ಧೈರ್ಯಂ ಸರ್ವತ್ರ ಸಾಧನಂ.. ಕೊರೊನಾ ಮುಕ್ತರಾಗಲು ಮೊದಲು ಭಯ ಬಿಡಬೇಕು

corona Fear ಕೊರೊನಾಗಿಂತ ಅದರ ಭಯವೇ ಹೆಚ್ಚು ಜನರನ್ನು ಬಲಿ ಪಡೆಯುತ್ತಿದೆಯೇ? ಸೋಂಕು ಇಲ್ಲದಿದ್ದರೂ ಸಾಮಾನ್ಯ ಹವಮಾನ ಬದಲಾವಣೆಯಿಂದಾದ ಕೆಮ್ಮು, ಜ್ವರಕ್ಕೆ ಕೊರೊನಾ ಬಂದಿದೆ ಎಂದು ತಿಳಿದು ಚಿಂತೆಯಲ್ಲೇ ಜನ ನರಳಿ ಪ್ರಾಣಬಿಡುತ್ತಿದ್ದಾರಾ?

ಧೈರ್ಯಂ ಸರ್ವತ್ರ ಸಾಧನಂ.. ಕೊರೊನಾ ಮುಕ್ತರಾಗಲು ಮೊದಲು ಭಯ ಬಿಡಬೇಕು
ಸಾಂದರ್ಭಿಕ ಚಿತ್ರ
Ayesha Banu

|

May 18, 2021 | 8:05 AM

ಕೊರೊನಾ ಮತ್ತು ಭಯ.. ಸದ್ಯ ಜನರ ಜೀವಕ್ಕೆ ಮಾರಕವಾಗಿರುವ ಅಂಶಗಳು. ದಿನಬೆಳಗಾದ್ರೆ ಸಾಕು ಮೊಬೈಲ್ಗಳಲ್ಲಿ, ಟಿವಿಗಳಲ್ಲಿ, ದಿನ ಪತ್ರಿಕೆಗಳಲ್ಲಿ, ನಾವು ಕೇಳುತ್ತಿರುವ ಮೊದಲ ಸುದ್ದಿಯೇ ಕೊರೊನಾ. ಸೂರ್ಯ ಹುಟ್ಟಿದಾಗಿನಿಂದ ಚಂದ್ರ ಮರೆಯಾಗುವ ವರೆಗೂ ಕೊರೊನಾ ಗಾಳಿಯೇ ಬೀಸುತ್ತಿರುತ್ತದೆ. ಸದ್ಯ ಇಡೀ ಜಗತ್ತು ಕೊರೊನಾ ಮಯವಾಗಿದೆ. ಟಿವಿಗಳ ಮುಂದೆ ಕೂತ ಚಿಕ್ಕ ಚಿಕ್ಕ ಮಕ್ಕಳು ಟಿವಿಯಲ್ಲಿ ಕೊರೊನಾ ಎಂಬ ಶಬ್ಧ ಬರುತ್ತಿದ್ದಂತೆ ಮಂಚದ ಕೆಳಗೆ ಅವಿತುಕೊಳ್ಳುತ್ತಿರುವಂತಹ ಸಂಗತಿಗಳನ್ನು ನಾವು ಕೇಳುತ್ತಿದ್ದೇವೆ. ಈ ಸಂದರ್ಭದಲ್ಲಿ ನಾನು ಒಂದು ಮಾತನ್ನು ಹೇಳಲು ಇಷ್ಟಪಡುತ್ತೇನೆ. ಸುಳ್ಳು ಸತ್ಯಕ್ಕಿಂತ ವೇಗವಾಗಿ ಹರಡುತ್ತೇ. ಹಾಗೂ ಭಯಕ್ಕೇ ಇಡೀ ಜೀವನವನ್ನೇ ನಾಶ ಮಾಡುವ ಶಕ್ತಿ ಇದೆ. ಭಯ ಅತಿಯಾದ್ರೆ ಪ್ರಾಣಕ್ಕೇ ಅಪಾಯ ಕಟ್ಟಿಟ್ಟ ಬುತ್ತಿ.

