ಕೊವಿಡ್ ಕೇರ್ ಸೆಂಟರ್​ನಲ್ಲಿ ಊಟದ ವ್ಯವಸ್ಥೆ ಆರಂಭಿಸಿದ ದಾವಣಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಈಗಾಗಲೇ ರಾಜ್ಯದ ಹಲವು ಕಡೆ ಕೊವಿಡ್ ಕೇರ್ ಸೆಂಟರ್​ನಲ್ಲಿ ಊಟ ಸಿಗುತ್ತಿಲ್ಲ ಎನ್ನುವ ಕೂಗುಗಳು ಕೇಳಿಬಂದಿವೆ. ಇದಕ್ಕೆ ಅಪವಾದ ಎನ್ನುವಂತೆ ಕೊವಿಡ್ ಕೇರ್ ಸೆಂಟರ್​ನಲ್ಲಿ ಇರುವ ಪ್ರತಿಯೊಬ್ಬರಿಗೆ ಊಟದ ವ್ಯವಸ್ಥೆಯನ್ನು ಸ್ವತಃ ತಾವೇ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆರಂಭಿಸಿದ್ದಾರೆ.

ಕೊವಿಡ್ ಕೇರ್ ಸೆಂಟರ್​ನಲ್ಲಿ ಊಟದ ವ್ಯವಸ್ಥೆ ಆರಂಭಿಸಿದ ದಾವಣಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
ತರಳಬಾಳು ಕೊವಿಡ್ ಕೇರ್ ಸೆಂಟರ್
Follow us
sandhya thejappa
|

Updated on: May 18, 2021 | 8:31 AM

ದಾವಣಗೆರೆ: ಕೊರೊನಾ ಎರಡನೇ ಅಲೆ ಈಗಾಗಲೇ ದೇಶದಾದ್ಯಂತ ವ್ಯಾಪಿಸಿದೆ. ಕಳೆದ ವರ್ಷದಲ್ಲಿ ಮಹಾಮಾರಿ ಕೊರೊನಾದಿಂದ ಇಡೀ ದೇಶವೇ ತತ್ತರಿಸಿ ಹೋಗಿದೆ. ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಎಲ್ಲವೂ ಸರಿಯಾಗುತ್ತದೆ ಎಂದು ಯೋಚಿಸುವ ಹೊತ್ತಿಗೆ ಕೊರೊನಾ ಎರಡನೇ ಅಲೆ ಬಂದು ಅಪ್ಪಳಿಸಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ, ಬೆಡ್​ಗಳ ಕೊರತೆ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಹೀಗಾಗಿ ಹಾಸ್ಟೆಲ್ಗಳು, ಕೆಲ ರೆಸ್ಟೋರೆಂಟ್ಗಳನ್ನು ಕೊವಿಡ್ ಕೇರ್ ಸೆಂಟರ್ ಆಗಿ ನಿರ್ಮಿಸಲಾಗಿದೆ. ಅದರಂತೆ ದಾವಣಗೆರೆ ಸಿರಿಗೆರೆ ತರಳುಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತರಳುಬಾಳು ಮಹಿಳಾ ಹಾಸ್ಟೆಲ್​ನ ಕೊವಿಡ್ ಕೇರ್ ಸೆಂಟರ್ ಮಾಡಲು ಸರ್ಕಾರಕ್ಕೆ ಬಿಟ್ಟಿದ್ದಾರೆ.

