Davangere Valmiki Jatre: ಸುದೀಪ್ ನೋಡಲು ಮುಗಿಬಿದ್ದ ಅಭಿಮಾನಿಗಳಿಂದ ಕುರ್ಚಿ, ಸೋಫಾ ಪೀಸ್ ಪೀಸ್

Kiccha Sudeep Fans | ದಾವಣಗೆರೆಯ ರಾಜನಹಳ್ಳಿಯಲ್ಲಿನ ವಾಲ್ಮೀಕಿ ಸಮಾವೇಶದಲ್ಲಿ ನಟ ಕಿಚ್ಚ ಸುದೀಪ್​ ಭಾಗಿಯಾಗಿದ್ದಾರೆ. ಈ ವೇಳೆ ತನ್ನ ನೆಚ್ಚಿನ ನಟ ಸುದೀಪ್​ ನೋಡಲು ಅಭಿಮಾನಿಗಳು ಮುಗಿಬಿದಿದ್ದು ದೊಡ್ಡ ದಾಂದಲೆಯೇ ನಡೆದಿದೆ.

Davangere Valmiki Jatre: ಸುದೀಪ್ ನೋಡಲು ಮುಗಿಬಿದ್ದ ಅಭಿಮಾನಿಗಳಿಂದ ಕುರ್ಚಿ, ಸೋಫಾ ಪೀಸ್ ಪೀಸ್
ನಟ ಸುದೀಪ್ ನೋಡಲು ಮುಗಿಬಿದ್ದ ಅಭಿಮಾನಿಗಳು
ಆಯೇಷಾ ಬಾನು Edited By: ರಶ್ಮಿ ಕಲ್ಲಕಟ್ಟ

Updated on: Feb 09, 2021 | 4:42 PM

ದಾವಣಗೆರೆ: ಜಿಲ್ಲೆಯ ರಾಜನಹಳ್ಳಿಯಲ್ಲಿನ ವಾಲ್ಮೀಕಿ ಸಮಾವೇಶದಲ್ಲಿ ನಟ ಕಿಚ್ಚ ಸುದೀಪ್​ ಭಾಗಿಯಾಗಿದ್ದಾರೆ. ಈ ವೇಳೆ ತನ್ನ ನೆಚ್ಚಿನ ನಟ ಸುದೀಪ್​ ನೋಡಲು ಅಭಿಮಾನಿಗಳು ಮುಗಿಬಿದಿದ್ದು ದೊಡ್ಡ ದಾಂದಲೆಯೇ ನಡೆದಿದೆ. ನೂರಾರು ಕುರ್ಚಿ, ಸೋಫಾ ಸೆಟ್​​ ಮುರಿದು ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರೆಗೆ ನಟ ಸುದೀಪ್ ಆಗಮಿಸಿದ್ದಾರೆ. ಈ ವೇಳೆ ಸುದೀಪ್​ ನೋಡಲು ಮುಗಿಬಿದ್ದ ಅಭಿಮಾನಿಗಳು ವೇದಿಕೆ ಹತ್ತಿದ್ದಾರೆ. ಈ ವೇಳೆ ಅಭಿಮಾನಿಗಳ ನೂಕು ನುಗ್ಗಾಟದಲ್ಲಿ ಕುರ್ಚಿ, ಸೋಫಾ ಸೆಟ್ ಪೀಸ್​ ಪೀಸ್ ಆಗಿದೆ.

ವಾಲ್ಮೀಕಿ ಸಮಾವೇಶದಲ್ಲಿ ಸುದೀಪ್​ಗೆ ‘ವಾಲ್ಮೀಕಿ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸ್ವಾಮೀಜಿಗಳು ನಟ ಸುದೀಪ್​ಗೆ ಸನ್ಮಾನ ಮಾಡಿದ್ದಾರೆ. ಆದ್ರೆ ಅಭಿಮಾನಿಗಳ ವರ್ತನೆಯಿಂದಾಗಿ ನಟ ಕೊಂಚ ಬೇಸರಗೊಂಡಿದ್ದಾರೆ.

Davangere valmiki jatre: ವಾಲ್ಮೀಕಿ ಸಮಾವೇಶದಲ್ಲಿ ಮೀಸಲಾತಿ ಬಗ್ಗೆ ಘೋಷಣೆ ಇಲ್ಲ ಎಂದ ಸತೀಶ್ ಜಾರಕಿಹೊಳಿ

Published On - 3:48 pm, Tue, 9 February 21

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us