ನಾವು ಈ ಆರ್ಟಿಕಲ್ ಮೂಲಕ ನಿಮಗೆ ಹೇಳಲು ಹೊರಟಿರುವುದು ಕೊರೊನಾದ ಬಗ್ಗೆ ಇರುವ ಭಯವನ್ನು ಜಯಿಸುವ ಬಗ್ಗೆ ತಿಳಿಸಲು. ಯಾವುದೇ ಬಂದು ವಿಷಯ ತೆಗೆದುಕೊಂಡರೂ ಅದರಲ್ಲಿ ಸತ್ಯ ಮತ್ತು ಸುಳ್ಳು ಇದ್ದೇ ಇರುತ್ತದೆ. ಅದೇ ರೀತಿ ಕೊರೊನಾ ವಿಷಯದಲ್ಲೂ ಸುಳ್ಳು ಮತ್ತು ಸತ್ಯ ಎರಡೂ ಜೊತೆಯಲ್ಲೇ ಹರಿದಾಡುತ್ತಿವೆ. ಬೇಕು ಬೇಕೆಂದೆ ಭಯ ಹುಟ್ಟಿಸಲು ಅನೇಕ ಮಂದಿ ಭಯ ಹುಟ್ಟುವಂತಹ ವಿಡಿಯೋಗಳನ್ನು ಸುದ್ದಿಗಳನ್ನು ಹರಿಬಿಡುತ್ತಿದ್ದಾರೆ. ಆದ್ರೆ ಮುಖ್ಯವಾಗಿ ಜನ ಕೊರೊನಾಗೆ ಭಯ ಪಡುವುದನ್ನು ಬಿಡಬೇಕು. ಯಾವುದು ಸುಳ್ಳು ಯಾವುದು ನಿಜ ಎಂಬ ಬಗ್ಗೆ ಚಿಂತಿಸಿ ಚಿಂತಿಸಿ ಮನಸನ್ನು ಹಾಳು ಮಾಡಿಕೊಳ್ಳಬಾರದು.

ಸರ್ಕಾರಿ ನೌಕರ ಸಮೀರ್ ಹುಸೇನ್ ಕೊರೊನಾ ಸೋಂಕಿನ ವಿರುದ್ಧ ಹೋರಾಡಿ ಗೆದ್ದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಸಮೀರ್ ತಾವು ಒಬ್ಬ ಕೊರೊನಾ ವಾರಿಯರ್ ಆಗಿದ್ದು ತಮಗೆಯೇ ಕೊರೊನಾ ಸೋಂಕು ತಗುಲಿರುವುದು ತಿಳಿಯುತ್ತಿದ್ದಂತೆಯೇ ದಿಗ್ಬ್ರಮೆಗೆ ಒಳಗಾಗಿದ್ದೆ. ಇಷ್ಟೇನಾ ಜೀವನ ಮುಂದೆ ಏನು ಗತಿ? ಎಂದು ಕುಟುಂಬ, ಹೆಂಡತಿ, ಮಕ್ಕಳ ಬಗ್ಗೆ ಯೋಚಿಸಿ ಕಣ್ಣ ಮುಂದೆ ಸಾವು ಹಾದು ಹೋದಂತಾಯಿತು. ಆದರೆ 14 ದಿನ ಒಂದೇ ರೂಮಿನಲ್ಲಿ ನಾಲ್ಕು ಗೋಡೆಗಳ ಮಧ್ಯೆ ಕಳೆದ ಕ್ಷಣಗಳು ಜೀವನಕ್ಕೆ ಪಾಠ ಹೇಳಿಕೊಟ್ಟಿವೆ. ಕೊರೊನಾದಿಂದ ಗುಣಮುಖರಾಗಿದ್ದ ನನ್ನ ಸ್ನೇಹಿತರ ಧೈರ್ಯದ ಮಾತುಗಳು ನನ್ನ ದಿಗ್ಬ್ರಮೆಯಿಂದ ದೂರ ಮಾಡಿದವು. ದೇವರ ಧ್ಯಾನ, ಪುಸ್ತಕ ನನ್ನ ಮನಶಾಂತಿಯನ್ನು ಕಾಪಾಡಿತು. ಆದರೆ ಭಯ ಪಡದೆ ಫೋನ್ ದೂರ ಇಟ್ಟು ನಮ್ಮ ಆರೋಗ್ಯದ ಬಗ್ಗೆ ನಾವು ಕಾಳಜಿವಹಿಸಿದರೆ ಕೊರೊನಾ ಕೂಡ ದೊಡ್ಡ ರೋಗವಲ್ಲ. ಅದನ್ನು ನಮಗೆ ನಾವೇ ಸೆಲ್ಫ್ ಕ್ಯಾರಂಟೈನ್ ಮಾಡಿಕೊಂಡು ಓಡಿಸಬಹುದಾದ ರೋಗ. ಹೀಗಾಗಿ ಯಾರೂ ಭಯ ಪಡಬೇಡಿ ಧೈರ್ಯದಿಂದ ಕೊರೊನಾ ವಿರುದ್ಧ ಹೋರಾಡಿ ಎಂದು ಸಮೀರ್ ಸಲಹೆ ನೀಡಿದ್ದಾರೆ.

