ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆಗೆ ಚಿಂತನೆ; ಸಚಿವ ಬಿ.ನಾಗೇಂದ್ರ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 18, 2023 | 1:51 PM

ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆಗೆ ಚಿಂತನೆ ಮಾಡಲಾಗಿದ್ದು, ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಪರಿಶಿಷ್ಟ ಪಂಗಡ ವರ್ಗದ ಕಲ್ಯಾಣ ಸಚಿವ ಬಿ.ನಾಗೇಂದ್ರ ಹೇಳಿದರು.

ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆಗೆ ಚಿಂತನೆ; ಸಚಿವ ಬಿ.ನಾಗೇಂದ್ರ
ಬಿ ನಾಗೇಂದ್ರ
Follow us on

ದಾವಣಗೆರೆ: ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ(Tribal University)ಸ್ಥಾಪನೆಗೆ ಚಿಂತನೆ ಮಾಡಲಾಗಿದ್ದು, ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಪರಿಶಿಷ್ಟ ಪಂಗಡ ವರ್ಗದ ಕಲ್ಯಾಣ ಸಚಿವ ಬಿ.ನಾಗೇಂದ್ರ(B Nagendra) ಹೇಳಿದರು. ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಮಾತನಾಡಿದ ಅವರು‘ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಅಥವಾ ಮೈಸೂರು ಭಾಗದ ಹೆಚ್​​.ಡಿ.ಕೋಟೆಯಲ್ಲಿ ವಿಶ್ವ ವಿದ್ಯಾಲಯ ಸ್ಥಾಪನೆಗೆ ಚಿಂತನೆ ಮಾಡಲಾಗುತ್ತಿದೆ ಎಂದರು.

ಇನ್ನು ಬಹುದಿನಗಳಿಂದ ಬುಡಕಟ್ಟು ವಿಶ್ವ ವಿದ್ಯಾಲಯ ಸ್ಥಾಪನೆ ಬಗ್ಗೆ ಬೇಡಿಕೆ ಇತ್ತು. ಈಗಾಗಲೇ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೂ ತರಲಾಗಿದೆ. ರಾಜ್ಯದಲ್ಲಿ ವಾಲ್ಮೀಕಿ ಸೇರಿದಂತೆ ವಿವಿಧ ಬುಡಕಟ್ಟು ಜನಾಂಗಗಳಿವೆ. ಇದೇ ಕಾರಣಕ್ಕೆ ಬುಡಕಟ್ಟು ವಿಶ್ವ ವಿದ್ಯಾಲಯ ಸ್ಥಾಪನೆಗೆ ಚಿಂತನೆ ಮಾಡಲಾಗಿದ್ದು, ಈಗಾಗಲೇ ಬೆಂಗಳೂರಿನಲ್ಲಿ ವಾಲ್ಮೀಕಿ ವಸತಿ ನಿಲಯ ಸ್ಥಾಪನೆ ಮಾಡಲಾಗಿದೆ. ಇನ್ನು ಮುಂದೆ ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಆರ್ಥಿಕ ನೆರವು ನೀಡಲಾಗುವುದು ಎಂದರು.

ಇದನ್ನೂ ಓದಿ:NEP: ಎನ್​​ಇಪಿ ಮುಂದುವರಿಸಲು ಕರ್ನಾಟಕದ ವಿಶ್ವವಿದ್ಯಾಲಯಗಳ ಕುಲಪತಿಗಳ ಒಲವು; ಸಚಿವ ಎಂಸಿ ಸುಧಾಕರ್ ಜತೆ ಚರ್ಚೆ

ಪ್ರಸಕ್ತ ಕಾಂಗ್ರೆಸ್ ಸರ್ಕಾರದ ಬಗ್ಗೆ ವಾಲ್ಮೀಕಿ ಜನಾಂಗ ಭರವಸೆ ಇಟ್ಟುಕೊಂಡಿದೆ ಎಂದ ಸತೀಶ್ ಜಾರಕಿಹೊಳಿ

ಇಂದು ವಾಲ್ಮೀಕಿ ಮಠದಲ್ಲಿ ಹಮ್ಮಿಕೊಂಡಿದ್ದ ಅಭಿನಂದನ ಸಮಾರಂಭದಲ್ಲಿ ಲೋಕೋಪಯೋ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ ‘ಪ್ರಸಕ್ತ ಕಾಂಗ್ರೆಸ್ ಸರ್ಕಾರದ ಬಗ್ಗೆ ವಾಲ್ಮೀಕಿ ಜನಾಂಗ ಭರವಸೆ ಇಟ್ಟುಕೊಂಡಿದೆ. ಈಗಾಗಲೇ ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ‌ ಹೆಚ್ಚಳ ವಿಚಾರ ಕೇಂದ್ರ ಸರ್ಕಾರ ವ್ಯಾಪ್ತಿಯಲ್ಲಿ ಇದೆ. ಈ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ಕ್ರಮ‌ಕೈಗೊಳ್ಳುತ್ತದೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗಲೇ ಜನ ಸಂಖ್ಯೆ ಅನುಗುಣವಾಗಿ ಅನುದಾನ ನೀಡಿದ್ದು, ಅದಕ್ಕೆ ಹತ್ತು ವರ್ಷವಾಗಿದೆ ಎಂದರು.

