ದಾವಣಗೆರೆ: ಕೋರ್ಟ್ ಆದೇಶಿಸಿದರೂ ವಿಕಲಚೇತನರಿಗೆ ನೌಕರಿ ಇಲ್ಲ; ಕ್ಯಾರೆ ಎನ್ನದ ಭೂಮಾಪನ ಇಲಾಖೆ

ರಾಜ್ಯ ಸರ್ಕಾರ ಭೂಮಾಪನ ಇಲಾಖೆಯಲ್ಲಿ 43 ಜನ ಅಂಗವಿಕಲರಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಆಹ್ವಾನಿಸಿದ ನಂತರ ಪರೀಕ್ಷೆ ಮಾಡಿ ನೇಮಕಾತಿ ಸಹ ಮಾಡಿದ್ದರು. ಆದರೆ ಇದರಲ್ಲಿ ಐವರು ನಕಲಿ ಅಂಗವಿಕಲ ಪ್ರಮಾಣ ಪತ್ರ ಪಡೆದು ನೇಮಕ ಆಗಿದ್ದರು.

ದಾವಣಗೆರೆ: ಕೋರ್ಟ್ ಆದೇಶಿಸಿದರೂ ವಿಕಲಚೇತನರಿಗೆ ನೌಕರಿ ಇಲ್ಲ; ಕ್ಯಾರೆ ಎನ್ನದ ಭೂಮಾಪನ ಇಲಾಖೆ
ವಿಕಲಚೇತನ ವ್ಯಕ್ತಿ
Follow us
TV9 Web
| Updated By: sandhya thejappa

Updated on: Jul 28, 2021 | 2:34 PM

ದಾವಣಗೆರೆ: ವಿಕಲಚೇತನರಿಗೆ ಸುತ್ತಾಡುವುದೇ ಕಷ್ಟ. ಇವರಿಗಾಗಿ ಸರ್ಕಾರ ನಾನಾ ಯೋಜನೆಗಳನ್ನ ತಂದಿದೆ. ಜೊತೆಗೆ ವಿವಿಧ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಸಹ ಮಾಡುತ್ತಾರೆ. ಆದರೆ ಜಿಲ್ಲೆಯ ಕೆಲ ವಿಕಲಚೇತನರು ಕಳೆದ ನಾಲ್ಕು ವರ್ಷಗಳಿಂದ ಹೋರಾಟ ಮಾಡುತ್ತಲೇ ಇದ್ದಾರೆ. ಹೋರಾಟ ಮಾಡಿ ಮಾಡಿ ಓರ್ವ ಅಭ್ಯರ್ಥಿ ಸಾವನ್ನಪ್ಪಿದ್ದಾರೆ. ಉಳಿದವರಿಗಾದರೂ ನೇಮಕಾತಿ ಪತ್ರ ಕೊಡಿ ಎಂದು ಹೋರಾಟ ಮಾಡುತ್ತಿದ್ದಾರೆ. ಆದರೆ ಭೂಮಾಪನ ಇಲಾಖೆ ಮಾತ್ರ ಕ್ಯಾರೆ ಎನ್ನುತ್ತಿಲ್ಲ.

ರಾಜ್ಯ ಸರ್ಕಾರ ಭೂಮಾಪನ ಇಲಾಖೆಯಲ್ಲಿ 43 ಜನ ಅಂಗವಿಕಲರಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಆಹ್ವಾನಿಸಿದ ನಂತರ ಪರೀಕ್ಷೆ ಮಾಡಿ ನೇಮಕಾತಿ ಸಹ ಮಾಡಿದ್ದರು. ಆದರೆ ಇದರಲ್ಲಿ ಐವರು ನಕಲಿ ಅಂಗವಿಕಲ ಪ್ರಮಾಣ ಪತ್ರ ಪಡೆದು ನೇಮಕ ಆಗಿದ್ದರು. ಇದನ್ನ ಪ್ರಶ್ನೆ ಮಾಡಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ಮೂಲದ ಗಿರೀಶ್ ಸೇರಿ ನಾಲ್ವರು ಅಂಗವಿಕಲರು ರಾಜ್ಯ ಆಯುಕ್ತರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದರ ಅನ್ವಯ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಸೇರಿ ವಿವಿಧ ಕಡೆ ವೈದ್ಯಕೀಯ ಪರೀಕ್ಷೆ ಮಾಡಿಸಿ ನಕಲಿ ಅಂಗವಿಕಲ ಪ್ರಮಾಣ ಪತ್ರ ಪಡೆದು ನೌಕರಿ ಗಿಟ್ಟಿಸಿದ್ದು ಗೊತ್ತಾಯಿತು. ಈ ಕಾರಣ ಆ ಐದು ಜನರನ್ನ ನೌಕರಿಯಿಂದ ವಜಾ ಮಾಡಲಾಯಿತು.