ಹವಮಾನ ಬದಲಾವಣೆಯ ಲಕ್ಷಣಗಳಿಗೂ ಕೊರೊನಾ ಲಕ್ಷಣಗಳಿಗೂ ಇದೇ ಸಾಮ್ಯತೆ ಮುಖ್ಯವಾಗಿ ಕೊರೊನಾ ವೈರಸ್ ತಗುಲಿದೆ ಎಂದು ತಿಳಿಯುವುದೇ ನಮ್ಮಲ್ಲಿಯಾಗುವ ಕೆಲ ಬದಲಾವಣೆಗಳಿಂದ. ಅಂದ್ರೆ ಮೊದಲಿಗೆ ಗಂಟಲು ನೋವು, ಬಳಿಕ ಶೀತ, ಜ್ವರ, ಮೈ-ಕೈ ನೋವು, ಸ್ವಾದ ಕಳೆದುಕೊಳ್ಳುವುದು, ವಾಸನೆ ತಿಳಿಯದೇ ಇರುವುದು ಇತ್ಯಾದಿ. ಇವೆಲ್ಲಾ ಕೊರೊನಾ ಲಕ್ಷಣಗಳು. ಆದ್ರೆ ಇದೇ ಲಕ್ಷಣಗಳು ಸಾಮಾನ್ಯ ಜ್ವರ ಮತ್ತು ಆರೋಗ್ಯ ಹಾಳಾದಾಗಲೂ ಇದೇ ಸಮಸ್ಯೆಗಳು ಎದುರಾಗುತ್ತವೆ. ಮುಖ್ಯವಾಗಿ ಕೊರೊನಾ ವೈರಸ್ ಕೂಡ ಶೀತದಂತೆ ಒಂದು ವೈರಸ್ ಅಷ್ಟೇ ಬಂದು ಹಿಂಸಿಸಿ ಹೋಗುತ್ತದೆ. ಹೆಚ್ಚಾಗಿ ತಲೆ ಕೆಡಿಸಿಕೊಳ್ಳಬಾರದು. ಹಾಗಂತ ಹೇಳಿ ನಿರ್ಲಕ್ಷ್ಯವೂ ಒಳ್ಳೆಯದಲ್ಲ. ಅದಕ್ಕೆ ತಕ್ಕದಾದ ತಯಾರಿ ಮಾಡಿದರೆ ಸಾಕು. ಸರಿಯಾದ ಸಮಯಕ್ಕೆ ಊಟ ಮಾಡಿ, ವ್ಯಾಯಾಮ ಸೇರಿದಂತೆ ನಮ್ಮ ದೇಹವನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಬೇಕು. ಆಗ ರೋಗ ನಿರೋಧಕ ಶಕ್ತಿ ಹೆಚ್ಚಿದ್ದರೆ ಯಾವ ವೈರಸ್ ಕೂಡ ನಿಮ್ಮನ್ನು ಮುಟ್ಟಲಾಗದು. ಆದ್ರೆ ಭಯದ ಕೂಪಕ್ಕೆ ಬಿದ್ದರೆ ಸಾವು ಖಚಿತ.