ಈಗಾಗಲೇ ರಾಜ್ಯದ ಹಲವು ಕಡೆ ಕೊವಿಡ್ ಕೇರ್ ಸೆಂಟರ್​ನಲ್ಲಿ ಊಟ ಸಿಗುತ್ತಿಲ್ಲ ಎನ್ನುವ ಕೂಗುಗಳು ಕೇಳಿಬಂದಿವೆ. ಇದಕ್ಕೆ ಅಪವಾದ ಎನ್ನುವಂತೆ ಕೊವಿಡ್ ಕೇರ್ ಸೆಂಟರ್​ನಲ್ಲಿ ಇರುವ ಪ್ರತಿಯೊಬ್ಬರಿಗೆ ಊಟದ ವ್ಯವಸ್ಥೆಯನ್ನು ಸ್ವತಃ ತಾವೇ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆರಂಭಿಸಿದ್ದಾರೆ. ದಾವಣಗೆರೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಬಳಿಯ ಶಿರಮಗೊಂಡನಹಳ್ಳಿ ಬಳಿ ಇರುವ ತರಳುಬಾಳು ಮಹಿಳಾ ಹಾಸ್ಟೆಲ್​ನಲ್ಲಿರುವ ಸೋಂಕಿತರು ಸೇರಿ ಪ್ರತಿಯೊಬ್ಬರಿಗೂ ಊಟದ ವ್ಯವಸ್ಥೆಯನ್ನು ಸ್ವಾಮೀಜಿ ಮಾಡಿದ್ದಾರೆ.

ಹಾಸ್ಟೆಲ್​ನಲ್ಲಿ 30 ರೂಮ್​ಗಳಿದ್ದು, ಪ್ರತಿ ರೂಮ್​ನಲ್ಲಿ ತಲಾ ಮೂರು ಜನರಂತೆ 90 ಜನಕ್ಕೆ ಆಸರೆ ನೀಡಲಾಗುತ್ತಿದೆ. ಈ 90 ಜನಕ್ಕೆ ಊಟ, ತಿಂಡಿ, ವಸತಿ ಜವಾಬ್ದಾರಿಯನ್ನು ಸಿರಿಗೆರೆ ತರಳುಬಾಳು ಗುರುಪೀಠ ಸ್ವಾಮೀಜಿ ವಹಿಸಿಕೊಂಡಿದ್ದಾರೆ. ಊಟದ ವ್ಯವಸ್ಥೆಗೆ ಮಾಗನೂರು ಸಂಗಮೇಶ್ವರಗೌಡ್ರ ನೇತ್ರತ್ವದ ಸಮಿತಿಯನ್ನು ಸ್ವಾಮೀಜಿ ರಚಿಸಿದ್ದಾರೆ.

ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ ದಾವಣಗೆರೆ ಜಿಲ್ಲಾ ಕೊವಿಡ್ ಆಸ್ಪತ್ರೆಯ ಶೌಚಾಲಯದ ದುರ್ವಾಸನೆಯಿಂದ ಸೋಂಕಿತರು ಪರದಾಟ ಪಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಬೆಡ್ ಸಿಕ್ಕರೂ ಸೋಂಕಿತರು ನರಕಯಾತನೆ ಅನುಭವಿಸುವಂತಾಗಿದೆ. ಕೊವಿಡ್ ವಾರ್ಡ್​ಗಳ ಸ್ಥಿತಿ ಬಗ್ಗೆ ಗಮನ ಹರಿಸಿ ಕನಿಷ್ಟ ಶೌಚಾಲಯವನ್ನು ಸ್ವಚ್ಚಗೊಳಿಸುವಂತೆ ಸೋಂಕಿತರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ

ಜಿಲ್ಲೆಯಲ್ಲಿ ಒಂದು‌ ಬ್ಲ್ಯಾಕ್ ಫಂಗಸ್ ಕೇಸ್ ಪತ್ತೆಯಾಗಿದೆ, ನಮ್ಮ ಬಳಿ ಇದಕ್ಕೆ ಯಾವುದೇ ಇಂಜೆಕ್ಷನ್ ಇಲ್ಲ: ಡಿಸಿ ವಿಕಾಸ್ ಕಿಶೋರ್

ಧೈರ್ಯಂ ಸರ್ವತ್ರ ಸಾಧನಂ.. ಕೊರೊನಾ ಮುಕ್ತರಾಗಲು ಮೊದಲು ಭಯ ಬಿಡಬೇಕು

(Dr Shivamurthy Shivacharya Swamiji has launched a dining system at Covid Care Center in davanagere)