ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್ಪಿ ಹೇಳಿದ್ದಿಷ್ಟು
ಪುತ್ತೂರು ತಾಲೂಕಿನ ಬಿರುಮಲೆಗುಡ್ಡದಲ್ಲಿ ವಿಹರಿಸುತ್ತಿದ್ದ ಜೋಡಿಗೆ ಪಾನಮತ್ತ ಯುವಕರು ಕಿರುಕುಳ ನೀಡಿದ ಘಟನೆ ನಡೆದಿದೆ. ಜೋಡಿಯ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಕಿರುಕುಳ ನೀಡಲಾಗಿದೆ. ಯುವತಿಯ ಹೆಲ್ಮೆಟ್ ಕಸಿದು ಅವಮಾನಿಸಲಾಗಿದೆ. ಪುತ್ತೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಘಟನೆಯಿಂದ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ತಾಲೂಕಿನ ಬಿರುಮಲೆಗುಡ್ಡದಲ್ಲಿ ವಿಹರಿಸುತ್ತಿದ್ದ ಜೋಡಿಗೆ ಪಾನಮತ್ತರಾಗಿ ಬಂದ ಯುವಕರು ಕಿರುಕುಳ ನೀಡಿದ್ದಾರೆ. ಜೋಡಿಯ ಫೋಟೋ, ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಕಿರುಕುಳ ನೀಡಿದ್ದಾರೆ. ಅಲ್ಲದೆ, ಯುವತಿಯ ಹೆಲ್ಮೆಟ್ ಕಸಿದುಕೊಂಡು ಆಕೆಗೆ ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿ, ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಕಿಡಿಗೇಡಿಗಳಿಂದ ತಪ್ಪಿಸಿಕೊಂಡು ಜೋಡಿ ಬಚಾವ್ ಆಗಿದೆ. ದೌರ್ಜನ್ಯ ನಡೆಸಿದ ಇಬ್ಬರನ್ನು ಪುತ್ತೂರು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಡಬ ನಿವಾಸಿ ಪುರುಷೋತ್ತಮ (43), ಪುತ್ತೂರು ನಿವಾಸಿ ರಾಮಚಂದ್ರ (38) ಬಂಧಿತರು. ಸಂತ್ರಸ್ಥ ಬಾಲಕನ ತಂದೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ದಕ್ಷಿಣ ಕನ್ನಡ ಎಸ್.ಪಿ ಡಾ. ಅರುಣ್.ಕೆ ಹೇಳಿದ್ದಿಷ್ಟು.
