ದಾವಣಗೆರೆ: ಆರು ವರ್ಷಗಳ ಬಳಿಕ ಅಣ್ಣ ತಮ್ಮಂದಿರು ಒಂದಾಗಿದ್ದಾರೆ. ಬಳ್ಳಾರಿ ರೆಡ್ಡಿ ಸಹೋದರ ನಡುವೆ ನಿರ್ಮಾಣ ಆಗಿದ್ದ ಕದನಕ್ಕೆ ತೆರೆ ಬಿದ್ದಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ಶಾಸಕರಾದ ಕರುಣಾಕರ ರೆಡ್ಡಿ, ಸೋಮಶೇಖರ ರೆಡ್ಡಿ ಹಾಗೂ ಮಾಜಿ ಸಚಿವ ಜನಾರ್ಧನ ರೆಡ್ಡಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಹರಪನಹಳ್ಳಿಯಲ್ಲಿ ನಡೆಯುತ್ತಿರುವ ಸೀತಾರಾಮ ಕಲ್ಯಾಣ ಮಹೋತ್ಸವದಲ್ಲಿ ಮೂರು ಸಹೋದರು ಹಾಗೂ ರೆಡ್ಡಿ ಕುಟುಂಬದ ಆಪ್ತ ಸ್ನೇಹಿತ ಸಚಿವ ಶ್ರೀರಾಮಲು ಭಾಗವಾಹಿಸಿದ್ದಾರೆ. ಜನಾರ್ಧನ ರೆಡ್ಡಿ ಜೈಲು ಸೇರಿದ ಬಳಿಕ ಇಬ್ಬರು ಸಹೋದರಿಂದ ದೂರವಾಗಿದ್ದ ಹಿರಿಯ ಸಹೋದರ ಹರಪನಹಳ್ಳಿ ಶಾಸಕ ಕರುಣಾಕರ ರೆಡ್ಡಿ, ಇಂದು ತಮ್ಮ 60 ವರ್ಷದ ಜನ್ಮ ದಿನದ ಹಿನ್ನೆಲೆ ಸೀತಾರಾಮ ಕಲ್ಯಾಣ ಮಹೋತ್ಸವ ಆಯೋಜನೆ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟ ಪಡಿಸಿದಂತೆ ಸೀತಾರಾಮ ಕಲ್ಯಾಣೋತ್ಸವದಲ್ಲಿ ಜನಾರ್ಧನ ರೆಡ್ಡಿ ಕೂಡ ಭಾಗಿಯಾಗಿದ್ದಾರೆ.
2008ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ರೆಡ್ಡಿ ಸಹೋದರರು ಪ್ರಮುಖ ಪಾತ್ರ ವಹಿಸಿದ್ದರು. ಜೊತೆಗೆ ಹಿರಿಯ ಸಹೋದರ ಕರುಣಾಕರ ರೆಡ್ಡಿ ಕಂದಾಯ ಸಚಿವರಾಗಿಯೂ ತಮ್ಮ ಜನಾರ್ಧನ ರೆಡ್ಡಿ ಪ್ರವಾಸೋದ್ಯಮ ಸಚಿವರಾಗಿದ್ರು. ಇವರ ಆಪ್ತ ಶ್ರೀರಾಮಲು ಆರೋಗ್ಯ ಸಚಿವರಾಗಿದ್ದರು. ರಾಜ್ಯದ ಗಣಿ ದೊರೆ ಎಂದೆ ಖ್ಯಾತಿ ಗಳಿಸಿದ್ದ ರೆಡ್ಡಿ ಕುಟುಂಬದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಸಿಬಿಐ ದಾಳಿ ಮಾಡಿ ಮೂರು ವರ್ಷಗಳ ಕಾಲ ಜನಾರ್ಧನ ರೆಡ್ಡಿ ಅವರನ್ನ ಜೈಲಿನಲ್ಲಿ ಇಡಲಾಗಿತ್ತು. ಈ ವೇಳೆ ರೆಡ್ಡಿ ಕುಟುಂಬದ ಹಿರಿಯಣ್ಣ ಕರುಣಾಕರ ರೆಡ್ಡಿ ತಮ್ಮನನ್ನ ನೋಡಲು ಸಹ ಹೋಗಿರಲಿಲ್ಲ. ಆರು ವರ್ಷದ ಬಳಿಕ ಈ ಸಹೋದರರು ಒಂದಾಗಿದ್ದಾರೆ.
ಮೂರು ಸಹೋದರರು ಆಯೋಜಿಸಿದ ಸೀತಾ ರಾಮ ಕಲ್ಯಾಣ ಮಹೋತ್ಸವದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ಭಾಗಿಯಾಗಲಿದ್ದಾರೆ. ಅಣ್ಣನ ಜನ್ಮ ದಿನದಲ್ಲಿ ಪಾಲ್ಗೊಳ್ಳುವುದು ನನ್ನ ಸೌಭಾಗ್ಯ ಎಂದು ಫೇಸ್ ಬುಕ್ ನಲ್ಲಿ ಜನಾರ್ಧನ ರೆಡ್ಡಿ ಬರೆದುಕೊಂಡಿದ್ದರು.
