AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರಕ್ಕೆ ಸಿಎಂ ಇಬ್ರಾಹಿಂ ಸ್ಪರ್ಧಿಸಿದ್ರೆ ಕನಿಷ್ಠ ಐದು ಸ್ಥಾನ ಜೆಡಿಎಸ್ ಗೆಲ್ಲುತ್ತದೆ -ಮಾಜಿ ಶಾಸಕ ಹೆಚ್ಎಸ್ ಶಿವಶಂಕರ

ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ನಡೆದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಶಂಕರ, ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತರ ಮತಗಳು ಅಧಿಕವಾಗಿವೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಗೆಲ್ಲುತ್ತಾರೆ. ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಶಾಮನೂರ ಶಿವಶಂಕರಪ್ಪಗೆ ಆತಂಕ ಶುರುವಾಗಿದೆ. -ಮಾಜಿ ಶಾಸಕ ಹೆಚ್ಎಸ್ ಶಿವಶಂಕರ

ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರಕ್ಕೆ ಸಿಎಂ ಇಬ್ರಾಹಿಂ ಸ್ಪರ್ಧಿಸಿದ್ರೆ ಕನಿಷ್ಠ ಐದು ಸ್ಥಾನ  ಜೆಡಿಎಸ್ ಗೆಲ್ಲುತ್ತದೆ -ಮಾಜಿ ಶಾಸಕ ಹೆಚ್ಎಸ್ ಶಿವಶಂಕರ
ದಾವಣಗೆರೆಯಲ್ಲಿ ಜನತಾ ಜಲಧಾರೆ ಱಲಿ
TV9 Web
| Edited By: |

Updated on:May 08, 2022 | 3:39 PM

Share

ದಾವಣಗೆರೆ: ದಕ್ಷಿಣ ವಿಧಾನ ಸಭಾ ಕ್ಷೇತ್ರಕ್ಕೆ ಸಿಎಂ ಇಬ್ರಾಹಿಂ ಸ್ಪರ್ಧಿಸಲಿ. ದಾವಣಗೆರೆ ಜಿಲ್ಲೆಯಲ್ಲಿ ಸಿಎಂ ಇಬ್ರಾಹಿಂ ಸ್ಪರ್ಧಿಸಿದ್ರೆ ಕನಿಷ್ಠ ಐದು ಸ್ಥಾನ ಜೆಡಿಎಸ್ ಗೆಲ್ಲುತ್ತದೆ ಎಂದು ಮಾಜಿ ಶಾಸಕ ಹೆಚ್ಎಸ್ ಶಿವಶಂಕರ ತಿಳಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ನಡೆದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಶಂಕರ, ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತರ ಮತಗಳು ಅಧಿಕವಾಗಿವೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಗೆಲ್ಲುತ್ತಾರೆ. ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಶಾಮನೂರ ಶಿವಶಂಕರಪ್ಪಗೆ ಆತಂಕ ಶುರುವಾಗಿದೆ. ಇಬ್ರಾಹಿಂ ಸ್ಪರ್ಧಿಸಿದ್ರೆ ಅಲ್ಪ ಸಂಖ್ಯಾತರ ಮತಗಳು ಕೈ ಬಿಡುವ ಭಯವಿದೆ. ಇನ್ನೊಂದೆಡೆ ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸ್ಪರ್ಧೆಯ ಚರ್ಚೆ ನಡೆಯುತ್ತಿದೆ.

ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಮನೂರ ಶಿವಶಂಕರಪ್ಪ ಪುತ್ರ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ. ಎರಡು ಕ್ಷೇತ್ರಗಳ ಮೇಲೆ ಬಿಜೆಪಿ, ಜೆಡಿಎಸ್ ಕಣ್ಣಿಟ್ಟಿದೆ. ದಾವಣಗೆರೆ ದನಿ ಶಾಮನೂರು ಕುಟುಂಬಕ್ಕೆ ಆತಂಕ ಹೆಚ್ಚಿದೆ ಎಂದು ಜಲಧಾರೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹೆಚ್ಎಸ್ ಶಿವಶಂಕರ ವಾಗ್ದಾಳಿ ನಡೆಸಿದ್ದಾರೆ.

ದಾವಣಗೆರೆಯಲ್ಲಿ ಜನತಾ ಜಲಧಾರೆ ವಾಹನ ಱಲಿ ಶುರುವಾಗಿದೆ. ಜಿಲ್ಲಾ ಜೆಡಿಎಸ್ ಪಕ್ಷದಿಂದ ಱಲಿಗೆ ಚಾಲನೆ ಸಿಕ್ಕಿದೆ. ದಾವಣಗೆರೆಯಾದ್ಯಂತ ವಾಹನ ಸಂಚರಿಸಲಿದೆ. ದಾವಣಗೆರೆ ನಗರದ ಜಯದೇವ ಸರ್ಕಲ್‌ನಲ್ಲಿ ಅದ್ದೂರಿಯಾಗಿ ಸ್ವಾಗತಿಸಿ ರ್ಯಾಲಿ ಶುರುವಾಗಿದೆ.

ಮತ್ತಷ್ಟು ದಾವಣಗೆರೆಯ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಲ್ ಮಾಡಿ

Published On - 3:37 pm, Sun, 8 May 22