ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷನಾಗಿದ್ದು ನನ್ನ ಸೌಭಾಗ್ಯ: ಶಾಮನೂರು ಶಿವಶಂಕರಪ್ಪ

ನಗರದ ಬಾಪೂಜಿ ಎಂಬಿಎ ಕಾಲೇಜು ಆವರಣದಲ್ಲಿ ಆಯೋಜಿಸಿರುವ ಅಖಿಲ ಭಾರತ ವೀರಶೈವ ಲಿಂಗಾಯತ 24ನೇ ಮಹಾಸಭೆಯಲ್ಲಿ ಮಾತನಾಡಿದ ಹಿರಿಯ ಶಾಸಕ, ವೀರಶೈವ ಮಹಾಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಅಖಿಲ ಭಾರತ ವೀರಶೈವ ಮಹಾ ಸಭೆಯ 23 ಅಧ್ಯಕ್ಷನಾಗಿದ್ದು ನನ್ನ ಸೌಭಾಗ್ಯ ಎಂದು ಹೇಳಿದ್ದಾರೆ.

ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷನಾಗಿದ್ದು ನನ್ನ ಸೌಭಾಗ್ಯ: ಶಾಮನೂರು ಶಿವಶಂಕರಪ್ಪ
ವೀರಶೈವ ಮಹಾಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ
Edited By:

Updated on: Dec 23, 2023 | 10:40 PM

ದಾವಣಗೆರೆ, ಡಿಸೆಂಬರ್​ 23: ಅಖಿಲ ಭಾರತ ವೀರಶೈವ ಮಹಾಸಭೆಯ (VeeraShaiva Mahasabha Adhiveshana) ಅಧ್ಯಕ್ಷನಾಗಿದ್ದು ನನ್ನ ಸೌಭಾಗ್ಯ ಎಂದು ಹಿರಿಯ ಶಾಸಕ, ವೀರಶೈವ ಮಹಾಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ನಗರದ ಬಾಪೂಜಿ ಎಂಬಿಎ ಕಾಲೇಜು ಆವರಣದಲ್ಲಿ ಆಯೋಜಿಸಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭೆಯ 24ನೇ ಮಹಾಸಭೆಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮಾಜ ವಿಭಜಿಸುವ ಪ್ರಯತ್ನಗಳು ನಡೆದವು. ಸಮಾಜದ ವಿಭಜನೆಗೆ ಅವಕಾಶ ಕೊಟ್ಟಿಲ್ಲ, ಮುಂದೆಯೂ ಸಹ ಕೊಡಲ್ಲ ಎಂದು ಹೇಳಿದ್ದಾರೆ.

ವೀರಶೈವ ಲಿಂಗಾಯತ ಸಮಾಜದ ಅಭಿವೃದ್ಧಿಗೆ ಚಿಂತನೆ ನಡೆಯಬೇಕು. ಹಾನಗಲ್ ಕುಮಾರಸ್ವಾಮಿಗಳು ಸಮಾಜವನ್ನು ಸಂಘಟನೆ ಮಾಡಿದ್ದಾರೆ. ಸಮಗ್ರ ವೀರಶೈವರ ಕಲ್ಯಾಣಕ್ಕಾಗಿ ಸ್ವಾಮೀಜಿ ಸಂಘಟನೆ ಮಾಡಿದ್ದಾರೆ. ಇಂತಹ ಸಂಘಟನೆಯ ಅಧ್ಯಕ್ಷನಾಗಿದ್ದು ನನ್ನ ಸೌಭಾಗ್ಯ ಎಂದಿದ್ದಾರೆ.