ಇನ್ನು ಬಿಜೆಪಿ ಸರ್ಕಾರ ಪರಿಶಿಷ್ಟರು ವಿದೇಶ ಅಧ್ಯಯನಕ್ಕೆ ಹೋಗುವುದನ್ನ ಜೊತೆಗೆ ಇಲ್ಲಿನ ಕೆಲ ಕಾಮಗಾರಿಯನ್ನು ಸಹ ನಿಲ್ಲಿಸಿದೆ. ಈಗ ನಮ್ಮ ಸರ್ಕಾರ ಬಂದಿದ್ದು, ಒಟ್ಟು 15 ಎಸ್ಟಿ ಮೀಸಲು ಕ್ಷೇತ್ರಗಳಲ್ಲಿ 14 ಜನ ಕಾಂಗ್ರೆಸ್ ಶಾಸಕರಾಗಿದ್ದಾರೆ. ಅಂಬೇಡ್ಕರ ಹೇಳಿದಂತೆ ಸಂವಿಧಾನ ಚೆನ್ನಾಗಿದ್ದು, ಅದನ್ನ ಜಾರಿ ಮಾಡುವರು ಚೆನ್ನಾಗಿರಬೇಕು. ಈ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡೋಣ. ಶಾಲೆ ಬೇಕು ಎಂದು ಎಸ್ಸಿ ಎಸ್ಟಿಗಳು ಕೇಳುತ್ತಿಲ್ಲ. ಯಾರು ಕೂಡ ಶಾಲಾಗೆ ಮನವಿ ಸಲ್ಲಿಸುತ್ತಿಲ್ಲ. ನಮ್ಮ ಗ್ರಾಮ ದೇವತೆ ದೇವಸ್ಥಾನಕ್ಕೆ ಹಣ ಕೇಳುತ್ತಿದ್ದಾರೆ. ಶಾಲೆ, ಗ್ರಂಥಾಲಯ ಕಟ್ಟಿ. ಪರಿಶಿಷ್ಟರಲ್ಲಿಯೇ ಬದಲಾವಣೆ ಆಗಬೇಕು ಎಂದರು.

ಇದನ್ನೂ ಓದಿ:NEP 2020: ವೇದ, ಪುರಾಣಗಳ ಜ್ಞಾನವಿರುವ ವಿದ್ಯಾರ್ಥಿಗಳಿಗೆ ಸಿಗುತ್ತೆ ಕ್ರೆಡಿಟ್ ಅಂಕ: ವಿಶ್ವವಿದ್ಯಾಲಯ ಅನುದಾನ ಆಯೋಗ ವರದಿ

ಕೆಲ ಸರ್ಕಾರದ ಯೋಜನೆಗಳು ದುರುಪಯೋಗ

ಇನ್ನು ಇದೇ ವೇಳೆ ಕೆಲ ಸರ್ಕಾರದ ಯೋಜನೆಗಳು ದುರುಪಯೋಗ ಆಗುತ್ತಿದೆ. ಮೂರು ಲಕ್ಷ ಕೊಟ್ಟು ಭೂಮಿ ಖರೀದಿಸಿ ಸರ್ಕಾರದಿಂದ ಎಕರೆಗೆ 15 ಲಕ್ಷ ತೆಗೆದುಕೊಳ್ಳುತ್ತಾರೆ ಎಂದರು. ಇನ್ನು ಲ್ಯಾಂಡ್ ಬ್ಯಾಂಕ್ ಚಿಂತನೆಯನ್ನ ಸರ್ಕಾರ ಮಾಡುತ್ತಿದೆ. ಇನ್ನು ರಾಜ್ಯದಲ್ಲಿ ಇತ್ತೀಚಿಗೆ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಶೇಖಡಾ 46 ರಷ್ಟು ಜನ ವಾಲ್ಮೀಕಿ ಸಮಾಜದವರು ಕಾಂಗ್ರೆಸ್​ಗೆ ‌ಮತ ನೀಡಿದ್ದಾರೆ. ಇನ್ನೂ 56 ರಷ್ಟು ಜನ ಬೇರೆ ಬೇರೆ ಪಕ್ಷಗಳಿಗೆ ಮತ ಹಾಕಿದ್ದಾರೆ. ವಾಲ್ಮೀಕಿ ಸ್ವಾಮೀಜಿ ಹೋರಾಟದಿಂದ ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಸಿಕ್ಕಿದೆ. ಬಿಜೆಪಿಯವರು ಸುಮ್ಮನೇ ‌ಕೊಟ್ಟಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