ಕೋಳಿ ಫಾರಂಗೆ ಅಕ್ರಮ ವಿದ್ಯುತ್ ಸಂಪರ್ಕ; 1 ವರ್ಷ ಜೈಲು, 2.94 ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್
Davanagere: ಅಪರಾಧಿ ಕೋಳಿ ಫಾರಂನ 4 ಶೆಡ್ಗಳಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಮಾಡಿಕೊಂಡಿದ್ದ. 1 ವರ್ಷ ಕಾಲ 96,000 ವ್ಯಾಟ್ ವಿದ್ಯುತ್ ಬಳಸಿಕೊಂಡಿದ್ದ. ಬಳಿಕ, ಈ ಅಕ್ರಮವನ್ನು ಬೆಸ್ಕಾಂ ಎಇಇ ಜಿ.ಎಂ. ನಾಯ್ಕ್ ದಾಳಿ ನಡೆಸಿ ಪತ್ತೆ ಹಚ್ಚಿದ್ದರು.
ದಾವಣಗೆರೆ: ಕೋಳಿ ಫಾರಂಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಮಾಡಿಕೊಂಡ ಹಿನ್ನೆಲೆಯಲ್ಲಿ ದಾವಣಗೆರೆಯ 1 ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್, ಅಪರಾಧಿಗೆ 1 ವರ್ಷ ಜೈಲು, 2.94 ಲಕ್ಷ ರೂಪಾಯಿ ದಂಡ ವಿಧಿಸಿದೆ. ಕೋಳಿ ಫಾರಂ ಮಾಲೀಕ ನಿಜಾಮುದ್ದೀನ್ (46)ಗೆ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ. 2018 ರಲ್ಲಿ ಗೋಗುದ್ದ ಗ್ರಾಮದಲ್ಲಿ ಅಕ್ರಮ ಸಂಪರ್ಕ ಪತ್ತೆಯಾಗಿತ್ತು. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಗೋಗುದ್ದ ಗ್ರಾಮ ಗ್ರಾಮದಲ್ಲಿ ಈ ಅಕ್ರಮ ತಿಳಿದುಬಂದಿತ್ತು.
ಅಪರಾಧಿ ಕೋಳಿ ಫಾರಂನ 4 ಶೆಡ್ಗಳಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಮಾಡಿಕೊಂಡಿದ್ದ. 1 ವರ್ಷ ಕಾಲ 96,000 ವ್ಯಾಟ್ ವಿದ್ಯುತ್ ಬಳಸಿಕೊಂಡಿದ್ದ. ಬಳಿಕ, ಈ ಅಕ್ರಮವನ್ನು ಬೆಸ್ಕಾಂ ಎಇಇ ಜಿ.ಎಂ. ನಾಯ್ಕ್ ದಾಳಿ ನಡೆಸಿ ಪತ್ತೆ ಹಚ್ಚಿದ್ದರು. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇಂದು (ಆಗಸ್ಟ್ 25) ನ್ಯಾಯಾಧೀಶ ಜೆ.ವಿ. ವಿಜಯಾನಂದ ಪ್ರಕರಣ ಸಂಬಂಧ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರಿ ಅಭಿಯೋಜಕ ಕೆ.ಕೆಂಚಪ್ಪ ವಾದ ಮಂಡಿಸಿದ್ದರು. ಅದರಂತೆ ಅಪರಾಧಿಗೆ ಶಿಕ್ಷೆ ಘೋಷಣೆಯಾಗಿದೆ. 