ಲಿಂಗಾಯತ ಸಮಾಜವನ್ನ ನಿರ್ಲಿಕ್ಷಿಸುವುದು ಸರಿಯಲ್ಲ: ಡಾ‌. ಚನ್ನಸಿದ್ದರಾಮ ಸ್ವಾಮೀಜಿ

ಶ್ರೀಶೈಲ ಗುರುಪೀಠದ ಡಾ‌. ಚನ್ನಸಿದ್ದರಾಮ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು, ಲಿಂಗಾಯತ ಸಮಾಜವನ್ನ ನಿರ್ಲಿಕ್ಷಿಸುವುದು ಸರಿಯಲ್ಲ. ಈ ಹಿಂದಿನ ಚನ್ನಪ್ಪ ರೆಡ್ಡಿ ಆಯೋಗದ ಪ್ರಕಾರ 17 ರಷ್ಟು ಇದ್ದಾರೆ ಎಂದು ಹೇಳುತ್ತು. ಈಗಿನ ಜಾತಿ ಗಣತಿ ಪ್ರಕಾರ 10 ರಷ್ಟು ರಾಜ್ಯದಲ್ಲಿ ಲಿಂಗಾಯತರು ಇದ್ದಾರೆ ಅಂದರೆ ಏನು ಅರ್ಥ. ಈಗ ಉದ್ದೇಶಿತ ಜಾತಿ ಗಣತಿ ಸಾರಾಸಗಟಾಗಿ ತಿರಸ್ಕರಿಸಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ಶಾಮನೂರು ಶಿವಶಂಕರಪ್ಪರ ಮೆರವಣಿಗೆ ಮೂಲಕ ವೀರಶೈವ ಮಹಾಸಭಾ ಅಧಿವೇಶನಕ್ಕೆ ಚಾಲನೆ

ವೀರಶೈವ ಲಿಂಗಾಯತರು ಎಲ್ಲರು ಒಂದು. ವಿಶ್ವವೇ ನಮ್ಮ ಬಂಧು ಇದ್ದಂತೆ. ಈ ಹಿಂದೆ ಪ್ರತ್ಯೇಕ ಸ್ವತಂತ್ರ ಲಿಂಗಾಯತ ಧರ್ಮ ಹೋರಾಟ ಶುರುವಾದಾಗಿನಿಂದ ಶಾಮನೂರು ಶಿವಶಂಕರಪ್ಪ ಗಟ್ಟಿಯಾಗಿ ನಿಂತು ವೀರಶೈವ ಲಿಂಗಾತರೆಲ್ಲ ಒಂದೇ ಎಂದು ಹೇಳಿದ್ದರು. ಇದೇ ಕಾರಣಕ್ಕೆ ಇಂದು ವೀರಶೈವ ಲಿಂಗಾಯತ ಸಮಾಜ ಒಂದಾಗಿ ಉಳಿದಿದೆ. ವೀರಶೈವ ವಿರಕ್ತರು ಒಂದೇ ಆಗಿದೆ ಎಂದರು.

ರಾಜ್ಯದಲ್ಲಿ ವೀರಶೈವ ಮಹಾಸಭೆ ರಾಜ್ಯದಲ್ಲಿ ವಿಶಿಷ್ಠ ಕಾರ್ಯ ಮಾಡಿದೆ: ಸಚಿವ ಈಶ್ವರ ಖಂಡ್ರೆ

ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿದ್ದು, ರಾಜ್ಯದಲ್ಲಿ ವೀರಶೈವ ಮಹಾಸಭೆ ರಾಜ್ಯದಲ್ಲಿ ವಿಶಿಷ್ಠ ಕಾರ್ಯ ಮಾಡಿದೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಕ್ಷೇತ್ರದಲ್ಲಿ ಸಾಧನೆ ಮೆಚ್ಚಲೇಬೇಕು. ಹಾನಗಲ್ ಕುಮಾರಸ್ವಾಮಿ ವೀರಶೈವ ಮಹಾಸಭೆ ಆರಂಭಿಸಿ ಉತ್ತಮಕಾರ್ಯ. ಸುತ್ತೂರು ಸ್ವಾಮೀಜಿಯವರು ಅದೇ ಕೆಲಸ ಮುಂದುವರಿಸಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More
Loading...
Unable to load recommendations.
Follow Us