ಬೀದರ್​​: ಕರ್ನಾಟಕ ಪಶುವೈದ್ಯಕೀಯ ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸಿಬ್ಬಂದಿ ಕೊರತೆ: 2104 ಹುದ್ದೆಗಳು ಖಾಲಿ, ಭರ್ತಿ ಯಾವಾಗ?

ಕರ್ನಾಟಕ ಪಶುವೈದ್ಯಕೀಯ ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸಿಬ್ಬಂದಿಗಳ ಕೊರೆತೆಯಿಂದ ವಿದ್ಯಾಭ್ಯಾಸಕ್ಕೆ ಹೊಡೆತ ಬೀಳುತ್ತಿದೆ. ವಿಶ್ವವಿದ್ಯಾಲಯ ಆರಂಭವಾದಾಗಿನಿಂದಲೂ ಹಲವು ಪ್ರಮುಖ ಹುದ್ದೆಗಳನ್ನು ಭರ್ತಿಮಾಡಿಲ್ಲ.

ಬೀದರ್​​: ಕರ್ನಾಟಕ ಪಶುವೈದ್ಯಕೀಯ ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸಿಬ್ಬಂದಿ ಕೊರತೆ: 2104 ಹುದ್ದೆಗಳು ಖಾಲಿ, ಭರ್ತಿ ಯಾವಾಗ?
ಕರ್ನಾಟಕ ಪಶುವೈದ್ಯಕೀಯ ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ
Follow us
ವಿವೇಕ ಬಿರಾದಾರ
|

Updated on: Apr 04, 2023 | 7:00 AM

ಕರ್ನಾಟಕ ಪಶುವೈದ್ಯಕೀಯ ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ (Karnataka veterinary, animal and fisheries sciences university Bidar) ಸಿಬ್ಬಂದಿಯ ಕೊರತೆ ಕಾಡುತ್ತಿದೆ. ವಿಶ್ವವಿದ್ಯಾಲಯದಲ್ಲಿ ಎರಡೂ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ (Job Vacancy) ಇರುವ ಪರಿಣಾಮವಾಗಿ ವ್ಯವಸ್ಥೆ ಹಳ್ಳಹಿಡಿಯುತ್ತಿದೆ. ದೇಶದಲ್ಲಿಯೇ ಅತ್ಯುತ್ತಮ 5 ಸ್ಟಾರ್ ಗ್ರೇಡ್ ಹೊಂದಿರುವ ವಿಶ್ವವಿದ್ಯಾಲಯಕ್ಕೆ ಸಿಬ್ಬಂದಿಗಳೇ ಇಲ್ಲದಿರುವುದು ಅಶ್ಚರ್ಯಕ್ಕೆ ಕಾರಣವಾಗಿದೆ.

ಹೌದು ಗಡಿ ಜಿಲ್ಲೆ ಬೀದರ್​ನಲ್ಲಿರುವ ರಾಜ್ಯದ ಏಕೈಕ ಪಶುವೈದ್ಯಕೀಯ ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸಿಬ್ಬಂದಿಗಳ ಕೊರೆತೆಯಿಂದ ವಿದ್ಯಾಭ್ಯಾಸಕ್ಕೆ ಹೊಡೆತ ಬೀಳುತ್ತಿದೆ. ವಿಶ್ವವಿದ್ಯಾಲಯ ಆರಂಭವಾದಾಗಿನಿಂದಲೂ ಹಲವು ಪ್ರಮುಖ ಹುದ್ದೆಗಳನ್ನ ಭರ್ತಿಮಾಡಿಲ್ಲ. ಹೀಗಾಗಿ ವಿಶ್ವವಿದ್ಯಾಲಯದಲ್ಲಿ ಸುಮಾರು 2104 ಹುದ್ದೆಗಳು ಖಾಲಿಯಿದ್ದು ಇಲ್ಲಿನ ಕೆಲಸ ಕಾರ್ಯಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.

ಈ ವಿಶ್ವವಿದ್ಯಾಲಯದ ಅಡಿಯಲ್ಲಿ, ರಾಜ್ಯಾದ್ಯಂತ ಐದು ಪಶುವೈದ್ಯಕೀಯ ಕಾಲೇಜುಗಳಿವೆ. ಇತ್ತೀಚಿಗೆ ಅಥಣಿ ಮತ್ತು ಪುತ್ತೂರಗಳಲ್ಲಿ ಹೊಸದಾಗಿ ಪಶು ವೈದ್ಯಕೀಯ ಕಾಲೇಜುಗಳು ಆರಂಭವಾಗಿವೆ. ಪಶುವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ನೂರಾರು ಸಂಖ್ಯೆಯಲ್ಲಿ ಪದವೀಧರರು, ಸ್ನಾತಕೋತ್ತರ ಪದವೀಧರರು, ಪಿಎಚ್‌ಡಿ ಸಂಶೋಧಕ ವಿದ್ಯಾರ್ಥಿಗಳು, ಡಿಪ್ಲೋಮಾ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಹಾವೇರಿ, ಹಾಸನ ಸೇರಿದಂತೆ ರಾಜ್ಯದ ಐದು ಕಡೆಗಳಲ್ಲಿ ಪಾಲಿಟೆಕ್ನಿಕ್‌ ಕೇಂದ್ರಗಳಿವೆ. ಮಂಗಳೂರಿನಲ್ಲಿ ಹೈನುಗಾರಿಕಾ ವಿಜ್ಞಾನ ಮಹಾವಿದ್ಯಾಲಯವಿದೆ. ಆದರೆ ಕಾರ್ಯನಿರ್ವಹಿಸುವ ಸಿಬ್ಬಂದಿ ಕೊರತೆ ಇದೆ.

