ಒಂದೆಡೆ ರೆಬೆಲ್​ ರೇಣುಕಾ, ಮತ್ತೊಂದೆಡೆ ರೆಬೆಲ್ ಕಾಂಗ್ರೆಸ್​​ ಧಣಿ -ಈ ಮಧ್ಯೆ ಶಾಮನೂರು ಕುಟುಂಬದ ಸೊಸೆ ಲೋಕಸಭೆ ಚುನಾವಣೆ ಕಣಕ್ಕೆ ಧುಮುಕಲಿದ್ದಾರಂತೆ!

| Updated By: ಸಾಧು ಶ್ರೀನಾಥ್​

Updated on: Oct 11, 2023 | 2:09 PM

ಎಂ ಪಿ ರೇಣುಕಾಚಾರ್ಯಗೆ ಕೇಸರಿ ಪಡೆ ಬಗ್ಗೆ ತೀವ್ರ ಬೇಸರ. ಇದೇ ಕಾರಣ ಸಿಎಂ ಡಿಸಿಎಂ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರನ್ನೂ ಆಗಾಗ ಭೇಟಿ ಮಾಡುತ್ತಲೇ ಇದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಕಾವು ತೀವ್ರತೆ ಪಡೆದು ಕೊಂಡಿದೆ. ಈ ಮಧ್ಯೆ, ಶಾಮನೂರು ಕುಟುಂಬದ ಸೊಸೆ ಚುನಾವಣೆ ಕಣಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿಯೂ ಹಬ್ಬಿದೆ. ಇಲ್ಲಿದೆ ಚುನಾವಣಾ ಕಮಾಲ್ ಸ್ಟೋರಿ.

ಒಂದೆಡೆ ರೆಬೆಲ್​ ರೇಣುಕಾ, ಮತ್ತೊಂದೆಡೆ ರೆಬೆಲ್ ಕಾಂಗ್ರೆಸ್​​ ಧಣಿ -ಈ ಮಧ್ಯೆ ಶಾಮನೂರು ಕುಟುಂಬದ ಸೊಸೆ ಲೋಕಸಭೆ ಚುನಾವಣೆ ಕಣಕ್ಕೆ ಧುಮುಕಲಿದ್ದಾರಂತೆ!
ದಾವಣಗೆರೆ  ಲೋಕಸಭೆ ಚುನಾವಣೆ ಕಣ ಈಗಲೇ ಹೇಗಿದೆ?
Follow us on

ದಿನ ಬೆಳಗಾದ್ರೆ ನರೇಂದ್ರ ಮೋದಿ ಭಜನೆ. ಜೊತೆಗೆ ಯಡಿಯೂರಪ್ಪ ಪರಮ ಶಿಷ್ಯ ಎಂಧಿ ಕರೆಯಿಸಿಕೊಳ್ಳುವ ಎಂ ಪಿ ರೇಣುಕಾಚಾರ್ಯಗೆ ಇದಕ್ಕಿದ್ದಂತೆ ಕೇಸರಿ ಪಡೆ ಬಗ್ಗೆ ತೀವ್ರ ಬೇಸರವಾಗಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಇದೇ ಕಾರಣ ಸಿಎಂ ಡಿಸಿಎಂ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ ಮಾಡುತ್ತಲೇ ಇದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬೆಣ್ಣೆ ನಗರಿ ದಾವಣಗೆರೆ ಜಿಲ್ಲೆಯಲ್ಲಿ ಒಂದು ರೀತಿಯಲ್ಲಿ ಲೋಕಸಭೆ ಚುನಾವಣೆ ಕಾವು ತೀವ್ರತೆ ಪಡೆದು ಕೊಂಡಿದೆ. ಒಂದೆಡೆ ರೆಬೆಲ್ ಕಾಂಗ್ರೆಸ್​​ ಧಣಿ ಶಾಮನೂರು ಶಿವಶಂಕರಪ್ಪ ಅವರು ಲಿಂಗಾಯತರ ಪತಾಕೆ ಹಿಡಿದು ಸ್ವತಃ ಸಿಎಂ ಸಿದ್ದರಾಮಯ್ಯ ವಿರುದ್ಧ ಹೋರಾಟದ ಬಾವುಟ ಹಾರಿಸಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಶಾಮನೂರು ಕುಟುಂಬದ ಸೊಸೆ ಚುನಾವಣೆ ಕಣಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿ ಜಿಲ್ಲೆಯಾದ್ಯಂತ ಹಬ್ಬಿದೆ. ಇಲ್ಲಿದೆ ನೋಡಿ ಚುನಾವಣಾ ಕಮಾಲ್ ಸ್ಟೋರಿ.

