ.ಎ ಆನರ್ಸ್  ಐಚ್ಛಿಕ ಕನ್ನಡ ಪದವಿ ಪಡೆದಿದ್ದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ಅವರು ‘ಗ್ರಾಮದೇವತೆಗಳು’ ಎಂಬ ಪ್ರೌಢ ಪ್ರಬಂಧಕ್ಕೆ 1989ರಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದರು.

ಡಾ.ಸಿದ್ದಲಿಂಗಯ್ಯ ಅವರ ಹೆಸರನ್ನು ಉಲ್ಲೇಖಿಸದೇ ಬಂಡಾಯ ಸಾಹಿತ್ಯದ ಇತಿಹಾಸ ಬರೆಯಲು ಸಾಧ್ಯವಿಲ್ಲ ಎಂಬಂತೆ ಅವರು ಹೆಸರುವಾಸಿಯಾಗಿದ್ದರು. ಪಂಪ, ನಾಡೋಜ ಪ್ರಶಸ್ತಿಗಳಿಗೂ ಭಾಜನರಾಗಿದ್ದ ಅವರು, ದಲಿತ, ಬಂಡಾಯವೆಂದರೆ ಹೊಡಿ- ಬಡಿ ಎಂಬುದಲ್ಲ ಎಂದು ವ್ಯಾಖ್ಯಾನಿಸಿದ್ದರು. ಸಂಚಲನ ನೀಡಿದ್ದ ಕ್ರಾಂತಿ ಗೀತೆ ‘ದಲಿತರು ಬಂದರು ದಾರಿ ಬಿಡಿ’.

ದಲಿತರು ಬರುವರು ದಾರಿಬಿಡಿ, ದಲಿತರ ಕೈಗೆ ರಾಜ್ಯಕೊಡಿ ಎಂಬ ಅವರ ಕ್ರಾಂತಿಗೀತೆ ಈಗಲೂ ದಲಿತ ಚಳವಳಿಗಳಲ್ಲಿ ಕೇಳಿಬರುವಂತಹದ್ದು. ಹೊಲೆ ಮಾದಿಗರ ಹಾಡು, ಸಾವಿರಾರು ನದಿಗಳು, ಮೆರವಣಿಗೆ, ಕಪ್ಪು ಕಾಡಿನ ಹಾಡು, ನನ್ನ ಜನಗಳು ಮತ್ತು ಇತರೆ ಕವಿತೆಗಳು ಅವರ ಪ್ರಮುಖ ಕವಿತಾ ಸಂಕಲನಗಳು.  ಸದನದಲ್ಲಿ ಸಿದ್ದಲಿಂಗಯ್ಯ  ಭಾಗ 1 ಮತ್ತು ಭಾಗ 2 ಅವರು ವಿಧಾನಪರಿಷತ್ ಸದಸ್ಯರಾಗಿ ಕರ್ತವ್ಯನಿರ್ವಹಿಸಿದ ಅನುಭವಗಳ ನೈಜ ಅನುಭವ ಕಥನ. ಅವರ ಆತ್ಮಕಥೆ ಊರು ಕೇರಿ ಭಾಗ 1 ಮತ್ತು ಭಾಗ 2ನ್ನು ಕನ್ನಡ ಸಾಹಿತ್ಯ ಎಂದಿಗೂ ಮರೆಯಲಾರದು.

ಅವರ ಊರು ಕೇರಿ ಆತ್ಕಥನ ಇಂಗ್ಲೀಷ್ ಮತ್ತು ತಮಿಳು ಭಾಷೆಗಳಿಗೆ ಅನುವಾದವಾಗಿದೆ. ಜತೆಗೆ ಅವರು ಬರೆದ ಕವಿತೆಗಳು ಭಾರತದ ಹಲವು ಭಾಷೆಗಳಿಗೆ ತರ್ಜುಮೆಗೊಂಡಿದ್ದು ಡಾ.ಸಿದ್ದಲಿಂಗಯ್ಯ ಅವರ ಹೆಸರು ಕನ್ನಡದ ಆಚೆಗೂ ಪಸರಿಸಿದೆ. ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳೂ ಅವರಿಗೆ ಸಂದಿವೆ.

ಇದನ್ನೂ ಓದಿ: Suresh Chandra Death: ಕೊರೊನಾದಿಂದ ಹಿರಿಯ ನಟ ಸುರೇಶ್​ ಚಂದ್ರ ನಿಧನ 

CM Udasi Death: ಮಾಜಿ ಸಚಿವ, ಹಾನಗಲ್ ಶಾಸಕ ಸಿ ಎಂ ಉದಾಸಿ ನಿಧನ (Poet writer Dr Siddalingaiah died in Bengaluru due to Covid)

Published On - 5:25 pm, Fri, 11 June 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್