ವಿಶ್ವವಿದ್ಯಾಲಯದಲ್ಲಿ ಆಡಳಿತ ವರ್ಗ, ಶಿಕ್ಷಕರ ವರ್ಗ, ಟೆಕ್ನಿಕಲ್‌, ನಾನ್‌ ಟಿಚೀಂಗ್‌ ಹುದ್ದೆಗಳು ಸೇರಿ ಒಟ್ಟು 2104 ಖಾಲಿ ಇವೆ. ಇದರಿಂದ ವಿಶ್ವವಿದ್ಯಾಲಯದಲ್ಲಿನ ಬಹುತೇಕ ಕೆಲಸಗಳನ್ನು ಇರುವ ಸಿಬ್ಬಂದಿಯೇ ಮಾಡಬೇಕಿದೆ. ಇದರಿಂದ ಒತ್ತಡ ಜಾಸ್ತಿಯಾಗಿದ್ದು ಸಮಸ್ಯೆಯಾಗುತ್ತಿದೆ. ಕೂಡಲೆ ರಾಜ್ಯಪಾಲರು ಮುಂದೆ ಬಂದು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಬೀದರ್ ನಂದಿನಗರದಲ್ಲಿರುವ ಪಶುವೈದ್ಯಕೀಯ ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ದೇಶದಲ್ಲಿಯೇ 12 ನೇ ಅತ್ಯುತ್ತಮ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ ಓದಿದ ಹಲವಾರು ವಿದ್ಯಾರ್ಥಿ, ವಿದ್ಯಾರ್ಥಿನೀಯರು ರಾಜ್ಯದ ಮೂಲೇ ಮೂಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗೇ ಅನೇಕರು ವಿಜ್ಞಾನಿಗಳಾಗಿ ಹೊರಹೊಮ್ಮಿದ್ದಾರೆ. ಆದರೆ ಇಂತಹ ವಿವಿಯಲ್ಲಿ ಸಾವಿರಾರು ಹುದ್ದೆಗಳು ಖಾಲಿಯಿದ್ದು ಆಡಳಿತ ಯಂತ್ರವೇ ಕುಸಿಯುತ್ತಿದೆ.

ವಿಶ್ವ ವಿದ್ಯಾಲಯದಲ್ಲಿ ಬೀದರ್ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಟಿಚಿಂಗ್ ಹುದ್ದೆಗಳೆ ಇಲ್ಲಿ ಖಾಲಿ ಇರುವುದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ಕೂಡಾ ತೊಂದರೆಯಾಗುತ್ತಿದೆ. ಹೀಗಾಗಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಪಶು ಸಂಗೋಪನಾ ಇಲಾಖೆಯಲ್ಲಿಯೂ ಸಿಬ್ಬಂದಿ ಕೊರತೆ

ಜಿಲ್ಲೆಯಲ್ಲಿರುವ ಪಶು ಸಂಗೋಪನಾ ಇಲಾಖೆಯಲ್ಲಿಯೂ ಕೂಡಾ ಸಿಬ್ಬಂದಿಯ ಕೊರೆಯಿದೆ. ನೂರಕ್ಕೂ ಹೆಚ್ಚು ಹುದ್ದೆಗಳು ಪಶು ಸಂಗೋಪನಾ ಇಲಾಖೆಯಲ್ಲಿ ಖಾಲಿಯಿವೆ. ಹೀಗಾಗಿ ರೈತರ ಜಾನುವಾರುಗಳಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಬೇಸಿಗೆಕಾಲ ಮತ್ತು ಮಳೆಗಾಲದಲ್ಲಿ ಜಾನುವಾರುಗಳಿಗೆ ನಾನಾ ರೋಗಗಳು ಕಾಣಿಸಿಕೊಳ್ಳುತ್ತವೆ. ಅವುಗಳ ಆರೈಕೆ ಮತ್ತು ಚಿಕಿತ್ಸೆಗೆ ಪಶುಸಂಗೋಪನಾ ಇಲಾಖೆಯ ಪಾತ್ರ ಬಹಳ ಮುಖ್ಯವಾಗಿದೆ.

ಆದರೆ 114 ಆಸ್ಪತ್ರೆಗಳ ಪೈಕಿ ಒಬ್ಬೊಬ್ಬ ವೈದ್ಯರು ತಲಾ ಎರಡು, ಎರಡು ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ. ಲಕ್ಷಾಂತರ ಜಾನುವಾರುಗಳ ಚಿಕಿತ್ಸೆಗೆ ತೊಂದರೆಯಾಗುತ್ತಿದೆ. ಇದರ ಜೊತೆಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಪಶು ಸಂಗೋಪನಾ ಇಲಾಖೆ ಜಾರಿಗೆ ತರುತ್ತಿರುವ ನಾನಾ ಯೋಜನೆಗಳ ಅನುಷ್ಠಾನ ಕೂಡ ಕಷ್ಟಕರವಾಗುತ್ತಿದೆ.

ವರದಿ:- ಸುರೇಶ್ ನಾಯಕ್ ಟಿವಿ9 ಬೀದರ್