ಶಾಲೆ ದತ್ತು ಪಡೆದ ಡಿ ಬಾಸ್ ಫ್ಯಾನ್ಸ್, ಅಭಿನಂದನೆ ಸಲ್ಲಿಸಿದ ಶಿಕ್ಷಣ ಸಚಿವ

ತಮ್ಮ ನೆಚ್ಚಿನ ನಾಯಕ ನಟರ ಹೆಸರಿನಲ್ಲಿ ಗುಂಪುಗಳನ್ನ ಕಟ್ಟಿಕೊಂಡು ಅವರ ಸಿನಿಮಾಗಳು ರಿಲೀಸ್ ಆದಾಗ ಪ್ರಚಾರ ಮಾಡ್ತಾ, ಥಿಯೇಟರ್ ಮುಂದೆ ಕಟ್ ಔಟ್ ಗೆ ಹಾಲಿನ ಅಭಿಷೇಕ ಮಾಡುವುದು, ‘ಡೈ ಹಾರ್ಡ್ ಫ್ಯಾನ್’ ಅಂತ ನಟರ ಹೆಸರನ್ನು ಅಚ್ಚೆ ಹಾಕಿಸಿಕೊಳ್ಳುವುದು, ಹುಟ್ಟುಹಬ್ಬಕ್ಕೆ ಅವರ ಮನೆಯ ಬಳಿ ಹೋಗಿ ಸೆಲಬ್ರೇಟ್ ಮಾಡೋದು ಕಾಮನ್, ಕಾಮನ್. ಆದ್ರೆ ಇಲ್ಲಿ ‘ಡಿ ಬಾಸ್’ ದರ್ಶನ್ ಅಭಿಮಾನಿಗಳು ತಮ್ಮನ್ನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಿಂದುಳಿದ ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದು, ಅದರ ಅಭಿವೃದ್ಧಿಗಾಗಿ […]

ಶಾಲೆ ದತ್ತು ಪಡೆದ ಡಿ ಬಾಸ್ ಫ್ಯಾನ್ಸ್, ಅಭಿನಂದನೆ ಸಲ್ಲಿಸಿದ ಶಿಕ್ಷಣ ಸಚಿವ
ಸಾಧು ಶ್ರೀನಾಥ್​

Updated on: Sep 26, 2019 | 12:15 PM

ತಮ್ಮ ನೆಚ್ಚಿನ ನಾಯಕ ನಟರ ಹೆಸರಿನಲ್ಲಿ ಗುಂಪುಗಳನ್ನ ಕಟ್ಟಿಕೊಂಡು ಅವರ ಸಿನಿಮಾಗಳು ರಿಲೀಸ್ ಆದಾಗ ಪ್ರಚಾರ ಮಾಡ್ತಾ, ಥಿಯೇಟರ್ ಮುಂದೆ ಕಟ್ ಔಟ್ ಗೆ ಹಾಲಿನ ಅಭಿಷೇಕ ಮಾಡುವುದು, ‘ಡೈ ಹಾರ್ಡ್ ಫ್ಯಾನ್’ ಅಂತ ನಟರ ಹೆಸರನ್ನು ಅಚ್ಚೆ ಹಾಕಿಸಿಕೊಳ್ಳುವುದು, ಹುಟ್ಟುಹಬ್ಬಕ್ಕೆ ಅವರ ಮನೆಯ ಬಳಿ ಹೋಗಿ ಸೆಲಬ್ರೇಟ್ ಮಾಡೋದು ಕಾಮನ್, ಕಾಮನ್.

ಆದ್ರೆ ಇಲ್ಲಿ ‘ಡಿ ಬಾಸ್’ ದರ್ಶನ್ ಅಭಿಮಾನಿಗಳು ತಮ್ಮನ್ನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಿಂದುಳಿದ ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದು, ಅದರ ಅಭಿವೃದ್ಧಿಗಾಗಿ ದುಡಿಯಲು ಕಂಕಣತೊಟ್ಟಿದ್ದಾರೆ.

ಸರ್ಕಾರಿ ಶಾಲೆ ದತ್ತು ಪಡೆದ ಡಿ ಬಾಸ್ ಫ್ಯಾನ್ಸ್:
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ರಾಮೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನ ‘ಡಿ ಕಂಪನಿ ಫ್ಯಾನ್ಸ್ ಅಸೋಷಿಯೇಷನ್’ ಮೂಲಕ ದರ್ಶನ್ ಮತ್ತು ದಿನಕರ್ ತೂಗುದೀಪ್ ಫ್ಯಾನ್ಸ್ ದತ್ತು ಪಡೆದಿದ್ದಾರೆ. 2 ವರ್ಷಗಳ ಅವಧಿಯಲ್ಲಿ ಶಾಲಾ ಕಟ್ಟಡ ದುರಸ್ಥಿ, ಮಕ್ಕಳಿಗೆ ಉತ್ತಮ ಸಮವಸ್ತ್ರ ಹಾಗೂ ಕಲಿಕಾ ಸಾಮಗ್ರಿ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯದ ನೆರವು ನೀಡಲು ಮುಂದಾಗಿದ್ದಾರೆ.

ಶಿಕ್ಷಣ ಸಚಿವರಿಂದ ಡಿ ಫ್ಯಾನ್ಸ್ ಪ್ರಶಂಸೆ:
ಅಭಿಮಾನಿಗಳ ಸಮಾಜಮುಖಿ ಕಾರ್ಯಕ್ಕೆ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಈಗಾಗಲೆ ದರ್ಶನ್ ಅಭಿಮಾನಿಗಳು ಶಾಲೆಗೆ ಬೇಕಾಗಿರುವ ಸಾಮಾಗ್ರಿ ಪಟ್ಟಿ ಸಿದ್ಧ ಪಡಿಸಿಕೊಂಡಿದ್ದಾರೆ. ಇವರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us