AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳದಲ್ಲಿ ಒಂದು‌ ಬ್ಲ್ಯಾಕ್ ಫಂಗಸ್ ಕೇಸ್ ಪತ್ತೆಯಾಗಿದೆ, ನಮ್ಮ ಬಳಿ ಇದಕ್ಕೆ ಯಾವುದೇ ಇಂಜೆಕ್ಷನ್ ಇಲ್ಲ: ಡಿಸಿ ವಿಕಾಸ್ ಕಿಶೋರ್

ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಬಗ್ಗೆ ಜಾಗೃತಿ ಮೂಡಿಸಬೇಕಿದ್ದು, ಜನರಿಗೆ ಈ ಬಗ್ಗೆ ಜಾಗೃತಿ ಬಂದರೆ ಒಳ್ಳೆಯದು ಸದ್ಯ ನಮ್ಮ ಬಳಿ ಬ್ಲ್ಯಾಕ್ ಫಂಗಸ್​ಗೆ ಯಾವುದೇ ಇಂಜೆಕ್ಷನ್ ಇಲ್ಲ. ಪತ್ತೆಯಾದ ಒಂದು ಕೇಸ್ ಕುರಿತು ನಮ್ಮ ತಂಡ ತನಿಖೆ ನಡೆಸುತ್ತಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

ಕೊಪ್ಪಳದಲ್ಲಿ ಒಂದು‌ ಬ್ಲ್ಯಾಕ್ ಫಂಗಸ್ ಕೇಸ್ ಪತ್ತೆಯಾಗಿದೆ, ನಮ್ಮ ಬಳಿ ಇದಕ್ಕೆ ಯಾವುದೇ ಇಂಜೆಕ್ಷನ್ ಇಲ್ಲ: ಡಿಸಿ ವಿಕಾಸ್ ಕಿಶೋರ್
ಡಿಸಿ ವಿಕಾಸ್ ಕಿಶೋರ್
preethi shettigar
|

Updated on:May 18, 2021 | 8:28 AM

Share

ಕೊಪ್ಪಳ: ಕೊರೊನಾ ಎರಡನೇ ಅಲೆ ತೀವ್ರವಾಗಿ ಪ್ರಸರಣವಾಗುತ್ತಿರುವ ಈ ಸಂದರ್ಭದಲ್ಲಿ ಮತ್ತೊಂದು ಆತಂಕ ಎದುರಾಗಿದ್ದು, ಬ್ಲ್ಯಾಕ್​ ಫಂಗಸ್​ ಹರಡುವಿಕೆ ಬಗ್ಗೆ ಭಯ ಶುರುವಾಗಿದೆ. ಹೀಗಿರುವಾಗಲೇ ಕೊಪ್ಪಳ ಜಿಲ್ಲೆಯಲ್ಲಿ ಬ್ಲ್ಯಾಕ್​ ಫಂಗಸ್ ಕಾಣಿಸಿಕೊಂಡಿದೆ ಎಂದು ಸ್ವತಃ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ರಾಯಚೂರು ಹಾಗೂ ಕೊಪ್ಪಳ ಬಾರ್ಡರ್​ನಲ್ಲಿ ಒಂದು‌ ಬ್ಲ್ಯಾಕ್ ಫಂಗಸ್ ಕೇಸ್ ಪತ್ತೆಯಾಗಿದೆ. ಈ ಬಗ್ಗೆ ನಮ್ಮ ತಂಡ ಹೆಚ್ಚು ಮುತುವರ್ಜಿವಹಿಸಿ ಅಪಾಯದ ಬಗ್ಗೆ ಗಮನಿಸುತ್ತಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಹೇಳಿದ್ದಾರೆ.

ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಬಗ್ಗೆ ಜಾಗೃತಿ ಮೂಡಿಸಬೇಕಿದ್ದು, ಜನರಿಗೆ ಈ ಬಗ್ಗೆ ಜಾಗೃತಿ ಬಂದರೆ ಒಳ್ಳೆಯದು ಸದ್ಯ ನಮ್ಮ ಬಳಿ ಬ್ಲ್ಯಾಕ್ ಫಂಗಸ್​ಗೆ ಯಾವುದೇ ಇಂಜೆಕ್ಷನ್ ಇಲ್ಲ. ಪತ್ತೆಯಾದ ಒಂದು ಕೇಸ್ ಕುರಿತು ನಮ್ಮ ತಂಡ ತನಿಖೆ ನಡೆಸುತ್ತಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

ಕೊವಿಡ್ ಗುಣಮುಖವಾದ ಬಳಿಕ ಬ್ಲ್ಯಾಕ್ ಪಂಗಸ್ ಕಾಣಿಸಿಕೊಂಡಿದೆ ಕಲಬುರಗಿ ಜಿಲ್ಲೆಯಲ್ಲಿ ಬ್ಲ್ಯಾಕ್ ಪಂಗಸ್ ಪ್ರಕರಣಗಳು ಹೆಚ್ಚುತ್ತಿದ್ದು, ಚಿಕಿತ್ಸೆಗೆ ಬೇಕಾದ ಇಂಜೆಕ್ಷನ್ ಸಿಗದೇ ರೋಗಿಗಳು ಪರದಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಎರಡು ದಿನದಿಂದ ಬ್ಲ್ಯಾಕ್ ಫಂಗಸ್ ಪತ್ತೆಯಾಗಿರುವ ಮಹಿಳೆ ಪರದಾಡುತ್ತಿದ್ದು, ಕಲಬುರಗಿ ಸೇರಿದಂತೆ ಎಲ್ಲಿಯೂ ಇಂಜೆಕ್ಷನ್ ಸಿಕ್ಕಿಲ್ಲ. ಸದ್ಯ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 32 ವರ್ಷದ ಮಹಿಳೆಗೆ ಹದಿನೈದು ದಿನದ ಹಿಂದೆ ಕೊರೊನಾ ಸೋಂಕು ದೃಢವಾಗಿತ್ತು. ಬಳಿಕ ಕೊರೊನಾ ನೆಗೆಟಿವ್ ಬಂದಿದ್ದು, ಈಗ ಬ್ಲ್ಯಾಕ್ ಪಂಗಸ್ ಕಾಣಿಸಿಕೊಂಡಿದೆ.

ಚಿಕ್ಕಮಗಳೂರಿನ ವ್ಯಕ್ತಿಯಲ್ಲೂ ಬ್ಲ್ಯಾಕ್ ಫಂಗಸ್ ಪತ್ತೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಗ್ರಾಮದ ವ್ಯಕ್ತಿಯಲ್ಲಿ ಕೂಡ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ. ಶಿವಮೊಗ್ಗದಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದಿದ್ದರು, ಸದ್ಯ ಬ್ಲಾಕ್ ಫಂಗಸ್ ಕಾಣಿಸಿಕೊಂಡಿದ್ದು, ವ್ಯಕ್ತಿಗೆ ಮಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ:

ಹೆದರಬೇಡಿ, ಬ್ಲ್ಯಾಕ್ ಫಂಗಸ್ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ: ನೇತ್ರ ತಜ್ಞ ಡಾ.ಭುಜಂಗಶೆಟ್ಟಿ

ಬೌರಿಂಗ್​ನಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ವ್ಯವಸ್ಥೆ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

Published On - 8:24 am, Tue, 18 May 21