ದಾವಣಗೆರೆ: ಮಹಾಮಾರಿ ಕೊರೊನಾ ಮೂರನೇ ಅಲೆ ಭೀತಿ ನಡುವೆ ದೇವಸ್ಥಾನಗಳಲ್ಲಿ ಜನಜಂಗುಳಿ ತಡೆಯದಿದ್ದಕ್ಕೆ ಅಧಿಕಾರಿಗಳಿಗೆ ದಾವಣಗೆರೆ ಡಿಸಿ ಮಹಾಂತೇಶ ಬೀಳಗಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ದಾವಣಗೆರೆ ಡಿಸಿ ಕಚೇರಿಯಲ್ಲಿ ನಡೆದ ಸಭೆ ವೇಳೆ ಡಿಸಿ ಮಹಾಂತೇಶ, ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.
ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿಯ ತುಂಗಭದ್ರ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿತ್ತು. ಈ ವೇಳೆ ಡಿಸಿ ಮಹಾಂತೇಶ ಬೀಳಗಿ ಗರಂ ಆಗಿದ್ದಾರೆ. ಜಗಳೂರು ಮಡ್ರಳ್ಳಿ ದೇವಸ್ಥಾನ, ಚನ್ನಗಿರಿ ಅಮ್ಮನಗುಡ್ಡ ಸೇರಿದಂತೆ ಹಲವು ದೇಗುಲಗಳಲ್ಲಿ ಹೆಚ್ಚಿನ ಜನ ಸೇರ್ತಿದ್ದಾರೆ. ನೀವೇನು ಮಾಡುತ್ತಿದ್ದೀರಿ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಮ್ಮನಗುಡ್ಡದಲ್ಲಿ 100 ಜನ ಬಂದು ಕುರಿ ಕಡಿದು ಪಾರ್ಟಿ ಮಾಡಿ ಹೋಗುತಿದ್ದಾರೆ. ನಿವೇನು ಮಾಡ್ತಾ ಇದ್ದೀರಿ? ದೇವಸ್ಥಾನಗಳಿಗೆ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ದೇವಸ್ಥಾನಗಳ ಮೇಲೆ ನಿಗಾ ಇಡುವಂತೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ, ಡಿಸಿ ತಾಕೀತು ಮಾಡಿದ್ದಾರೆ. ಮದುವೆಯಲ್ಲೂ 100 ಜನಕ್ಕೆ ಪರವಾಣಿಗೆ ಇದೆ. ಆದ್ರೆ ಅಲ್ಲಿ ಸಾವಿರಾರು ಜನ ಸೇರ್ತಾರೆ. ನಿವೇಕೆ ದಂಡ ಹಾಕೋದನ್ನ ನಿಲ್ಲಿಸಿದ್ದೀರಿ ಅಂತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪ್ರಶ್ನೆ ಮಾಡಿದ್ದಾರೆ.