ದಿನಗಳ ಬೆಳಗಾದ್ರೆ ಬಿಜೆಪಿ ವಿರುದ್ಧ ವಾಗ್ದಾಳಿ. ಪಕ್ಷದಲ್ಲಿ ಆಗುತ್ತಿರುವ ಘಟನೆಗಳ ಬಗ್ಗೆ ತೀವ್ರ ವಾಗ್ದಾಳಿ. ಬಿಜೆಪಿ ನಾವಿಕನಿಲ್ಲದ ಹಡಗಾಗಿದೆ. ಮತ್ತೊಮ್ಮೆ ಸ್ವಪಕ್ಷದ ವಿರುದ್ದ ಅಕ್ರೋಶ ವ್ಯಕ್ತಪಡಿಸಿದ್ದಾರೆ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ. ಇಷ್ಟು ದಿನವಾದ್ರು ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿಲ್ಲ.ಯಡಿಯೂರಪ್ಪ ನವರನ್ನು ಕಡೆಗಣೆಸಿದ್ದಾರೆ, ಅದರ ಶಾಪ ದಿಂದ ಈ ಸ್ಥಿತಿ ಬಂದಿದೆ ಬಿಜೆಪಿ ಪಕ್ಷಕ್ಕೆ. ಹೀಗೆ ಹೇಳಿದ್ದು ಕಾಂಗ್ರೆಸ್ ನಾಯಕರೋ ಅಥವಾ ಜೆಡಿಎಸ್ ಪ್ರಮುಖ ಅಲ್ಲ. ಇದೇ ಬಿಜೆಪಿ ಮುಖಂಡ ಹಾಗೂ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಅವರು. ಹೊನ್ನಾಳಿ ಹೋರಿ ಕರು ಎಂದೇ ಕರೆಯಿಸಿ ಕೊಳ್ಳುವ ರೇಣುಕಾಚಾರ್ಯ ಇತ್ತೀಚಿಗೆ ಬಿಜೆಪಿ ಬಂಡಾಯ ನಾಯಕ ಆಗಿದ್ದಾರೆ.

ವಿಧಾನ ಸಭೆ ಚುನಾವಣೆಯಲ್ಲಿ ಕೇಸರು ಪಡೆ ಭೀಕರ ಸೋಲಿನಿಂದ ಇನ್ನು ಎಚ್ಚತ್ತುಕೊಳ್ಳುತ್ತಿಲ್ಲ. ಇದೇ ಕಾರಣಕ್ಕೆ ಕೆಲ ಬಿಜೆಪಿ ಶಾಸಕರು ಸಹ ಕಾಂಗ್ರೆಸ್ಸಿನತ್ತ ಮುಖ ಮಾಡಿದ್ದಾರೆ. ವಿಧಾನ ಸಭೆ ಚುನಾವಣೆಯಲ್ಲಿ ಲಕ್ಷ್ಮಣ ಸವದಿ , ಜಗದೀಶ್ ಶೆಟ್ಟರ ನಂತರ ನಾಯರನ್ನ ನಡೆಸಿಕೊಂಡಿದಕ್ಕೆ ಪಕ್ಷ ಬೆಲೆ ತೆತ್ತಿದೆ. ಹೀಗೆ ನಿರಂತರವಾಗಿ ಮತ್ತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ ರೇಣುಕಾಚಾರ್ಯ. ಬಿಜೆಪಿಯಲ್ಲಿ ಕರ್ನಾಟಕ ಮೂಲದ ದೆಹಲಿ ಮುಖಂಡನ ಪ್ರಭಾವ ಹೆಚ್ಚಾಗುತ್ತಿದೆ ಎಂಬುದನ್ನ ಪರೋಕ್ಷವಾಗಿ ರೇಣುಕಾಚಾರ್ಯ ಹೇಳುತ್ತಲೇ ಇದ್ದಾರೆ.

ರಾಜ್ಯದಲ್ಲಿ ಪಕ್ಷ ಸೋತು ಸುಣ್ಣವಾದ್ರು ಅವರಿಗೆ ಬುದ್ದಿ ಬಂದಿಲ್ಲ ಎಂಬುದು ಕೂಡಾ ರೇಣುಕಾಚಾರ್ಯ ವಾದ. ಹೀಗೆ ಹೇಳುವ ಮೂಲಕ ರೇಣುಕಾಚಾರ್ಯ ಅವರು ಕಾಂಗ್ರೆಸ್ಸಿನತ್ತ ಮುಖ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ. ಈ ನಡುವೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಸ್ಪರ್ಧಿಸುತ್ತಿದ್ದಾರೆ ಎಂಬ ಸುದಿ ಹಬ್ಬುತ್ತಿದೆ. ಆದ್ರೆ ಸಚಿವರು ಮಾತ್ರ ಮೌನಕ್ಕೆ ಶರಣಾಗಿದ್ದಾರೆ.

ದಿನ ಬೆಳಗಾದ್ರೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ರೇಣುಕಾಚಾರ್ಯ ವಿಧಾನ ಸಭೆ ಚುನಾವಣೆಯಲ್ಲಿ ಸೋಲು ಕಂಡರು. ಇದಾದ ಬಳಿಕ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ ರೇಣುಕಾಚಾರ್ಯ. ಈ ನಡುವೆ ನಿನ್ನೆ ಸಿಎಂ ಸಿದ್ದರಾಮಯ್ಯಯ, ಡಿಸಿಎಂ ಡಿಕೆ ಶಿವಕುಮಾರ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರನ್ನ ಭೇಟಿ ಮಾಡಿದ್ದು ನಾನಾ ಸಂಶಯಕ್ಕೆ ಕಾರಣವಾಗಿದೆ. ಆದ್ರೆ ಈ ಬಗ್ಗೆ ರೇಣುಕಾಚಾರ್ಯ ಹೇಳುವುದೇ ಬೇರೆ.

ಕಾಂಗ್ರೆಸ್ ಗೆ ನನ್ನ ಅವಶ್ಯಕತೆ ಇಲ್ಲ, ಸೋತವರನ್ನು ತಗೊಂಡು ಏನ್ ಮಾಡ್ತಾರೆ.ಅವರು ನನ್ನನ್ನು ಆಹ್ವಾನ ಮಾಡಿಲ್ಲ ನಾನು ಕೇಳಿಲ್ಲ.ಸಿದ್ದರಾಮಯ್ಯ ಡಿಕೆಶಿ ಜೊತೆ ರಾಜಕೀಯ ಮೀರಿದ ಸ್ನೇಹ ಇದೆ. ಈ ನಡುವೆ ಇನ್ಸೈಡ್ ಐಎಎಸ್ ತರಬೇತಿ ಕೇಂದ್ರ ಸಂಸ್ಥಾಪಕ ಹಾಗೂ ಕುರುಬ ಸಮಾಜದ ಯುವಕ ವಿನಯಕುಮಾರ ಜಿಬಿ ದಾವಣಗೆರೆ ಕ್ಷೇತ್ರಕ್ಕೆ ಪ್ರವೇಶ ಪಡೆದಿದ್ದಾರೆ. ಇವರು ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ಆಗಿದ್ದು. ಶಾಮನೂರ ಕುಟುಂಬಕ್ಕೆ ಸಂಕಷ್ಟ ಶುರುವಾಗಿದೆ.

ಈ ನಡುವೆ ಚುನಾವಣೆಯಲ್ಲಿ ಸೋತ ಬಳಿಕ ನಿರಂತರ ಹಳ್ಳಿ ಸುತ್ತಾಡುತ್ತಿದ್ದಾರೆ. ಕಾರಣ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೇಟ್ ಆಕಾಂಕ್ಷಿಗಳಾಗಿದ್ದಾರೆ ರೇಣುಕಾಚಾರ್ಯ. ಜೊತೆಗೆ ನನಗೆ ಆತ್ಮವಿಶ್ವಾಸ ಇದೆ, ಲೋಕಸಭಾ ಚುನಾವಣೆ ಟಿಕೇಟ್ ಸಿಗುತ್ತೆ ಎಂದು ಕೂಡಾ ಹೇಳುತ್ತಿದ್ದಾರೆ. ಕಾಂಗ್ರೆಸ್ಸಿನಲ್ಲಿ ಈಗ ಅಹಿಂದಾ ಹವಾ ಸುರುವಾಗಿದೆ. ದಾವಣಗೆರೆ ಕ್ಷೇತ್ರದಲ್ಲಿ ಅಹಿಂದಾ ಮತ ಬ್ಯಾಂಕ್ ವಿಶೇಷವಾಗಿ ಕುರುಬರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನ ಸಭೆ ಕ್ಷೇತ್ರಗಳಲ್ಲಿ ಎಳು ಜನ ಕಾಂಗ್ರೆಸ್ ಶಾಸಕರು ಇದ್ದಾರೆ. ಹೀಗಾಗಿ ಈ ಸಲ ಟಿಕೆಟ್ ಸಿಕ್ಕರೆ ಸಾಕು ಗೆದ್ದು ಬಿಡುವ ಉತ್ಸಾಹದಲ್ಲಿ ಕಾಂಗ್ರೆಸ್ ಇದೆ. ಆದ್ರೆ ಸ್ವಪಕ್ಷದಲ್ಲಿಯೇ ಟಿಕೆಟ್ ಗೆ ತೀವ್ರ ಪೈಪೋಟಿ ಇದೆ ಎಂಬುದು ಗುಟ್ಟಾಗಿ ಉಳಿದಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:08 pm, Wed, 11 October 23