ಹೀಗೆ ನೇಮಕಾತಿ ರದ್ದಾದ ಬಳಿಕ ವೆಟಿಂಗ್ ಲಿಸ್ಟ್​ನಲ್ಲಿ ಇದ್ದ ಐದು ಜನಕ್ಕೆ ಆ ಹುದ್ದೆ ನೀಡಬೇಕು. ನೇಮಕಾತಿ ಕೊಡಿ ಎಂದು ಹೋರಾಟ ಮಾಡುತ್ತಿದ್ದರು. ಕೊಲಾರ ಮೂಲದ ಲೋಕೇಶ್ ರೆಡ್ಡಿ ಎಂಬುವವರು ಹೋರಾಟ ಮಾಡಿ ಕೊನೆಗೆ ಸಾವನ್ನಪ್ಪಿದ್ದಾರೆ. ಇನ್ನೊಬ್ಬರಿಗೆ ಬೇರೆ ಕಡೆ ಕೆಲಸ ಸಿಕ್ಕಿತ್ತು. ಈ ಹೋರಾಟದಲ್ಲಿ ಉಳಿದವರು ಕೇವಲ ಮೂರು ಜನ ಮಾತ್ರ.

ನಕಲಿ ಅಂಗವಿಕಲ ಪ್ರಮಾಣ ಪತ್ರ ನೀಡಿದ ಐದು ಜನರನ್ನ ನೌಕರಿಯಿಂದ ವಜಾ ಮಾಡಲಾಗಿದೆ. ಆ ಹುದ್ದೆಗಳು ನಮಗೆ ಸಿಗಬೇಕು. ನಾವು ಕೂಲಿ ಕಾರ್ಮಿಕರಾಗಿ ಸೇವೆ ಮಾಡುತ್ತಿದ್ದೇವೆ. ಮೇಲಾಗಿ ಸರ್ಕಾರಿ ನೌಕರಿ ಪಡೆಯುವ ವಯಸ್ಸು ಮುಗಿಯುತ್ತದೆ. ಬೆಂಗಳೂರಿನ ಕೆಆರ್ ಸರ್ಕಕ್ನಲ್ಲಿ ಇರುವ ಅಂಗವಿಕಲ ಆಯುಕ್ತರ ಕಚೇರಿಗೆ ಹೋದರೆ ಕೇವಲ ಭರವಸೆ ನೀಡುತ್ತಿದ್ದಾರೆ. ಆದರೆ ನೇಮಕಾತಿ ಆದೇಶ ನೀಡುತ್ತಿಲ್ಲ. ಹೀಗಾಗಿ ಸರ್ಕಾರ ಈ ಬಗ್ಗೆ ಗಮನಹರಿಸಬೇಕೆಂದು ವಿಕಲಚೇತನರು ಆಗ್ರಹಿಸಿದ್ದಾರೆ.

ಇದನ್ನೂ ಓದಿ

ಜನಪರ ಆಡಳಿತದ ಭರವಸೆ ನೀಡಿದ ಬಸವರಾಜ ಬೊಮ್ಮಾಯಿ; ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆಯ ಮೊತ್ತ ಏರಿಕೆ

Basavaraj Bommai: ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ 1,000 ಕೋಟಿ ರೂ. ವೆಚ್ಚದಲ್ಲಿ ಶಿಷ್ಯ ವೇತನ; ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

(court order to gave job to disabled but disabled have not got a government job in Davanagere)

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