ಭಯಕ್ಕೆ ಜೀವ ತೆಗೆಯುವ ಶಕ್ತಿ ಇದೆಯಂತೆ Jo Dara Wo Mara ಎಂಬ ಮಾತನ್ನು ನೀವು ಹೇಳಿರುತ್ತೀರಿ. ಅಂದರೆ ಯಾರು ಭಯಪಡುತ್ತರೋ ಅವರಿಗೆ ಸಾವು ಖಚಿತಾ ಅಂತನೇ ಅರ್ಥ. ಭಯ ಎಂಬುವುದು ಎಂತವರ ಗುಂಡಿಗೆಯನ್ನೂ ಅಲುಗಾಡಿಸಿಬಿಡುತ್ತದೆ. ಎಷ್ಟೂ ಬಾರಿ ನಮ್ಮ ಜೊತೆ ಯಾರೂ ಇಲ್ಲ ಎಂದರೂ ಭಯ ನಮ್ಮನ್ನು ಯಾರೂ ನೋಡುತ್ತಿದ್ದಾರೆ ಎಂದೇ ಅನಿಸುತ್ತದೆ. ಹಾಗಾಗೆ ಹೇಳೋದೇ ಧೈರ್ಯಂ ಸರ್ವತ್ರ ಸಾಧನಂ ಅಂತ. ಧೈರ್ಯ ಎಲ್ಲವನ್ನೂ ಜಯಿಸುವ ಸಾಧನ. ಭಯ ಬಿಟ್ಟು ಧೈರ್ಯದಿಂದಿರಬೇಕು. ಇನ್ನು ಭಯಕ್ಕೆ ಉತ್ತಮ ಉದಾಹರಣೆ ಎಂದರೆ.. ಅಮೆರಿಕಾದಲ್ಲಿ ಮರಣದಂಡನೆಗೆ ಒಳಗಾಗಿದ್ದ ಖೈದಿಯ ಮೇಲೆ ಒಂದು ಪ್ರಯೋಗ ನಡೆಸಲು ಕೆಲವು ವಿಜ್ಞಾನಿಗಳು ತೀರ್ಮಾನಿಸಿದ್ರು. ನಂತರ ಖೈದಿಗೆ ಗಲ್ಲಿಗೆ ಹಾಕಬೇಕಿದ್ದ ದಿನ ಆತನಿಗೆ ನೇಣು ಹಾಕುವ ಬದಲು ದೊಡ್ಡ ಹಾವಿನಿಂದ ಕಚ್ಚಿಸಿ ಸಾಯಿಸಲಾಗುತ್ತದೆ ಎಂದು ತಿಳಿಸಿದ್ರು. ಮುಂದೆ ನಡೆದಿದ್ದೇ ವಿಪರ್ಯಾಸ..

ನೇಣು ಹಾಕುವ ದಿನ ಆ ಖೈದಿಯ ಕಣ್ಣ ಮುಂದೆ ದೊಡ್ಡ ವಿಷಕಾರಿ ಹಾವನ್ನ ತೋರಿಸಲಾಗುತ್ತೆ. ಬಳಿಕ ಆತನ ಕಣ್ಣಿಗೆ ಬಟ್ಟೆ ಕಟ್ಟಿ ಒಂದು ಚೇರ್ ಮೇಲೆ ಕೂರಿಸಲಾಗುತ್ತೆ. ಇಷ್ಟೆಲ್ಲಾ ಆದ ನಂತರ ಹಾವನ್ನು ಬಿಟ್ಟು ಒಂದು ಬಟ್ಟೆ ಪಿನ್ನಿಂದ ಆತನಿಗೆ ಚುಚ್ಚಲಾಗುತ್ತೆ.

