ದಾವಣಗೆರೆ: ಸರಳ ಪ್ರಶ್ನೆಗಳಿಗೂ ಉತ್ತರಿಸದ ಮಕ್ಕಳು; ಇಂಗ್ಲಿಷ್ ಶಿಕ್ಷಕನಿಗೆ ನೋಟಿಸ್ ನೀಡಲು ಡಿಸಿ ಸೂಚನೆ

ಸರಳವಾದ ಪ್ರಶ್ನೆಗಳಿಗೂ ಉತ್ತರ ನೀಡದಿರುವುದು ಏಕೆ? ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಶೋಕಾಸ್ ನೋಟಿಸ್ ನೀಡಿ ಎಂದು ಡಿಡಿಪಿಐಗೆ ದಾವಣಗೆರೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ದಾವಣಗೆರೆ: ಸರಳ ಪ್ರಶ್ನೆಗಳಿಗೂ ಉತ್ತರಿಸದ ಮಕ್ಕಳು; ಇಂಗ್ಲಿಷ್ ಶಿಕ್ಷಕನಿಗೆ ನೋಟಿಸ್ ನೀಡಲು ಡಿಸಿ ಸೂಚನೆ
ಸರ್ಕಾರಿ ಮೋತಿ ವೀರಪ್ಪ ಶಾಲೆಯ ಶಿಕ್ಷಕನಿಗೆ ಜಿಲ್ಲಾಧಿಕಾರಿ ನೋಟಿಸ್
Edited By:

Updated on: Feb 14, 2022 | 2:40 PM

ದಾವಣಗೆರೆ: ಸರಳ ಪ್ರಶ್ನೆಗಳಿಗೂ ಮಕ್ಕಳು ಉತ್ತರಿಸದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಸರ್ಕಾರಿ ಮೋತಿ ವೀರಪ್ಪ ಶಾಲೆಯ ಶಿಕ್ಷಕನಿಗೆ(Teacher) ದಾವಣಗೆರೆ ಜಿಲ್ಲಾಧಿಕಾರಿ ನೋಟಿಸ್(Notice)​ ನೀಡಲು ಸೂಚಿಸಿದ್ದಾರೆ. ಸರಳವಾದ ಪ್ರಶ್ನೆಗಳಿಗೂ ಉತ್ತರ ನೀಡದಿರುವುದು ಏಕೆ? ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಶೋಕಾಸ್ ನೋಟಿಸ್ ನೀಡಿ ಎಂದು ಡಿಡಿಪಿಐಗೆ ದಾವಣಗೆರೆ ಜಿಲ್ಲಾಧಿಕಾರಿ (DC) ಸೂಚಿಸಿದ್ದಾರೆ. ಜತೆಗೆ ನಾಳೆಯಿಂದ (ಫೆಬ್ರವರಿ 15) ಹೆಚ್ಚುವರಿ ತರಗತಿ ನಡೆಸಲು ಸೂಚನೆ ನೀಡಿದ್ದಾರೆ. ಹೆಚ್ಚುವರಿಯಾಗಿ ಗಣಿತ, ಇಂಗ್ಲಿಷ್ ತರಗತಿ ನಡೆಸಲು ಸೂಚನೆ ನೀಡಿದ್ದಾರೆ.

ಹಿಜಾಜ್-ಕೇಸರಿ ಸಂಘರ್ಷದ ಹಿನ್ನೆಲೆ  ಹೈಸ್ಕೂಲ್​ಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಬೀಳಗಿ

ರಾಜ್ಯದಲ್ಲಿ ಈಗ ಹಿಜಾಬ್ ಗದ್ದಲ ಶುರುವಾಗಿದೆ. ಬಹುತೇಕ ಕಡೆ ಶಾಲೆಗಳಲ್ಲಿ ಭಯದ ವಾತಾವರಣವಿದೆ‌. ಈ ಭಯ ದೂರ ಮಾಡಲು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಶಾಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ ಕೆಲ ಕಡೆ ತಾವೇ ಮಕ್ಕಳಿಗೆ ಇಂಗ್ಲಿಷ್ ಪಾಠ ಕೂಡಾ ಮಾಡಿದರು. ಹೀಗೆ ಪಾಠ ಮಾಡಿ ಉತ್ತರ ಕೇಳಿದಾಗ ಮಕ್ಕಳಿಂದ ಸರಿಯಾದ ಉತ್ತರ ಬರಲಿಲ್ಲ ಹೀಗಾಗಿ ಶಿಕ್ಷಕನಿಗೆ ಶೋಕಾಸ್ ನೋಟಿಸ್ ನೀಡಲು ಸೂಚನೆ ನೀಡಿದರು.

ಈ ವೇಳೆ ನಾಳೆಯಿಂದ ಇಂಗ್ಲಿಷ್ ಹಾಗೂ ಗಣಿತ ವಿಷಯ ಹೆಚ್ಚುವರಿ ಕ್ಲಾಸ್ ತೆಗೆದುಕೊಳ್ಳಲು ಸೂಚನೆ ನೀಡಿದರು. ಜತೆಗೆ ಇಂಗ್ಲಿಷ್ ಶಿಕ್ಷಕರಿಗೆ ಶೋಕಾಸ್ ನೋಟಿಸ್ ಉತ್ತರ ನೀಡುವಂತೆ ಸ್ಥಳದಲ್ಲಿಯೇ ಇದ್ದ  ಡಿಡಿಪಿಐ ತಿಪ್ಪೇಶ್ ಅವರಿಗೆ ಸೂಚನೆ ನೀಡಿದರು ಜಿಲ್ಲಾಧಿಕಾರಿ ಬೀಳಗಿ.

ಜಿಲ್ಲಾಧಿಕಾರಿಗಳ ಸೂಚನೆ ಮೇಲೆ ಇಂಗ್ಲಿಷ್ ಶಿಕ್ಷಕರಿಗೆ ಶೋಕಾಸ್ ನೋಟಿಸ್ ನೀಡಲಾಗುವುದು.  ಅವರಿಂದ ಒಂದು ವಾರದಲ್ಲಿ ಉತ್ತರ ಪಡೆಯಲಾಗುವುದು. ಮೇಲಾಗಿ ನಾಳೆಯಿಂದ ಇಂಗ್ಲಿಷ್ ಮತ್ತು ಗಣಿತ ವಿಷಯಗಳಿಗೆ ಹೆಚ್ಚುವರಿ ಕ್ಲಾಸ್ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಡಿಡಿಪಿಐ ಜಿ.ಆರ್. ತಿಪ್ಪೇಶ್ ತಿಳಿಸಿದ್ದಾರೆ.

ಇದನ್ನೂ ಓದಿ:

ಬೋರ್​ ಆಗಿದೆ ಎಂದು 7 ಕೋಟಿ ಬೆಲೆ ಬಾಳುವ ಪೇಂಟಿಂಗ್ ಮೇಲೆ​ ಕಣ್ಣಿನ ಚಿತ್ರ ಬಿಡಿಸಿ ಪೇಚಿಗೆ ಸಿಲುಕಿದ ಸೆಕ್ಯುರಿಟಿ ಗಾರ್ಡ್​

ಹಿಜಾಬ್, ಕೇಸರಿ ಶಾಲು ವಿವಾದದ ನಡುವೆ ಇಂದಿನಿಂದ ಕರ್ನಾಟಕದಲ್ಲಿ ಶಾಲೆ ಆರಂಭ; ಹಲವು ಜಿಲ್ಲೆಗಳಲ್ಲಿ 144 ಸೆಕ್ಷನ್ ಜಾರಿ

 

Published On - 2:38 pm, Mon, 14 February 22