1 ವರ್ಷ ಜೈಲು, 2.94 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಕಾಲುಜಾರಿ ಕಾಲುವೆಗೆ ಬಿದ್ದ ಯುವಕ ಯುವಕನೋರ್ವ ಕಾಲುಜಾರಿ ಕಾಲುವೆಗೆ ಬಿದ್ದ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಬಸವರಾಜಪುರದಲ್ಲಿ ನಡೆದಿದೆ. ಬಸವರಾಜಪುರ ಬಳಿಯ ಭದ್ರಾ ಕಾಲುವೆಯಲ್ಲಿ ಯುವಕ ಜಾರಿ ಬಿದ್ದಿದ್ದಾನೆ. ಇದೀಗ ಯುವಕನಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಕಾಲುಜಾರಿ ಕಾಲುವೆಗೆ ಬಿದ್ದಿರುವ ಯುವಕನಿಗಾಗಿ ಶೋಧ ಮುಂದುವರಿದಿದೆ. ದಾವಣಗೆರೆ ನಿವಾಸಿ ಮುಬಾರಕ್ (21)ಗೆ ಕಾಲುವೆಗೆ ಬಿದ್ದ ದುರ್ದೈವಿ. ಆತನಿಗಾಗಿ ಹುಡುಕಾಟ ನಡೆದಿದೆ. ಗಾರೆ ಕೆಲಸ ಮುಗಿಸಿ ಕೈಕಾಲು ತೊಳೆದುಕೊಳ್ಳುವಾಗ ಘಟನೆ ಸಂಭವಿಸಿದೆ. ಬಸವಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ: ಅಕ್ರಮ ಮರಳು ಸಂಗ್ರಹಿಸಿದ್ದ ಅಡ್ಡೆ ಮೇಲೆ ತಹಶೀಲ್ದಾರ್ ದಾಳಿ ಅಕ್ರಮ ಮರಳು ಸಂಗ್ರಹಿಸಿದ್ದ ಅಡ್ಡೆ ಮೇಲೆ ತಹಶೀಲ್ದಾರ್ ದಾಳಿ ನಡೆಸಿದ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಚಿಕ್ಕಲ್ಲೂರು ಗ್ರಾಮದಲ್ಲಿ ನಡೆದಿದೆ. 10 ಲೋಡ್ಗೂ ಅಧಿಕ ಪ್ರಮಾಣದ ಅಕ್ರಮ ಮರಳು ಜಪ್ತಿ ಮಾಡಲಾಗಿದೆ. ಚಿಕ್ಕಲ್ಲೂರು ಗ್ರಾಮದಲ್ಲಿ ಸಂಗ್ರಹಿಸಿದ್ದ ಅಕ್ರಮ ಮರಳು ಜಪ್ತಿ ಮಾಡಲಾಗಿದೆ. ಹೇಮಾವತಿ ನದಿಯಿಂದ ಮರಳು ಕದ್ದು ಅಕ್ರಮ ದಾಸ್ತಾನು ಮಾಡಲಾಗಿತ್ತು. ಪರವಾನಗಿ ಇಲ್ಲದೆ ಮರಳು ಕದ್ದು ಸಂಗ್ರಹಿಸಿರುವ ಆರೋಪ ಕೇಳಿಬಂದಿತ್ತು. ಸಕಲೇಶಪುರ ಉಪವಿಭಾಗ ಅಧಿಕಾರಿ ಪ್ರತೀಕ್ ಬಯಾಲ್, ತಹಶೀಲ್ದಾರ್ ಜಯಕುಮಾರ್ ನೇತೃತ್ವದಲ್ಲಿ ನಡೆದ ದಾಳಿ ನಡೆಸಲಾಗಿತ್ತು. ಅಧಿಕಾರಿಗಳ ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ. ಮರಳು ಜಪ್ತಿ ಮಾಡಿ ದೂರು ದಾಖಲಿಸಿ ತನಿಖೆಗೆ ಆದೇಶ ಹೊರಡಿಸಲಾಗಿದೆ. ಯಸಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಮೈಸೂರು: ಸಾಮೂಹಿಕ ಅತ್ಯಾಚಾರ ಪ್ರಕರಣದ ಮತ್ತಷ್ಟು ಮಾಹಿತಿ ಬೆಳಕಿಗೆ; ಶುಕ್ರವಾರ ಆರಗ ಜ್ಞಾನೇಂದ್ರ ಸಭೆ