ಆದರೆ ಆಶ್ಚರ್ಯವೆಂದರೆ ಪಿನ್ ಚುಚ್ಚಿದ ಕೇವಲ 2 ಸೆಕೆಂಡ್ಗಳಲ್ಲಿ ಖೈದಿ ಮೃತಪಟ್ಟಿದ್ದಾನೆ. ಆತನ ಮರಣೋತ್ತರ ವರದಿಯಲ್ಲಿ ಖೈದಿಯ ದೇಹದಲ್ಲಿ ಭಯವೆಂಬ ವಿಷವಿದ್ದದ್ದು ಸಾಬೀತಾಗಿದೆ. ಹಾಗಾದ್ರೆ ಆತನ ದೇಹದಲ್ಲಿ ವಿಷ ಎಲ್ಲಿಂದ ಬಂತು ಎಂಬ ಪ್ರಶ್ನೆಗೆ ಉತ್ತರ ಮಾನಸಿಕ ಭಯವೇ ಆ ಖೈದಿಯನ್ನು ಸಾವಿನ ದವಡೆಗೆ ನೂಕಿದೆ ಎಂಬುವುದು ತಿಳಿದು ಬಂದಿದೆ. ಅಂದರೆ ಮಾನಸಿಕವಾಗಿ ಭಯಕ್ಕೆ ಒಳಗಾಗುವ ವ್ಯಕ್ತಿ ಭಯವೆಂಬ ವಿಷದಿಂದಲೇ ಸಾಯುತ್ತಾನೆ. ಹಾಗಾಗಿ ನೀವು ಕೂಡ ಕೊರೊನಾ ಎಂಬ ಭಯಕ್ಕೆ ಒಳಗಾಗಬೇಡಿ. ಮಾನಸಿಕವಾಗಿ ಸದೃಢರಾಗಿ. ನೆಗೆಟಿವ್ ಅಲೋಚನೆಗಳು ಮನಸ್ಸನ್ನು ಕುಗ್ಗಿಸುತ್ತವೆ. ಆ ಖೈದಿಯ ತಪ್ಪು ಆಲೋಚನೆ ಕೇವಲ ಪಿನ್ನಿಂದ ಆತನನ್ನು ಸಾಯುವಂತೆ ಮಾಡಿದೆ. ಇದೇ ರೀತಿ ಭಯಕ್ಕೆ ಸಾವು ಕಂಡವರ ಅನೇಕ ಉದಾಹರಣೆಗಳು ನಮಗೆ ಸಿಗುತ್ತವೆ. ಭಯಕ್ಕಿಂತ ದೊಡ್ಡ ಶತ್ರು ಬೇರೊಂದಿಲ್ಲ.

ಪ್ಲೇಗ್, ಸಿಡುಬು ಎದುರಿಸಿದ್ದ ನಮಗೆ ಕೊರೊನಾ ದೊಡ್ಡದೆ ಇನ್ನು ಈ ಬಗ್ಗೆ ತಮ್ಮ ಅನುಭವ ಹಂಚಿಕೊಂಡ ಖಾಸಗಿ ಕಂಪನಿ ಉದ್ಯೋಗಿ ಆನಂದ್ ತಾವು ಕಳೆದ ಕ್ಯಾರೆಂಟೈನ್ ದಿನಗಳನ್ನು ಅರಿವಿನ ದಿನಗಳು ಎಂದು ಹೇಳಿಕೊಂಡಿದ್ದಾರೆ. ಮೊದಲಿಗೆ ಕೊರೊನಾ ಪಾಸಿಟಿವ್ ರಿಪೋರ್ಟ್ ನೋಡಿ ನೆಲವೇ ಕುಸಿದಂತಾಯ್ತು. ಬಳಿಕ ಕುಟುಂಬದಿಂದ ದೂರ, ಯಾರ ಸಂಪರ್ಕವೂ ಇಲ್ಲ. ಮಕ್ಕಳ ಮುಖ ನೋಡದೆ ಅವರು ಕಾಣಿಸಿಕೊಂಡಾಗ ಮರೆಯಾಗುತ್ತ.. ನನಗೆ ಯಾರೂ ಇಲ್ಲ, ಈ ಜೀವನ ನಶ್ವರ ಎನ್ನಿಸತೊಡಗಿತ್ತು. ಕೊರೊನಾ ನನ್ನ ಶತ್ರುವಿಗೂ ಬರಬಾರದು ಎಂದು ಅಂದುಕೊಳ್ಳುತ್ತಿದ್ದೆ. ಮಾನಸಿಕವಾಗಿ ಕುಗ್ಗಿದ್ದೆ. ದೇಹದಲ್ಲಿ ಆಗುವ ಆಯಾಸ, ಜ್ವರ, ಕೆಮ್ಮು ಬಂದಾಗ ನನ್ನ ಜೊತೆಯಲ್ಲಿ ಕೂತು ಯೋಗ ಕ್ಷೇಮ ವಿಚಾರಿಸಲು ಯಾರು ಇಲ್ಲ ಎಂದುಕೊಂಡಾಗ ಆತ್ಮಹತ್ಯೆ ಮಾಡಿಕೊಳ್ಳುವಂತೆ ಅನ್ನಿಸುತ್ತಿತ್ತು.

