AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಲೇಜಿನಲ್ಲಿ ರಾಷ್ಟ್ರ ನಾಯಕರ ಬಗ್ಗೆ ಅವಹೇಳನಾಕಾರಿ ಹೇಳಿಕೆ ಆರೋಪ; ಉಪನ್ಯಾಸಕನ ವಿರುದ್ಧ ಎಫ್ ಐ ಆರ್ ದಾಖಲು

ಹರಿಹರ(Harihara) ತಾಲೂಕಿನ ಮಲೇಬೆನ್ನೂರ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕರು, ಮಕ್ಕಳಿಗೆ ಪಾಠ‌ ಮಾಡುವಾಗ ರಾಷ್ಟ್ರ ನಾಯಕರ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪದ ಮೇಲೆ ಸರ್ಕಾರಿ ಕಾಲೇಜು ಉಪನ್ಯಾಸಕನ ವಿರುದ್ಧ ಎಫ್​ಐಆರ್(FIR) ದಾಖಲಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಾಲೇಜಿನಲ್ಲಿ ರಾಷ್ಟ್ರ ನಾಯಕರ ಬಗ್ಗೆ ಅವಹೇಳನಾಕಾರಿ ಹೇಳಿಕೆ ಆರೋಪ; ಉಪನ್ಯಾಸಕನ ವಿರುದ್ಧ ಎಫ್ ಐ ಆರ್ ದಾಖಲು
ಉಪನ್ಯಾಸಕನ ವಿರುದ್ಧ ಎಫ್ ಐ ಆರ್ ದಾಖಲು
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: ಕಿರಣ್ ಹನುಮಂತ್​ ಮಾದಾರ್|

Updated on:Dec 27, 2023 | 5:46 PM

Share

ದಾವಣಗೆರೆ, ಡಿ.27: ಮಕ್ಕಳಿಗೆ ಪಾಠ‌ ಮಾಡುವಾಗ ರಾಷ್ಟ್ರ ನಾಯಕರ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪದ ಮೇಲೆ ಸರ್ಕಾರಿ ಕಾಲೇಜು ಉಪನ್ಯಾಸಕನ ವಿರುದ್ಧ ಎಫ್​ಐಆರ್(FIR) ದಾಖಲಾಗಿದೆ. ಹರಿಹರ(Harihara) ತಾಲೂಕಿನ ಮಲೇಬೆನ್ನೂರ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕರಾದ ಮಲ್ಲಿಕಾರ್ಜುನ ಎಂ ಬಿ ಎನ್ನುವವರ ಮೇಲೆ ವಿದ್ಯಾರ್ಥಿಗಳ ಪಾಲಕರು ದೂರು ದಾಖಲಿಸಿದ್ದರು. ಪಿಯು ವಿಜ್ಞಾನ ವಿಭಾಗದ ಮಕ್ಕಳಿಗೆ ‘ವೋಟರ್’ ಎಂಬ ಪಾಠ ಮಾಡುವಾಗ ಸಂವಿಧಾನ, ಅಂಬೇಡ್ಕರ್​ ಮತ್ತು ಗಾಂಧೀಜಿ ಅವರ ಬಗ್ಗೆ ಅವಹೇಳನಕಾರಿ ಆಗಿ ನಿಂದನೆಯ ಜೊತೆಗೆ ಮಕ್ಕಳಿಗೆ ಬೇರೆ ಬೇರೆ ಕೋಮುಗಳೆಂದು‌ ಪಾಠ ಮಾಡಿದ್ದರಂತೆ.

ಪೋಷಕರಿಗೆ ಹೇಳಿದ ವಿದ್ಯಾರ್ಥಿಗಳು

ಇನ್ನು ರಾಷ್ಟ್ರ ನಾಯಕರ ಬಗ್ಗೆ ಅವಹೇಳನಕಾರಿ ಪಾಠ ಕೇಳಿದ ವಿದ್ಯಾರ್ಥಿಗಳು, ಮನೆಗೆ ಬಂದು ಪೋಷಕರಿಗೆ ಹೇಳಿದ್ದಾರೆ. ಈ ಹಿನ್ನಲೆ ಆಕ್ರೋಶಗೊಂಡ ಪಾಲಕರಲ್ಲಿ ಒಬ್ಬರಾದ ಬಿ.ಸೌಖತ್ ಅಲಿ ಎಂಬುವವರು ‘ಉಪನ್ಯಾಸಕ ಮಲ್ಲಿಕಾರ್ಜುನ್ ಅವರ ಪಾಠ ಕೇಳಿ ಮನೆಗೆ ಬಂದ ನನ್ನ ಮಗ, ಘಟನೆ ಕುರಿತು ಹೇಳಿದ್ದ.

ಇದನ್ನೂ ಓದಿ:ಮುಸ್ಲಿಂ ಮಹಿಳೆಯರ ವಿರುದ್ಧ ಅಕ್ಷೇಪಾರ್ಹ ಹೇಳಿಕೆ: ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಎಫ್​ಐಆರ್

ಈ ಕುರಿತು ಇತರ ವಿದ್ಯಾರ್ಥಿಗಳನ್ನು ಸಹ ವಿಚಾರಿಸಿದಾಗ ಘಟನೆ ನಡೆದಿದ್ದು ನಿಜವಾಗಿದೆ. ಈ ಹಿನ್ನಲೆ ದೂರು ನೀಡಲಾಗಿದೆ. ಈ ಮೂಲಕ ಇಂತಹ ಕೋಮು ಭಾವನೆ ಕೇರಳಿಸುವ ಉಪನ್ಯಾಸಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಐಪಿಸಿ ಕಲಂ 505(2) ಅಡಿ ಎಫ್ ಐ ಆರ್ ದಾಖಲು ಮಾಡಲಾಗಿದ್ದು, ಮಲೇಬೆನ್ನೂರು ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:43 pm, Wed, 27 December 23

Follow Us
ಬಸವರಾಜ್​ ದೊಡ್ಡಮನಿ, ದಾವಣಗೆರೆ
ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More