ಕರುಣಾಕರ ರೆಡ್ಡಿ ನಮ್ಮ ಕುಟುಂಬದಲ್ಲಿ ಶ್ರೀ ರಾಮ
ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ನಡೆದ ಸೀತಾರಾಮ ಕಲ್ಯಾಣೋತ್ಸವದಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಮಾತನಾಡಿದ್ದು, ಬಳ್ಳಾರಿಯನ್ನ ಕಾಂಗ್ರೆಸ್ ಭದ್ರಕೋಟೆ ಎನ್ನುತ್ತಿದ್ದರು. ನಾವು ಅದನ್ನ ಬದಲಿಸಿ ಬಿಜೆಪಿ ಭದ್ರಕೋಟಿ ಮಾಡಿದ್ದೇವೆ. ಬರುವ ಚುನಾವಣೆಯಲ್ಲಿ 150 ಸೀಟ್ ಬಿಜೆಪಿಗೆ ಗೆಲ್ಲಬೇಕು. ಇದಕ್ಕಾಗಿ ನಾನು ಬಿಜೆಪಿಗಾಗಿ ಕೆಲ್ಸಾ ಮಾಡಬೇಕು. ಮತ್ತೆ ಬಿಜೆಪಿ ಸರ್ಕಾರ ಬರಬೇಕು ಎಂದು ಸಹೋದರನಿಗೆ ಸಚಿವ ಸ್ಥಾನದ ಬೇಡಿಕೆ ಇಟ್ಟಿದ್ದಾರೆ. ನಮ್ಮ ಸಹೋದರ ಕರುಣಾಕರ ರೆಡ್ಡಿ ಅಂದ್ರೆ ನಮ್ಮ ಕುಟುಂಬದಲ್ಲಿ ಶ್ರೀ ರಾಮ, ನಾನು ಶ್ರೀರಾಮಲು, ಸೋಮಶೇಖರ ರೆಡ್ಡಿ ಅವರು ಲಕ್ಷ್ಮಣ, ಭರತ ಶೃತುಘ್ನ ಇದ್ದಂತೆ. ಇಂಹಹ ಅನುಭವಿ ನನ್ನ ಹಿರಿಯ ಸಹೋದರ. ಕರುಣಾಕರ ರೆಡ್ಡಿಗೆ ಸಚಿವ ಸ್ಥಾನ ನೀಡಬೇಕು ಎಂದು ಸಿಎಂ ಸಮ್ಮುಖದಲ್ಲಿ ಜನಾರ್ಧನ ರೆಡ್ಡಿ ಬೇಡಿಕೆ ಇಟ್ಟಿದ್ದಾರೆ.
ನಾವು ರಾಮ, ಲಕ್ಷ್ಮಣ, ಭರತ ಶತೃಘ್ನ ಇದ್ದಂತೆ
ಇನ್ನು ಈ ವೇಳೆ ಶಾಸಕ ಸೋಮಶೇಖರ್ ರೆಡ್ಡಿ ಮಾತನಾಡಿದ್ದು, ಮುಂದಿನ ದಿನಗಳಲ್ಲಿ ನಾವು ಮೂರು ಜನ ಸಹೋದರರು ಒಂದಾಗಿಯೇ ಹೋಗುತ್ತೇವೆ. ಒಂದಾಗಿಯೇ ಇರುತ್ತೇವೆ. ಕರುಣಾಕರ ರೆಡ್ಡಿ ನಮ್ಮ ಸ್ವಂತ ಅಣ್ಣ. ಒಡಹುಟ್ಟಿದ ಅಣ್ಣ. ಅವರ ಜನ್ಮ ದಿನ ಇದ್ದ ಹಿನ್ನೆಲೆ ನಾವು ಮೂರು ಜನ ಸಹೋದರ ಒಂದಾಗಿದ್ದೇವೆ. ಈಗ ರಾಜಕೀಯ ಮಾತಾಡಲ್ಲ ಎಂದರು. ನಾವು ರಾಮ, ಲಕ್ಷ್ಮಣ, ಭರತ ಶತೃಘ್ನ ಇದ್ದಂತೆ ನಾವು ನಾಲ್ಕು ಜನ ಒಂದೇ. ರಾಮ ಕರುಣಾಕರ ರೆಡ್ಡಿ, ಲಕ್ಷ್ಮಣಸೋಮಶೇಖರ ರೆಡ್ಡಿ, ಭರತ- ಜನಾರ್ಧನ್ ರೆಡ್ಡಿ ಹಾಗೂ ಶತೃಘ್ನು- ಶ್ರೀರಾಮಲು. ನಾಲ್ಕು ಜನ ಒಂದೇ. ನಮ್ಮ ಮನೆಯ ಹಿರಿಯಣ್ಣ ಕರುಣಾಕರ ರೆಡ್ಡಿ. ನಮ್ಮದು ಪೊಲೀಸ್ ಕುಟುಂಬ. ನಮ್ಮ ತಂದೆ ಹೆಡ್ ಕಾನಸ್ಟೇಬಲ್ ಆಗಿದ್ದರು. ಕರುಣಾಕರ ರೆಡ್ಡಿ ಅವರು ಹತ್ತನೇ ಕ್ಲಾಸ್ ನಲ್ಲಿ ಇದ್ದಾಗಲೇ ಗುತ್ತಿಗೆ ಕೆಲಸ ಮಾಡಿ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸಿದ್ದರು ಎಂದು ಶಾಸಕ ಸೋಮಶೇಖರ್ ರೆಡ್ಡಿ ಅಣ್ಣನ ಬಗೆಗಿನ ಕೆಲವು ವಿಚಾರಗಳನ್ನು ಹಂಚಿಕೊಂಡ್ರು.
ಇದನ್ನೂ ಓದಿ: ಸ್ಪೆಷಲ್ ಚಾಪರ್ನಲ್ಲಿ ಧರ್ಮಸ್ಥಳ ತಲುಪಿದ ಯಶ್; ಮಂಜುನಾಥನಿಗೆ ವಿಶೇಷ ಪೂಜೆ
Published On - 3:08 pm, Sun, 10 April 22