ಆದರೆ ಆಲ್ ವೇಸ್ ಪಾಸಿಟಿವ್ ಆಗಿದ್ದ ನಾನು ಕೊರೊನಾ ಎದುರಿಸಲು ಸಿದ್ದನಾದೆ. ಮನೆಯಲ್ಲೇ ಒಂದು ರೂಮಿನಲ್ಲಿ ವೈದ್ಯರು ಹೇಳಿದ ಮಾತ್ರೆಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಂಡು ಪಾಸಿಟಿವ್ ಯೋಚನೆಗಳನ್ನೇ ಮಾಡುತ್ತಿದ್ದೆ. ಜ್ಞಾನ ವೃದ್ಧಿಸುವ ವಿಡಿಯೋಗಳು, ಡ್ಯಾನ್ಸ್, ನನಗೆ ಇಷ್ಟವಾದ ವಿಷಯಗಳ ಬಗ್ಗೆ ಹೆಚ್ಚಿನ ಜ್ಞಾನವನ್ನು ಬೆಳೆಸಿಕೊಂಡೆ. ನನಗೆ ಸಿಕ್ಕ ಏಕಾಂತದ ದಿನಗಳನ್ನು ಸದುಪಯೋಗ ಮಾಡಿಕೊಂಡೆ. ಭಾರತೀಯರು ಗಟ್ಟಿಗಿತ್ತಿಯರು ಈ ಹಿಂದೆಯೂ ಬಂದಂತಹ ಅನೇಕ ದೊಡ್ಡ ದೊಡ್ಡ ರೋಗಗಳನ್ನೂ ಓಡಿಸಿ ಜೀವನ ಕಟ್ಟಿಕೊಂಡಿದ್ದಾರೆ. ನಮಗೂ ಭಯ ಪಡುವ ಅವಶ್ಯಕತೆ ಇಲ್ಲ. ಆದರೆ ಭಯವೆಂಬ ವಿಷ ಮೆದುಳಿಗೆ ಇಳಿಯದಂತೆ ನೋಡಿಕೊಳ್ಳಬೇಕು. ಭಯ ಆವರಿಸಿದಾಗಲೇ ಸಾವು ಸಂಭವಿಸುವುದು ಎಂದು ಆನಂದ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಇನ್ನು ಕೊರೊನಾ ದೇಶಕ್ಕೆ ಕಾಲಿಟ್ಟಿನಾಗಿನಿಂದ ಅದೆಷ್ಟೂ ಮಂದಿ ಕೊರೊನಾ ಭಯಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನಸಿಕ ಖಿನ್ನತೆಗೆ ಒಳಗಾಗಿ ಜೀವ ಬಿಟ್ಟಿದ್ದಾರೆ. ಮೊಮ್ಮಗನಿಗೆ ಕೊರೊನಾ ತಗುಲಬಾರದೆಂಬ ಕಾರಣಕ್ಕೆ ಅಜ್ಜಿ-ತಾತ ಆತ್ಮಹತ್ಯೆ ಮಾಡಿಕೊಂಡದ್ದು, ಸೋಂಕಿತರು ನೇಣಿಗೆ ಶರಣಾದಂತಹ ಅದೆಷ್ಟೋ ಘಟನೆಗಳು ನಡೆದಿವೆ. ಇವುಕೆಲ್ಲ ಭಯವೇ ಕಾರಣ.

ಭಯವಾದಾಗ ನಮ್ಮಲ್ಲಿ ಆಗುವ ಬದಲಾವಣೆ ಭಯವಾದಾಗ ನಮ್ಮ ದೇಹವು ಎಪಿನೆಫ್ರಿನೆ, ಅಡ್ರಿನಾಲಿನ್ ಅನ್ನು ಬಿಡುಗಡೆ ಮಾಡುತ್ತದೆ. ಮತ್ತು ನಮ್ಮ ಹೃದಯ ಬಡಿತವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಮತ್ತು ರಕ್ತದೊತ್ತಡವು ಹೆಚ್ಚಾಗುತ್ತದೆ, ಕಣ್ಣುಗಳೂ ಹಿಗ್ಗುತ್ತವೆ. ಭಯವಾದಾಗ ನಕಾರಾತ್ಮಕ ಯೋಚನೆಗಳು ಹೆಚ್ಚಾಗಿ ನಮ್ಮ ಜೊತೆ ಕೆಟ್ಟ ಘಟನೆಗಳು ನಡೆಯುತ್ತವೆ. ಮಾನಸಿಕ ಆರೋಗ್ಯ ಬಿಗಡಾಯಿಸುತ್ತದೆ. ಭಯವು ನಮ್ಮ ಮಿದುಳಿನಲ್ಲಿರುವ ಕೆಲವು ರಾಸಾಯನಿಕ ಪ್ರತಿಕ್ರಿಯೆಗಳನ್ನು ಒಳಗೊಂಡಿರುತ್ತದೆ. ಇದರಿಂದಾಗಿ ದೆವ್ವದ ಸಿನಿಮಾ ನೋಡಿದಾಗ ಭಯವಾಗುವುದ ಹಾಗೂ ಸ್ನೇಹಿತರ ಜೊತೆಯಿದ್ದಾಗ ಸಂತೋಷವಾಗುವಂತೆ ಬದಲಾವಣೆಗಳು ನಮ್ಮಲ್ಲಿ ಆಗುತ್ತವೆ.

