AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ಜಾಂಟಿ ಸಿರಾಜ್... ಅದ್ಭುತ ಕ್ಯಾಚ್​ಗೆ ಸಚಿನ್ ಬಹುಪರಾಕ್

VIDEO: ಜಾಂಟಿ ಸಿರಾಜ್… ಅದ್ಭುತ ಕ್ಯಾಚ್​ಗೆ ಸಚಿನ್ ಬಹುಪರಾಕ್

ಝಾಹಿರ್ ಯೂಸುಫ್
|

Updated on: Jul 07, 2025 | 12:31 PM

Share

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 587 ರನ್​ ಕಲೆಹಾಕಿದರೆ, ಇಂಗ್ಲೆಂಡ್ 407 ರನ್​ಗಳಿಸಿತು. ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ 427 ರನ್​ಗಳಿಸಿ ಟೀಮ್ ಇಂಡಿಯಾ ಡಿಕ್ಲೇರ್ ಘೋಷಿಸಿದೆ. ಅದರಂತೆ ಅಂತಿಮ ಇನಿಂಗ್ಸ್​ನಲ್ಲಿ 608 ರನ್​ಗಳ ಗುರಿ ಪಡೆದ ಇಂಗ್ಲೆಂಡ್ 271 ರನ್​ಗಳಿಗೆ ಆಲೌಟ್ ಆಗುವ ಮೂಲಕ 336 ರನ್​ಗಳಿಂದ ಹೀನಾಯವಾಗಿ ಸೋಲೊಪ್ಪಿಕೊಂಡಿದೆ.

ಎಡ್ಜ್​​ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರ ಮೊಹಮ್ಮದ್ ಸಿರಾಜ್ ಹಿಡಿದ ಅದ್ಭುತ ಕ್ಯಾಚ್ ವಿಡಿಯೋ ವೈರಲ್ ಆಗಿದೆ. ಈ ಪಂದ್ಯದಲ್ಲಿ 4ನೇ ಇನಿಂಗ್ಸ್​ನ 64ನೇ ಓವರ್​ನ 5ನೇ ಎಸೆತವನ್ನು ಜೋಶ್ ಟಂಗ್ ಡೀಪ್ ಮಿಡ್​ ವಿಕೆಟ್​ನತ್ತ ಬಾರಿಸಲು ಯತ್ನಿಸಿದ್ದರು. ಈ ವೇಳೆ ಸಿಲ್ಲಿ ಮಿಡ್ ಆನ್​ನಲ್ಲಿ ಫೀಲ್ಡಿಂಗ್​ನಲ್ಲಿದ್ದ ಮೊಹಮ್ಮದ್ ಸಿರಾಜ್ ಅದ್ಭುತ ಡೈವಿಂಗ್​ನೊಂದಿಗೆ ಚೆಂಡನ್ನು ಹಿಡಿದರು. ಈ ಮೂಲಕ ಸಿರಾಜ್ ಫೀಲ್ಡಿಂಗ್ ಮೂಲಕ ಕೂಡ ಕಮಾಲ್ ಮಾಡಿದರು.

ಇನ್ನು ಈ ಪಂದ್ಯದಲ್ಲಿ 336 ರನ್​ಗಳ ಭರ್ಜರಿ ಜಯ ಸಾಧಿಸಿರುವ ಟೀಮ್ ಇಂಡಿಯಾ ಪ್ರದರ್ಶನವನ್ನು ಶ್ಲಾಘಿಸಿದ ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಸಿರಾಜ್ ಅವರ ಕ್ಯಾಚ್ ಅನ್ನು ವಿಶೇಷವಾಗಿ ಹೊಗಳಿದರು. ಅಲ್ಲದೆ ಸಿರಾಜ್​ ಅವರಿಗೆ ಮೊಹಮ್ಮದ್ ‘ಜಾಂಟಿ’ ಸಿರಾಜ್ ಎಂದು ನಾಮಕರಣವನ್ನು ಮಾಡಿದ್ದಾರೆ. ಕ್ರಿಕೆಟ್ ಅಂಗಳದ ಅತ್ಯಂತ ಶ್ರೇಷ್ಠ ಫ್ರೀಲ್ಡರ್ ಎನಿಸಿಕೊಂಡಿರುವ ಸೌತ್ ಆಫ್ರಿಕಾದ ಜಾಂಟಿ ರೋಡ್ಸ್​ ಅವರಂತೆ ಸಿರಾಜ್ ಫೀಲ್ಡಿಂಗ್ ಮಾಡಿದ್ದಾರೆ ಎಂದು ವರ್ಣಿಸಲು ಇಲ್ಲಿ ಸಚಿನ್ ಜಾಂಟಿ ಎಂಬ ಪದ ಬಳಸಿದ್ದಾರೆ.