ನಮಗೇ ತಿಳಿಯದಂತೆ ನಮ್ಮ ಹೆಸರಲ್ಲಿ ಬೇರೊಬ್ಬರು ಸಾಲ ತೆಗೆದರೆ? ದಾವಣಗೆರೆಯಲ್ಲಿ ಇಬ್ಬರು ರೈತ ಮಹಿಳೆಯರಿಂದ ಕೇಳಿಬಂತು 5 ಕೋಟಿ ಸಾಲದ ಈ ಆರೋಪ
ಏಳು ವರ್ಷಗಳ ಬಳಿಕ ಬ್ಯಾಂಕ್ ಅಧಿಕಾರಿಗಳು ಮನೆ ಮತ್ತು ಜಮೀನಿನ ಜಪ್ತಿಗೆ ಬಂದಾಗ ಸಾಲದ ವಿಚಾರ ಬಹಿರಂಗಗೊಂಡಿದೆ. ಬ್ಯಾಂಕ್ ಅಧಿಕಾರಿಗಳು ಜಪ್ತಿ ನೋಟಿಸ್ ಹಿಡಿದುಕೊಂಡ ಬಂದಿರುವುದನ್ನು ಕಂಡು ರೈತ ಮಹಿಳೆಯರಾದ ಗೀತಮ್ಮ ಮತ್ತು ಸಾವಿತ್ರಮ್ಮ ಇಬ್ಬರೂ ಆಘಾತಗೊಂಡಿದ್ದಾರೆ.
ದಾವಣಗೆರೆ: ನಿಮಗೇ ತಿಳಿಯದಂತೆ ನಿಮ್ಮ ಹೆಸರಲ್ಲಿ, ನಿಮ್ಮದೇ ದಾಖಲೆಗಳನ್ನು ನೀಡಿ ಬೇರೊಬ್ಬರು ಸಾಲ ಪಡೆದರೆ ಹೇಗಿರಬಹುದು? ಸಾಲ ತುಂಬುವ ಅವಧಿ ಬಂದಾಗ ಆಗುವ ಶಾಕ್, ಅಬ್ಬಾ! ಯಾರಿಗೂ ಬೇಡ ಅದು. ದಾವಣಗೆರೆ ಬಳಿ ಇಂತಹುದೇ ಒಂದು ಘಟನೆ ವರದಿಯಾಗಿದ್ದು, ರೈತ ಮಹಿಳೆಯರಿಗೆ ಗೊತ್ತಿಲ್ಲದೇ ಅವರ ಹೆಸರಲ್ಲಿ 5 ಕೋಟಿ ಸಾಲ ಪಡೆದು ವಂಚಿಸಿರುವ ಆರೋಪ ಶಿವಮೊಗ್ಗ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕಿ ಶೋಭಾ ಎಂಬುವವರ ಮೇಲೆ ಕೇಳಿಬಂದಿದೆ. ತನ್ನ ಸಂಬಂಧಿಕರಾದ ಗೀತಮ್ಮ, ಸಾವಿತ್ರಮ್ಮ ಎಂಬ ಇಬ್ಬರು ಮಹಿಳೆಯರ ಹೆಸರಲ್ಲಿ 2014ರಲ್ಲಿ ವಿಧವಾ ವೇತನ ಮಾಡಿಸಿಕೊಡುವುದಾಗಿ ದಾಖಲೆ ಪಡೆದುಕೊಂಡಿದ್ದ ಬ್ಯಾಂಕ್ ವ್ಯವಸ್ಥಾಪಕಿ ಶೋಭಾ,ಗೀತಮ್ಮ ಮತ್ತು ಸಾವಿತ್ರಮ್ಮಗೆ ತಿಳಿಯದಂತೆ ಗೊತ್ತಿಲ್ಲದೇ ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದರು ಎನ್ನಲಾಗಿದೆ.
ಏಳು ವರ್ಷಗಳ ಬಳಿಕ ಬ್ಯಾಂಕ್ ಅಧಿಕಾರಿಗಳು ಮನೆ ಮತ್ತು ಜಮೀನಿನ ಜಪ್ತಿಗೆ ಬಂದಾಗ ಸಾಲದ ವಿಚಾರ ಬಹಿರಂಗಗೊಂಡಿದೆ. ಬ್ಯಾಂಕ್ ಅಧಿಕಾರಿಗಳು ಜಪ್ತಿ ನೋಟಿಸ್ ಹಿಡಿದುಕೊಂಡ ಬಂದಿರುವುದನ್ನು ಕಂಡು ರೈತ ಮಹಿಳೆಯರಾದ ಗೀತಮ್ಮ ಮತ್ತು ಸಾವಿತ್ರಮ್ಮ ಇಬ್ಬರೂ ಆಘಾತಗೊಂಡಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದಾಗಿನಕಟ್ಟೆ ಗ್ರಾಮದ ನಿವಾಸಿಗಳಾದ ಗೀತಮ್ಮ ಮತ್ತು ಸಾವಿತ್ರಮ್ಮ ಎಂಬ ಸಹೋದರಿಯರ ದಾಖಲೆ ಪಡೆದು ಬ್ಯಾಂಕ್ ವ್ಯವಸ್ಥಾಪಕಿ ಶೋಭಾ 2014 ರಲ್ಲಿ ಸಾಲ ಪಡೆದುಕೊಂಡಿದ್ದರು. ಆದರೆ ತಮ್ಮ ಹೆಸರಲ್ಲಿ ಸಾಲ ಪಡೆದ ವಿಚಾರವೇ ಗೀತಮ್ಮ ಮತ್ತು ಸಾವಿತ್ರಮ್ಮಗೆ ತಿಳಿದಿರಲಿಲ್ಲ. ಅಂದಹಾಗೆ ಆರೋಪಿ ಶೋಭಾ, ಗೀತಮ್ಮ ಮತ್ತು ಸಾವಿತ್ರಮ್ಮಗೆ ಸಂಬಂಧದಲ್ಲಿ ತಮ್ಮನ ಹೆಂಡತಿಯೇ ಆಗುತ್ತಾರೆ. ತಮಗೇ ತಿಳಿಯದಂತೆ ತಮ್ಮ ಹೆಸರಲ್ಲಿ ಸಾಲ ತೆಗೆದು ಈಗ ಮನೆ, ಆಸ್ತಿ ಜಪ್ತಿಯವರೆಗೆ ಬಂದು ನಿಂತಿರುವ ಪ್ರಕರಣ ಕಂಡು ಗೀತಮ್ಮ ಮತ್ತು ಸಾವಿತ್ರಮ್ಮ ಕಂಗಾಲಾಗಿದ್ದಾರೆ. ಈಕುರಿತು ಪೊಲೀಸ್ ದೂರು ದಾಖಲಾದ ವಿವರ ಈವರೆಗೆ ಲಭ್ಯವಾಗಿಲ್ಲ.
ಇದನ್ನೂ ಓದಿ:
ಉಡುಪಿ: ಅಪಘಾತವಾದರೂ ಆಂಬುಲೆನ್ಸ್ನಲ್ಲಿಯೇ ಕಾಲೇಜಿಗೆ ಆಗಮಿಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು
ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಆಡಳಿತ ಇರುವುದಿಲ್ಲ; ತಾಲಿಬಾನ್ ನಾಯಕ ಹೇಳಿದ್ದೇನು?
(Davanagere loan fraud accused by former women What if we have another loan in our name that we donot know)