ಆಟವಾಡುವಾಗ ಗೋಲಿ ನುಂಗಿ ಒಂದು ವರ್ಷದ ಮಗು ಸಾವು

| Updated By: Digi Tech Desk

Updated on: Jul 14, 2021 | 12:32 PM

ಗೋಲಿ ನುಂಗಿದನ್ನು ಜತೆಗಿದ್ದ ಬಾಲಕ ಗಮನಿಸಿದ್ದ. ತಕ್ಷಣವೇ ಪಾಲಕರಿಗೆ ತಿಳಿಸಿದ್ದ. ಅಷ್ಟರಲ್ಲಿ ಕಾರ್ ತೆಗೆದುಕೊಂಡು ಆಸ್ಪತ್ರೆಗೆ ಹೋಗುವಷ್ಟರಲ್ಲಿ ಮಗು ಮನವೀರ್ ಸಾವನ್ನಪ್ಪಿದ್ದಾನೆ.

ಆಟವಾಡುವಾಗ ಗೋಲಿ ನುಂಗಿ ಒಂದು ವರ್ಷದ ಮಗು ಸಾವು
ಪ್ರಾತಿನಿಧಿಕ ಚಿತ್ರ
Follow us on

ದಾವಣಗೆರೆ: ಆಟವಾಡುವಾಗ ಗೋಲಿನುಂಗಿ ಒಂದು ವರ್ಷದ ಮಗು ಸಾವನ್ನಪ್ಪಿದ ದಾರುಣ ಘಟನೆ ಹರಪನಹಳ್ಳಿ ತಾಲೂಕಿನ ಬೇವಿನಹಳ್ಳಿ ತಾಂಡಾದಲ್ಲಿ ನಡೆದಿದೆ. ಬೇವಿನಹಳ್ಳಿ ​ನಿವಾಸಿ ಹರೀಶ್ ಎಂಬುವರ ಪುತ್ರ ಮನವೀರ್ ನಿತ್ಯ ಮನೆಯಂಗಳದಲ್ಲಿ ಗಾಜಿನ ಗೋಲಿಯಿಂದ ಅಕ್ಕಪಕ್ಕದ ಮನೆ ಮಕ್ಕಳೊಂದಿಗೆ ಆಟವಾಡುತ್ತಿದ್ದ. ಮನೆ ಬಳಿ ಮಕ್ಕಳ ಜತೆ ಆಟವಾಡುವಾಗ ಗೋಲಿ‌ ನುಂಗಿದ್ದ. ಗೋಲಿ ನುಂಗಿದನ್ನು ಜತೆಗಿದ್ದ ಬಾಲಕ ಗಮನಿಸಿದ್ದ. ತಕ್ಷಣವೇ ಪಾಲಕರಿಗೆ ತಿಳಿಸಿದ್ದ. ಅಷ್ಟರಲ್ಲಿ ಕಾರ್ ತೆಗೆದುಕೊಂಡು ಆಸ್ಪತ್ರೆಗೆ ಹೋಗುವಷ್ಟರಲ್ಲಿ ಮಗು ಮನವೀರ್ ಸಾವನ್ನಪ್ಪಿದ್ದಾನೆ.

ಮನೆ ಗೋಡೆ ಕುಸಿದು ವಿಶೇಷ ಚೇತನ ಮಹಿಳೆ ಸಾವು; ಪರಿಹಾರದ ಭರವಸೆ ನೀಡಿದ ಸಚಿವ ಶಿವರಾಮ್ ಹೆಬ್ಬಾರ್
ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಮುಂಡಗೆಹಳ್ಳಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ವಿಶೇಷ ಚೇತನ ಮಹಿಳೆ ಸಾವನ್ನಪ್ಪಿದ್ದು, ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್​ ಭೇಟಿ ನೀಡಿದ್ದಾರೆ. ಮನೆ ಹಿಂಭಾಗದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಗೋಡೆ ಕುಸಿದ ಮೃತಪಟ್ಟ ವಿಶೇಷ ಚೇತನ ಮಹಿಳೆಯ ಕುಟುಂಬಕ್ಕೆ 48 ಗಂಟೆಗಳಲ್ಲಿ 7 ಲಕ್ಷ ಪರಿಹಾರ ಒದಗಿಸುವುದಾಗಿ ಕಾರ್ಮಿಕ ಸಚಿವರೂ ಆಗಿರುವ ಶಿವರಾಮ್ ಹೆಬ್ಬಾರ್ ಭರವಸೆ ನೀಡಿದ್ದಾರೆ. ಕುಟುಂಬದ ಹಿರಿಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿರುವ ಸಚಿವ ಶಿವರಾಮ ಹೆಬ್ಬಾರ್ ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿ ನೂತನ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: 

Explainer: ಏನಿದು ರಿಪೇರಿ ಮಾಡಿಕೊಳ್ಳುವ ಹಕ್ಕು ಬೇಕೆಂಬ ಹೊಸ ಚಳವಳಿ? ಏನಿದೆ ಅನಿವಾರ್ಯತೆ?

Field Report: ಆನಂದಯ್ಯನ ಕೊರೊನಾ ಔಷಧ ಪರಿಣಾಮ ಬೀರುವುದೇ? ಔಷಧ ಸೇವಿಸಿದ ಕೊಪ್ಪಳದ ಜನರು ಹೇಳುವುದೇನು?

(Davanagere Harapanahalli Death of a one year old child while playing)

Published On - 8:34 pm, Tue, 13 July 21