AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೆಮ್​ಡಿಸಿವಿರ್ ಅಕ್ರಮ ಮಾರಾಟ ಕೇಸ್​ನಲ್ಲಿ ಲಂಚ ವಸೂಲಿ ಆರೋಪ; ಸಂಜಯ್‌ನಗರ ಠಾಣೆ ಸಿಬ್ಬಂದಿ ವಿರುದ್ಧ ಗಂಭೀರ ಆರೋಪ

ರೆಮ್‌ಡಿಸಿವಿರ್‌ ಅಕ್ರಮ ಮಾರಾಟ ಕೇಸ್‌ನಲ್ಲಿ ನಾಲ್ವರ ಸೆರೆಯಾಗಿತ್ತು. ನಾಲ್ಕು ದಿನಗಳ ಹಿಂದೆ ಠಾಣೆ ಸಿಬ್ಬಂದಿ ನಾಲ್ವರನ್ನು ಬಂಧಿಸಿದ್ದರು.

ರೆಮ್​ಡಿಸಿವಿರ್ ಅಕ್ರಮ ಮಾರಾಟ ಕೇಸ್​ನಲ್ಲಿ ಲಂಚ ವಸೂಲಿ ಆರೋಪ;  ಸಂಜಯ್‌ನಗರ ಠಾಣೆ ಸಿಬ್ಬಂದಿ ವಿರುದ್ಧ ಗಂಭೀರ ಆರೋಪ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ganapathi bhat

Updated on:Aug 21, 2021 | 10:17 AM

ಬೆಂಗಳೂರು: ರೆಮ್‌ಡಿಸಿವಿರ್‌ ಅಕ್ರಮ ಮಾರಾಟ ಕೇಸ್‌ನಲ್ಲಿ ಲಂಚ ವಸೂಲಿ ಆರೋಪದಲ್ಲಿ ಸಂಜಯ್‌ನಗರ ಠಾಣೆಯ ಸಿಬ್ಬಂದಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಖಾಸಗಿ ಆಸ್ಪತ್ರೆ ವೈದ್ಯರಿಂದ ದೂರು ಹಿನ್ನೆಲೆಯಲ್ಲಿ ಸಂಜಯ್‌ನಗರ ಠಾಣೆ ಇನ್ಸ್‌ಪೆಕ್ಟರ್ ಕಾತ್ಯಾಯಿನಿ ಎಂಬವರನ್ನು ಎತ್ತಂಗಡಿ ಮಾಡಲಾಗಿದೆ. ಠಾಣೆಯ ಮೂವರು ಕ್ರೈಂ ಪೊಲೀಸ್ ಸಿಬ್ಬಂದಿ ಸಹ ಎತ್ತಂಗಡಿ ಮಾಡಲಾಗಿದೆ.

ಪ್ರಕರಣದ ಬಗ್ಗೆ ಎಸಿಪಿ ರೀನಾ ಸುವರ್ಣರಿಂದ ತನಿಖೆ ನಡೆಯುತ್ತಿದೆ. ತನಿಖೆವರೆಗೂ ಡಿಸಿಪಿ ಕಚೇರಿಯಲ್ಲಿ ಇನ್ಸ್‌ಪೆಕ್ಟರ್ ಕರ್ತವ್ಯ ನಿರ್ವಹಿಸಲಿದ್ದಾರೆ. ರೆಮ್‌ಡಿಸಿವಿರ್‌ ಅಕ್ರಮ ಮಾರಾಟ ಕೇಸ್‌ನಲ್ಲಿ ನಾಲ್ವರ ಸೆರೆಯಾಗಿತ್ತು. ನಾಲ್ಕು ದಿನಗಳ ಹಿಂದೆ ಠಾಣೆ ಸಿಬ್ಬಂದಿ ನಾಲ್ವರನ್ನು ಬಂಧಿಸಿದ್ದರು.

ಕೇಸ್‌ ಸಂಬಂಧ ವೈದ್ಯ ನಾಗರಾಜ್‌ನನ್ನು ಠಾಣೆಗೆ ಕರೆಸಿ ಹಲ್ಲೆ ಮಾಡಲಾಗಿತ್ತು. ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ನೀಡಿ 5.5 ಲಕ್ಷ ವಸೂಲಿ ಆರೋಪದಲ್ಲಿ ವೈದ್ಯನಿಗೆ ಹಲ್ಲೆ ಮಾಡಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪ್ರಕರಣ ಸಂಬಂಧ ಉತ್ತರ ಡಿಸಿಪಿಗೆ ವೈದ್ಯರು ದೂರು ನೀಡಿದ್ದರು.

ಬ್ಲ್ಯಾಕ್ ಫಂಗಸ್ ಔಷಧ ನೀಡುವುದಾಗಿ ಹೇಳಿ ವಂಚನೆ ಬ್ಲ್ಯಾಕ್​ ಫಂಗಸ್​ಗೆ ಮೆಡಿಸಿನ್, ಇಂಜೆಕ್ಷನ್​ ಪೂರೈಸುವುದಾಗಿ ಹೇಳಿ ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಕನಾ ಮೆಡಿಕಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಹೆಸರಿನಲ್ಲಿ ವಂಚನೆ ಮಾಡಲಾಗಿದೆ. ಬ್ಲ್ಯಾಕ್​ ಫಂಗಸ್​ನಿಂದ 52 ವರ್ಷ ವಯಸ್ಸಿನ ಕಲೀಂ ಬಳಲುತ್ತಿದ್ದರು. ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಯಲ್ಲಿ ಕಲೀಂ ಚಿಕಿತ್ಸೆ ಪಡೆಯುತ್ತಿದ್ದರು.

ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ನಂಬರ್​ ಸಂಪರ್ಕಿಸಿದ್ದರು. ಅಕನಾ ಮೆಡಿಕಲ್ ಪ್ರೈವೇಟ್ ಲಿಮಿಟೆಡ್​ನಲ್ಲಿ ಔಷಧ ಲಭ್ಯವಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಕಲೀಂ ಸಂಬಂಧಿಕರು 2 ಲಕ್ಷ ರೂಪಾಯಿ ವರ್ಗಾಯಿಸಿಕೊಂಡಿದ್ದರು. ಹೀಗೆ ಸುಳ್ಳು ಹೇಳಿ ಹಣ ಪಡೆದು ಮೋಸ ಮಾಡಿದ್ದಾರೆ. ಹಣ ಕಳೆದುಕೊಂಡವರಿಂದ ಎಚ್​ಎಸ್​ಆರ್ ಲೇಔಟ್​​ನ ಸೆನ್ ಠಾಣೆಗೆ ದೂರು ದಾಖಲಿಸಲಾಗಿದೆ.

ತುಮಕೂರು: ಕೊವಿಡ್ ಚಿಕಿತ್ಸೆಯಲ್ಲಿ ಅಶ್ವಿನಿ ಆಸ್ಪತ್ರೆ ನಿರ್ಲಕ್ಷ್ಯ ಕೊರೊನಾ ಚಿಕಿತ್ಸೆಯಲ್ಲಿ ಅಶ್ವಿನಿ ಆಸ್ಪತ್ರೆ ನಿರ್ಲಕ್ಷ್ಯವಹಿಸಿದೆ ಎಂಬ ದೂರು ಮತ್ತೆ ಕೇಳಿಬಂದಿದೆ. ಜಿಲ್ಲಾಡಳಿತ ಎಚ್ಚರಿಸಿದ್ರೂ ಅಶ್ವಿನಿ ಆಸ್ಪತ್ರೆ ಮತ್ತೆ ನಿರ್ಲಕ್ಷ್ಯ ವಹಿಸಿದೆ. ಐಸಿಯು ಬೆಡ್‌ ಇದೆ ಎಂದು ವೃದ್ಧೆಯನ್ನು ಕರೆಸಿದ್ದ ಸಿಬ್ಬಂದಿ, ಮಧ್ಯಾಹ್ನದಿಂದ ವೃದ್ಧೆಗೆ ಬೆಡ್‌ ನೀಡದೆ ಸಮಸ್ಯೆ ತಂದೊಂಡಿದ್ದಾರೆ. ತುಮಕೂರಿನ ಅಶ್ವಿನಿ ಆಸ್ಪತ್ರೆ ವಿರುದ್ಧ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ವೃದ್ಧೆ, ಆಸ್ಪತ್ರೆ ಬಳಿ ಆಟೋದಲ್ಲಿ ಕಾಯುತ್ತಿದ್ದರು. ತುಮಕೂರು ತಾಲೂಕಿನ ಮುತ್ತಸಂದ್ರದ 70 ವರ್ಷದ ವೃದ್ಧೆ ನಿನ್ನೆ ಜಿಲ್ಲಾಸ್ಪತ್ರೆಗೆ ಬಂದು ಬೆಡ್‌ ಇಲ್ಲದಿದ್ದಕ್ಕೆ ವಾಪಸಾಗಿದ್ದರು. ಇಂದು ಬೆಡ್‌ ಇದೆಯೆಂದು ಆಸ್ಪತ್ರೆ ಸಿಬ್ಬಂದಿ ಕರೆ ಮಾಡಿದ್ದರು. ಅಶ್ವಿನಿ ಆಸ್ಪತ್ರೆಯ ಸಿಬ್ಬಂದಿಯಿಂದ ಅಮಾನವೀಯ ವರ್ತನೆಗೆ ಮತ್ತೆ ದೂರು ಕೇಳಿಬಂದಿದೆ. ಜಿಲ್ಲಾಡಳಿತ ಎಚ್ಚರಿಸಿದ್ರೂ ಎಚ್ಚೆತ್ತುಕೊಳ್ಳದ ಆಡಳಿತ ಮಂಡಳಿ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.

ಇದನ್ನೂ ಓದಿ: ಕೊವಿಶೀಲ್ಡ್ ಲಸಿಕೆ ಪಡೆದ ಬಳಿಕ ಈ ಸಮಸ್ಯೆಗಳು ಕಂಡುಬಂದರೆ ಎಚ್ಚರವಹಿಸಿ; ಕೇಂದ್ರ ಆರೋಗ್ಯ ಇಲಾಖೆ ಸೂಚನೆ

ರೆಮ್​ಡಿಸಿವಿರ್, ಆಕ್ಸಿಜನ್ ಸಿಲಿಂಡರ್ ನೀಡುವುದಾಗಿ ವಂಚನೆ; ಅಪರಿಚಿತ ಸಂಖ್ಯೆಗೆ ಹಣ ಕಳಿಸುವ ಮುನ್ನ ಎಚ್ಚರ

Published On - 10:32 pm, Mon, 17 May 21