ಸ್ಪೆಷಲ್ ಚಾಪರ್ನಲ್ಲಿ ಧರ್ಮಸ್ಥಳ ತಲುಪಿದ ಯಶ್; ಮಂಜುನಾಥನಿಗೆ ವಿಶೇಷ ಪೂಜೆ
ಇಂದು (ಏಪ್ರಿಲ್ 10) ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದರ್ಶನ ಪಡೆದ ಯಶ್ ನಂತರ ಧರ್ಮಸ್ಥಳಕ್ಕೆ ವಿಶೇಷ ಚಾಪರ್ ಮೂಲಕ ತೆರಳಿದರು. ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿ ದರ್ಶನ ಪಡೆದ ಯಶ್ ಅವರು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಕೆ ಮಾಡಿದ್ದಾರೆ.
ಸಿನಿಮಾ ತೆರೆಗೆ ಬರುವುದಕ್ಕೂ ಮೊದಲು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸೋದು ವಾಡಿಕೆ. ಅದೇ ರೀತಿ, ಯಶ್ (Yash) ಕೂಡ ‘ಕೆಜಿಎಫ್ ಚಾಪ್ಟರ್ 2’ (KGF Chapter 2) ರಿಲೀಸ್ಗೂ ಮೊದಲು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂದು (ಏಪ್ರಿಲ್ 10) ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದರ್ಶನ ಪಡೆದ ಯಶ್ ನಂತರ ಧರ್ಮಸ್ಥಳಕ್ಕೆ ವಿಶೇಷ ಚಾಪರ್ ಮೂಲಕ ತೆರಳಿದರು. ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿ ದರ್ಶನ ಪಡೆದ ಯಶ್ ಅವರು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಕೆ ಮಾಡಿದ್ದಾರೆ. ‘ಕೆಜಿಎಫ್ 2’ ನಿರ್ಮಾಪಕ ವಿಜಯ್ ಕಿರಗಂದೂರು ಕೂಡ ಯಶ್ಗೆ ಸಾಥ್ ನೀಡಿದ್ದಾರೆ. ಪೂಜೆ ಸಲ್ಲಿಕೆ ಮಾಡಿದ ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಯಶ್ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಏಪ್ರಿಲ್ 14ರಂದು ‘ಕೆಜಿಎಫ್ 2’ ರಿಲೀಸ್ ಆಗುತ್ತಿದೆ. ಆನ್ಲೈನ್ ಟಿಕೆಟ್ ಬುಕಿಂಗ್ ಆರಂಭಗೊಂಡಿದ್ದು, ಹಲವು ಶೋಗಳು ಸೋಲ್ಡ್ಔಟ್ ಆಗಿವೆ.
ಇದನ್ನೂ ಓದಿ: ಯಶ್ ಮಾತ್ರವಲ್ಲ, ಫ್ಯಾನ್ಸ್ ಕೂಡ ಮಾಡ್ತಿದ್ದಾರೆ ದಾಖಲೆ; ಸಿದ್ಧವಾಗ್ತಿದೆ ಅತಿ ದೊಡ್ಡ ಮೊಸಾಯಿಕ್ ಪೋಟ್ರೇಟ್
‘ಕೆಜಿಎಫ್: ಚಾಪ್ಟರ್ 2’ ರಿಲೀಸ್ ಹೊಸ್ತಿಲಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವರ ದರ್ಶನ ಪಡೆದ ಯಶ್
Published on: Apr 10, 2022 02:54 PM
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು

