ದಾವಣಗೆರೆಯಲ್ಲಿ ತಂದೆಯ ಆಸ್ತಿಯಲ್ಲಿ ಪಾಲು ಕೇಳಿದಕ್ಕೆ ಸಹೋದರಿ ಮೇಲೆಯೇ ಹಲ್ಲೆ ನಡೆಸಿದ ಸಹೋದರರು

| Updated By: ಆಯೇಷಾ ಬಾನು

Updated on: Jun 15, 2022 | 3:37 PM

ಕಳೆದ ಆರು ವರ್ಷಗಳಿಂದ ಮಹಿಳೆ ಆಸ್ತಿಗಾಗಿ ಹೋರಾಟ ಮಾಡುತ್ತಿದ್ದಾರೆ. ಮಹಿಳೆ ಸಾವಿತ್ರಮ್ಮ ಹಾಗೂ ಮಹಿಳೆಗೆ ಬೆಂಬಲವಾಗಿ ನಿಂತಿರುವ ಅವಳ ಸಹೋದರ ಸಂಬಂಧಿ ಸಿದ್ದಪ್ಪ ಎಂಬುವರ ಮೇಲೆ ಹಲ್ಲೆ ನಡೆಸಲಾಗಿದೆ.

ದಾವಣಗೆರೆಯಲ್ಲಿ ತಂದೆಯ ಆಸ್ತಿಯಲ್ಲಿ ಪಾಲು ಕೇಳಿದಕ್ಕೆ ಸಹೋದರಿ ಮೇಲೆಯೇ ಹಲ್ಲೆ ನಡೆಸಿದ ಸಹೋದರರು
ಹಲ್ಲೆಗೊಳಗಾದ ಸಾವಿತ್ರಮ್ಮ
Follow us on

ದಾವಣಗೆರೆ: ತಂದೆಯ ಆಸ್ತಿಯಲ್ಲಿ(Property) ಪಾಲು ಕೇಳಿದಕ್ಕೆ ಮಗಳ ಮೇಲೆಯೇ ಹಲ್ಲೆ(Assault) ನಡೆಸಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಮ್ಮತ್ರಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಳೆದ ಆರು ವರ್ಷಗಳಿಂದ ಮಹಿಳೆ ಆಸ್ತಿಗಾಗಿ ಹೋರಾಟ ಮಾಡುತ್ತಿದ್ದಾರೆ. ಮಹಿಳೆ ಸಾವಿತ್ರಮ್ಮ ಹಾಗೂ ಮಹಿಳೆಗೆ ಬೆಂಬಲವಾಗಿ ನಿಂತಿರುವ ಅವಳ ಸಹೋದರ ಸಂಬಂಧಿ ಸಿದ್ದಪ್ಪ ಎಂಬುವರ ಮೇಲೆ ಹಲ್ಲೆ ನಡೆಸಲಾಗಿದೆ. ಸಾವಿತ್ರಮ್ಮನ ಸಹೋದರರಾದ ವಿಜಯಕುಮಾರ ಹಾಗೂ ಚಿದಾನಂದಪ್ಪ ಸೇರಿ ನಾಲ್ಕು ಜನರಿಂದ ಹಲ್ಲೆ ನಡೆದಿದೆ. ಅರಸೀಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವೈಯಕ್ತಿಕ ವಿಚಾರಕ್ಕೆ ಆಂಜಿನಪ್ಪ ಕೊಲೆ
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಕನ್ನಮಂಗಲ ನಿವಾಸಿ, ಜೆಡಿಎಸ್ ಮುಖಂಡ ಚಿಕ್ಕ ಆಂಜಿನಪ್ಪ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೆಲವು ರೋಚಕ ಮಾಹಿತಿ ಬಹಿರಂಗವಾಗಿದೆ. ಕೊಲೆ ಪ್ರಕರಣ ಭೇದಿಸಿದ ಶಿಡ್ಲಘಟ್ಟ ಗಾಮಾಂತರ ಪೊಲೀಸರು ಪ್ರಕರಣ ಸಂಬಂಧ ಆರೋಪಿ ವೆಂಕಟೇಶ್ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ವೈಯಕ್ತಿಕ ವಿಚಾರಕ್ಕೆ ಆಂಜಿನಪ್ಪ ಕೊಲೆ ನಡೆದಿರುವುದು ಬಹಿರಂಗವಾಗಿದೆ. ಇದನ್ನೂ ಓದಿ: Art Of Yoga: ದೇಹ ಮತ್ತು ಮನಸ್ಸಿಗೆ ಸ್ಫೂರ್ತಿ ತುಂಬಿ ಆತ್ಮ ವಿಶ್ವಾಸ ಹೆಚ್ಚಿಸುವ ವೃಕ್ಷಾಸನ

ಮೇ 22ರಂದು ಕನ್ನಮಂಗಲ ನಿವಾಸಿ ಚಿಕ್ಕ ಆಂಜಿನಪ್ಪ ಕೊಲೆ ಆಗಿತ್ತು. ಇದೇ ಗ್ರಾಮದ ವೆಂಕಟೇಶ್ ಬೈಕ್ ನಲ್ಲಿ ಹೋಗ್ತಿದ್ದಾಗ ಅಡ್ಡಗಟ್ಟಿ ಆಂಜಿನಪ್ಪ ಕೊಲೆ ಮಾಡಿದ್ದ. ಆರೋಪಿಯ ಅಣ್ಣ ನಾಗೇಶ್ ಹಾಗೂ ಮೃತ ಆಂಜಿನಪ್ಪ ಸ್ನೇಹಿನಾಗಿದ್ದ. ಇನ್ನೂ ಭಾಗ ಆಗದ ಸೋದರರ ಜಮೀನು ನಾಗೇಶ್ಗೆ ಮಾಡಿಸುವ ಶಂಕೆ ಹಿನ್ನೆಲೆಯಲ್ಲಿ ವೆಂಕಟೇಶ್ ಚಿಕ್ಕ ಆಂಜಿನಪ್ಪ ಕೊಲೆ ಮಾಡಿದ್ದಾನೆ. ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಆಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:37 pm, Wed, 15 June 22