ಹೀಗಾಗಿ ಕೇವಲ ಒಳ್ಳೆಯದನ್ನೇ ಯೋಚಿಸಿ. ಆಗ ಒಳ್ಳೆಯದೇ ಆಗುತ್ತದೆ. ಲಾಕ್ಡೌನ್ ಸಮಯದಲ್ಲಿ ನೀವು ಮನೆಯಲ್ಲಿ ಇರುವಾಗ ನಿಮಗೆ ಹೆಚ್ಚು ಖುಷಿ ಕೊಡುವ ಕೆಲಸಗಳನ್ನು ಮಾಡಿ. ಒಳ್ಳೆಯ ಪುಸ್ತಕ ಓದುವುದು, ಸಿನಿಮಾ ನೋಡುವುದು. ಚಿತ್ರ ಬಿಡಿಸುವುದು, ಸ್ನೇಹಿತರೊಂದಿಗೆ ಸಂತೋಷದ ಸಂಗತಿಗಳನ್ನು ನೆನಪಿಸಿಕೊಂಡು ಮಾತನಾಡುವುದು ಇತ್ಯಾದಿ. ಈ ರೀತಿ ಕೇವಲ ಒಳ್ಳೆಯದರ ಬಗ್ಗೆ ಚಿಂತಿಸಿ ಲಾಕ್ಡೌನ್ ಸಮಯವನ್ನು ಹೊಸ ಅನ್ವೇಷಣೆ ಅಥವಾ ಹೊಸದನ್ನು ಕಲಿಯಲು ಬಳಸಿಕೊಳ್ಳಿ. ಕೆಲಸವಿಲ್ಲ, ಸಮಸ್ಯೆಗಳು, ಸಾವು-ನೋವಿಗಳೆಂದು ಚಿಂತಿಸಿ ಮಾನಸಿಕ ಖಿನ್ನತೆಗೆ ಒಳಗಾಗಬೇಡಿ. ಪ್ರಸಕ್ತ ಕಷ್ಟದ ದಿನಗಳು ಆವರಿಸಿವೆ. ಆದ್ರೆ ಒಂದಲ್ಲ ಒಂದು ದಿನ ಅವು ತೀರಿಯೇ ತೀರುತ್ತವೆ. ಮತ್ತೆ ಸಂತೋಷ, ಆನಂದದ ದಿನಗಳು ಮರಳಿ ಬಂದೇ ಬರುತ್ತವೆ. ಆದ್ರೆ ಆ ದಿನಗಳನ್ನು ನಾವು ಅನುಭವಿಸಲು ಬದುಕಿರಬೇಕು. ಹೀಗಾಗಿ ಒಳ್ಳೆದನ್ನೇ ಚಿಂತಿಸಿ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ. ಕೊರೊನಾ ಓಡಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ, ಯಾವಾಗಲೂ ಬಿ ಪಾಸಿಟಿವ್ ಆಗಿರಿ. ಬಳ್ಳೆಯದೇ ಆಗುತ್ತದೆ. ಕೊರೊನಾ ಬಂದರೂ ಕೊರೊನಾ ಓಡಿಸುವ ಶಕ್ತಿ ನಮ್ಮ ಪಾಸಿಟಿವ್ ಥಿಂಕಿಂಗ್ಗೆ ಇದೆ.

ಇದನ್ನೂ ಓದಿ: ಹೆದರುವುದು ಬೇಡ, ಆತ್ಮಸ್ಥೈರ್ಯದಿಂದಿರಿ; ಕೊರೊನಾ ಗೆದ್ದು ಬಂದ ಒಂದೇ ಕುಟುಂಬದ 17 ಮಂದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada