ಕೊರೊನಾ ಸೋಂಕು ಗ್ರಾಮಗಳಲ್ಲಿ ಹರಡದಂತೆ ಎಚ್ಚರಿಕೆ; ವಿನೂತನ ಪ್ರಯೋಗಕ್ಕೆ ಸಾಕ್ಷಿಯಾದ ದಾವಣಗೆರೆ ಜಿಲ್ಲಾಡಳಿತ

|

Updated on: May 18, 2021 | 8:50 AM

ಮನೆಯಲ್ಲಿಯೇ ಒಬ್ಬರಿಂದ ಒಬ್ಬರಿಗೆ ಹರಡುವುದನ್ನ ತಡೆಯಲು ದಾವಣಗೆರೆ ಜಿಲ್ಲಾಡಳಿತ  ವಿನೂತನವಾದ ಯೋಜನೆ ಮಾಡಿದೆ. ಒಂದು ಮನೆಯಲ್ಲಿ ಪಾಸಿಟಿವ್ ಪ್ರಕರಣ ಕಂಡು ಬಂದರೆ ಇಡಿ ಮನೆ ಸದಸ್ಯರಿಗೆ ಮೆಡಿಕಲ್ ಕಿಟ್ ನೀಡಲು ಮುಂದಾಗಿದೆ. ಇದರಿಂದ ಕೊರೊನಾ ಸೋಂಕು ತೀವ್ರವಾಗಿ ಹರಡದಂತೆ ತಡೆಯಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಕೊರೊನಾ ಸೋಂಕು ಗ್ರಾಮಗಳಲ್ಲಿ ಹರಡದಂತೆ ಎಚ್ಚರಿಕೆ; ವಿನೂತನ ಪ್ರಯೋಗಕ್ಕೆ ಸಾಕ್ಷಿಯಾದ ದಾವಣಗೆರೆ ಜಿಲ್ಲಾಡಳಿತ
ಸಾಂದರ್ಭಿಕ ಚಿತ್ರ
Follow us on

ದಾವಣಗೆರೆ: ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಸಾವು ನೋವಿನ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಸರ್ಕಾರ ಲಾಕ್​ಡೌನ್ ಘೋಷಣೆ ಮಾಡಿದೆ. ಆದರೆ ಸಾರ್ವಜನಿಕರು ಇನ್ನು ಕೂಡ ಎಚ್ಚರಿಕೆ ವಹಿಸಿಲ್ಲ. ಬೇರೆ ಬೇರೆ ಕಡೆ ಕೆಲಸಕ್ಕೆ ಹೋಗಿದ್ದವರು ಈಗ ಹಳ್ಳಿಗೆ ಆಗಮಿಸಿದ್ದಾರೆ. ಹೀಗೆ ಬಂದವರಲ್ಲಿ ಬಹುತೇಕರಿಗೆ ಕೊವಿಡ್ ಕಾಣಿಸಿಕೊಂಡಿದೆ. ಈ ರೀತಿಯ ಕೊವಿಡ್ ಪ್ರಕರಣಗಳು ದಾವಣಗೆರೆ ಜಿಲ್ಲೆಯಲ್ಲೂ ಕೂಡ ಎದುರಾಗಿದ್ದು, ಗ್ರಾಮೀಣ ಭಾಗದಲ್ಲಿ ಕೊರೊನಾ ಹರಡದಂತೆ ತಡೆಯಲು ಹೊಸ ಕಾರ್ಯತಂತ್ರವನ್ನು ರೂಪಿಸಿದೆ.

ಈಗಾಗಲೇ ದಾವಣಗೆರೆ ಜಿಲ್ಲೆಯ 68ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕೊರೊನಾ ಸೋಂಕು ಹರಡಿದೆ. ಹೊನ್ನಾಳಿ ತಾಲೂಕಿನ ಕೂಲಂಬಿ, ನ್ಯಾಮತಿ ತಾಲೂಕಿನ ರಾಮೇಶ್ವರ, ಹರಿಹರ ತಾಲೂಕಿನ ಬೆಳ್ಳೂಡಿ ಸೇರಿದಂತೆ ಕೆಲ ಗ್ರಾಮಗಳಲ್ಲಿ 50 ರಿಂದ 100 ಜನರಿಗೆ ಪಾಸಿಟಿವ್ ಬಂದಿದೆ. ಇವರಲ್ಲಿ ಹೆಚ್ಚಿನ ಜನರು ಯಾರು ಕೊವಿಡ್ ಕೇರ್ ಸೆಂಟರ್​ಗೆ ಬರುತ್ತಿಲ್ಲ. ಮನೆಯಲ್ಲಿಯೇ ಇರುತ್ತಾರೆ. ಕೂಲಂಬಿಯಲ್ಲಿ ಆಗಿದ್ದು ಇದೆ, ಬೆಂಗಳೂರಿನಿಂದ ಓರ್ವ ವ್ಯಕ್ತಿ ಬಂದಿದ್ದರು. ಬಳಿಕ ಈ ವ್ಯಕ್ತಿ ಕೆಲ ಸಮಾರಂಭದಲ್ಲಿ ಪಾಲ್ಗೊಂಡಿದ್ದು, ಆತ ಪಾಸಿಟಿವ್ ಬರುವುದರ ಜೊತೆಗೆ ಮನೆಯಲ್ಲಿ ಹತ್ತು ಜನ ಸಹ ಪಾಸಿಟಿವ್ ಆಗುವಂತೆ ಆಗಿದೆ.

ಒಬ್ಬರಿಂದ ಇಡಿ ಗ್ರಾಮವೇ ಆತಂಕ ಪಡುವಂತಾಗಿದೆ. ಮನೆಯಲ್ಲಿಯೇ ಒಬ್ಬರಿಂದ ಒಬ್ಬರಿಗೆ ಹರಡುವುದನ್ನ ತಡೆಯಲು ದಾವಣಗೆರೆ ಜಿಲ್ಲಾಡಳಿತ  ವಿನೂತನವಾದ ಯೋಜನೆ ಮಾಡಿದೆ. ಒಂದು ಮನೆಯಲ್ಲಿ ಪಾಸಿಟಿವ್ ಪ್ರಕರಣ ಕಂಡು ಬಂದರೆ ಇಡಿ ಮನೆ ಸದಸ್ಯರಿಗೆ ಮೆಡಿಕಲ್ ಕಿಟ್ ನೀಡಲು ಮುಂದಾಗಿದೆ. ಇದರಿಂದ ಕೊರೊನಾ ಸೋಂಕು ತೀವ್ರವಾಗಿ ಹರಡದಂತೆ ತಡೆಯಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಕೊರೊನಾ ಸೋಂಕು ತೀವ್ರವಾಗಿ ಹರಡುವುದನ್ನು ತಡೆಯಬೇಕು. ಓಡುವ ನೀರನ್ನು ನಡೆಯಿಸಬೇಕು. ನಡೆಯುವ ನೀರನ್ನು ನಿಲ್ಲಿಸಬೇಕು. ನಿಂತ ನೀರನ್ನ ಇಂಗಿಸಬೇಕು ಎಂಬ ಅಂತರ್ಜಲದ ಸೂಕ್ತದಂತೆ ಕೊರೊನಾ ಸಂಪರ್ಕ ಕೊಂಡಿ ಕಿತ್ತು ಹಾಕಲು ಅಥವಾ ಆ ಕೊಂಡಿಯನ್ನ ಕತ್ತರಿಸಲು ಬೇಕಾದ ಚಾಣಾಕ್ಷತನ ಈಗ ಬೇಕಾಗಿದೆ. ನಿನ್ನೆ 1155 ಇಂದು 786 ಹೀಗೆ ದಿನದಿಂದ ದಿನಕ್ಕೆ ಕೊವಿಡ್ ಪಾಸಿಟಿವ್ ಪ್ರಕರಣ ಜಾಸ್ತಿ ಆಗತ್ತಿವೆ. ಹೀಗೆ ಬರುವ ಪಾಸಿಟಿವ್ ಪ್ರಕರಣಗಳಲ್ಲಿ ಶೇಕಡಾ 60 ರಷ್ಟು ಪ್ರಕರಣಗಳು ಗ್ರಾಮೀಣ ಪ್ರದೇಶದಲ್ಲಿ ಪತ್ತೆಯಾಗುತ್ತಿರುವುದು ಆತಂಕದ ವಿಚಾರ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದ್ದಾರೆ.

ಸೋಂಕು ತೀವ್ರವಾಗಿ ಹಳ್ಳಿಗಳಲ್ಲಿ ಹಬ್ಬಿದರೇ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ. ಈಗಾಗಲೇ ಜಿಲ್ಲಾಡಳಿತ ನಡೆಸಿದ ಸಮೀಕ್ಷೆಯಂತೆ ಬಹುತೇಕ ಗ್ರಾಮಗಳಲ್ಲಿ ಆಸ್ಪತ್ರೆಗೂ ಬಾರದೇ ಕೆಲವರು ಸಾವನ್ನಪ್ಪುತ್ತಿದ್ದಾರೆ. ಆದರೆ ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ. ಪಾಸಿಟಿವ್ ಬಂದವರು ಹೊರಗೆ ತಿರುಗಾಡಿದರೆ ಪೊಲೀಸರಿಗೆ ತಿಳಿಸಿ ಎಂದು ಜಿಲ್ಲಾಧಿಕಾರಿಗಳು ವಿನಂತಿಸಿದ್ದು ಮಾತ್ರ ದಾವಣಗೆರೆ ಪರಿಸ್ಥಿತಿಯ ಗಂಭೀರತೆಯನ್ನ ಎತ್ತಿ ತೊರಿಸುತ್ತಿದೆ.

ಇದನ್ನೂ ಓದಿ:

ನನಗೆ ಕೊರೊನಾ ಸೋಂಕು ತಗುಲಿಲ್ಲ, ಏಕೆಂದರೆ ನಾನು ನಿತ್ಯ ಗೋಮೂತ್ರ ಸೇವಿಸುತ್ತೇನೆ: ಬಿಜೆಪಿ ಸಂಸದೆ ಪ್ರಗ್ಯಾಸಿಂಗ್ ಠಾಕೂರ್

Sonu Sood: ಸೋನು ಸೂದ್​ ಹೆಸರಲ್ಲಿ ಮಹಾಮೋಸ; ಕೊರೊನಾ ಕಾಲದಲ್ಲೂ ದುಡ್ಡು ಕಬಳಿಸಿದ ಕಿಡಿಗೇಡಿಗಳು