ದಾವಣಗೆರೆ: ತೋಟ ಕಾಯಲು ಬಿಟ್ಟಿದ್ದ ರಾಟ್​​​ ವೀಲರ್ ಶ್ವಾನಗಳ ದಾಳಿಗೆ ಮಹಿಳೆ ಬಲಿ

ದಾವಣಗೆರೆ ಹೊರವಲಯದ ಹೊನ್ನೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ರಾಟ್​​​ ವೀಲರ್​​ ನಾಯಿಗಳ ಡೆಡ್ಲಿ ದಾಳಿಗೆ 38 ವರ್ಷದ ಮಹಿಳೆ ಬಲಿ ಆಗಿರುವಂತಹ ಘಟನೆ ನಡೆದಿದೆ. ನಾಯಿ ಮಾಲೀಕರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ನಾಯಿಗಳನ್ನು ಸೆರೆಹಿಡಿಯಲಾಗಿದೆ. ಆ ಮೂಲಕ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.

ದಾವಣಗೆರೆ: ತೋಟ ಕಾಯಲು ಬಿಟ್ಟಿದ್ದ ರಾಟ್​​​ ವೀಲರ್ ಶ್ವಾನಗಳ ದಾಳಿಗೆ ಮಹಿಳೆ ಬಲಿ
ಮೃತ ಮಹಿಳೆ
Edited By:

Updated on: Dec 05, 2025 | 8:35 PM

ದಾವಣಗೆರೆ, ಡಿಸೆಂಬರ್​ 05: ರಾಟ್​​​ ವೀಲರ್​​ ನಾಯಿಗಳ ದಾಳಿಗೆ (Dog attack) 38 ವರ್ಷದ ಮಹಿಳೆ  ಬಲಿಯಾಗಿರುವಂತಹ (woman death) ಘಟನೆ ದಾವಣಗೆರೆ ಹೊರವಲಯದ ಹೊನ್ನೂರು ಗೊಲ್ಲರಹಟ್ಟಿಯಲ್ಲಿ ನಡೆದಿದೆ. ಅನಿತಾ ಮೃತ ಮಹಿಳೆ. ಮಾಲೀಕರು ನಿನ್ನೆ ರಾತ್ರಿ ಜಮೀನಿನಲ್ಲಿ ರಾಟ್ ವೀಲರ್ ನಾಯಿಗಳನ್ನ ಬಿಟ್ಟಿದ್ದರು. ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದ ಅನಿತಾ ಮೇಲೆ 2 ನಾಯಿಗಳು ದಾಳಿ ಮಾಡಿವೆ. ಗಂಭೀರ ಗಾಯಗೊಂಡಿದ್ದ ಅನಿತಾರನ್ನ ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನ್ನಪ್ಪಿದ್ದಾರೆ. ಸದ್ಯ ನಾಯಿ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ದಾವಣಗೆರೆ ತಾಲೂಕಿನ ಹೊನ್ನೂರು ಗೊಲ್ಲರಹಟ್ಟಿಯಲ್ಲಿ ನಡೆದ ಈ ಘಟನೆ ನಿಜಕ್ಕೂ ಮೈ ಜುಮ್ ಎನ್ನಿಸುವಂತ್ತಿದೆ. ಅನಿತಾ ಮೇಲೆ ದಾಳಿ‌ ಮಾಡಿದ ರಾಟ್​​​ ವೀಲರ್​ ನಾಯಿಗಳು ಆಕೆಯನ್ನ ಅಕ್ಷರಶಃ ತಿಂದು ಹಾಕಿವೆ.

ನಡೆದದ್ದೇನು?

ರಾತ್ರಿ ವೇಳೆ ಕಾರ್ಯ ನಿಮಿತ್ಯ ಮಲ್ಲಶೆಟ್ಟಿಹಳ್ಳಿಯಿಂದ ಹೊನ್ನೂರು ಗೊಲ್ಲರ ಹಟ್ಟಿ ಕಡೆ ರಸ್ತೆಯಲ್ಲಿ ನಡೆದುಕೊಂಡು ಅನಿತಾ ಹೋಗುತ್ತಿದ್ದರು. ಇದ್ದಕ್ಕಿದ್ದಂತೆ ನಾಯಿಗಳು ಅನಿತಾ ಮೇಲೆ ಎರಗಿವೆ. ರಾಟ್​​​ ವೀಲರ್​​ ನಾಯಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಸ್ಥಿತಿ ಕಂಡು ಸ್ಥಳೀಯರು ಸಾವನ್ನಪ್ಪಿರಬಹುದು ಎಂದುಕೊಂಡಿದ್ದರು. ಆದರೆ ಇನ್ನೂ ಜೀವಂತವಾಗಿದ್ದರು.

ಇದನ್ನೂ ಓದಿ: ಬೀದಿನಾಯಿ ದಾಳಿಗೆ ವ್ಯಕ್ತಿ ಬಲಿ: ಕಣ್ಣುಗುಡ್ಡೆಯನ್ನೇ ಕಿತ್ತು ಹಾಕಿದ ಡೆಡ್ಲಿ ಶ್ವಾನ

ಕೂಡಲೇ ಮಹಿಳೆಯನ್ನ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಇತ್ತ ಇನ್ನಷ್ಟು ಜನರ ಮೇಲೆ ದಾಳಿ ಮಾಡುವ ಪ್ಲಾನ್​​ನಲ್ಲಿದ್ದ ನಾಯಿಗಳನ್ನು ಹಂದಿ ಹಿಡಿಯುವ ತಂಡದಿಂದ ಸೆರೆಹಿಡಿಯಲಾಗಿದೆ. ಆ ಮೂಲಕ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಬಿಬಿಎಂಪಿ ಬಾಡೂಟ ಹಾಕುವುದಕ್ಕೂ ಮೊದಲೇ ಬೀದಿನಾಯಿಗಳ ಅಟ್ಟಹಾಸ; ಡೆಡ್ಲಿ ದಾಳಿಗೆ ವ್ಯಕ್ತಿ ಬಲಿ

ರಾತ್ರಿ ವೇಳೆ ಆಟೋದಲ್ಲಿ ತಂದು ಈ ರಾಟ್​​​ ವೀಲರ್​​ ನಾಯಿಗಳನ್ನು ಬಿಟ್ಟು ಹೋದ ಮಾಲೀಕರ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಮಹಿಳೆಗೆ ಎರಡು ಹೆಣ್ಣು ಹಾಗೂ ಒಂದು ಗಂಡು ಮಗುವಿದೆ. ನಾಯಿಗಳ ಮಾಲೀಕರ ಪತ್ತೆಗೆ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಶೋಧ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.