ವಿಜೃಂಭಣೆಯಿಂದ ನಡೆದ ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ

ಸಾಮಾನ್ಯವಾಗಿ ರಥೋತ್ಸವ ಎಳೆಯುವವರು ಪುರುಷರು ಆಗಿರುತ್ತಾರೆ. ಆದ್ರೆ, ದಾವಣಗೆರೆಯ ಯರಗುಂಟೆ ಗ್ರಾಮದಲ್ಲಿ ರಥೋತ್ಸವವನ್ನ ಮಹಿಳೆಯರು ಎಳೆಯುವುದರ ಜೊತೆಗೆ ಮುಸ್ಲಿಂ ಬಾಂಧವರು ಕೂಡ ರಥೋತ್ಸವದಲ್ಲಿ ಭಾಗವಹಿಸಿ ಏಕತೆ ಮೆರೆದಿದ್ದಾರೆ.

ವಿಜೃಂಭಣೆಯಿಂದ ನಡೆದ ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
ದಾವಣಗೆರೆ ಕರಿಬಸವೇಶ್ವರ ಜಾತ್ರೆ
Edited By: ಕಿರಣ್ ಹನುಮಂತ್​ ಮಾದಾರ್

Updated on: Dec 10, 2023 | 5:37 PM

ದಾವಣಗೆರೆ, ಡಿ.10: ಶ್ರದ್ಧ ಭಕ್ತಿಯಿಂದ ರಥ ಎಳೆಯುತ್ತಿರುವ ಮಹಿಳೆಯರು, ದೇವರಿಗೆ ಪೂಜೆ ಸಲ್ಲಿಸುತ್ತಿರುವ ಭಕ್ತೆಯರು. ಇಂತದೊಂದು ದೃಶ್ಯ ಕಂಡು ಬಂದದ್ದು ದಾವಣಗೆರೆ(Davanagere)ಯ ಯರಗುಂಟೆ ಗ್ರಾಮದಲ್ಲಿ. ರಾಜ್ಯದ ಯಾವುದೇ ಮೂಲೆಯಲ್ಲಿ ಮಾಡದಂತ ವಿಶೇಷ ಆಚರಣೆ ಸಂಪ್ರದಾಯವನ್ನ ಈ ಗ್ರಾಮದ ಜನರು ಆಚರಿಸಿಕೊಂಡು ಬಂದಿದ್ದಾರೆ. ಅದುವೇ ಹೆಣ್ಣು ಮಕ್ಕಳು ರಥ ಎಳೆಯುವುದು. ಈ ಗ್ರಾಮದ ಕರಿಬಸವೇಶ್ವರ ರಥೋತ್ಸವವನ್ನ ವಿಜೃಂಭಣೆಯಿಂದ ಮಾಡಿಕೊಂಡು ಬರಲಾಗಿದೆ.

ಇನ್ನು ಈ ರಥೋತ್ಸವಕ್ಕೆ ಕೇವಲ ಯರಗುಂಟೆ ಗ್ರಾಮದ ಜನತೆ ಮಾತ್ರವಲ್ಲದೇ ದಾವಣಗೆರೆ ಸುತ್ತಮುತ್ತಲಿನ ಎಲ್ಲಾ ಗ್ರಾಮದ ಮಹಿಳೆರಯರು ಶ್ರದ್ಧ ಭಕ್ತಿಯಿಂದ ಈ ದೇವರಿಗೆ ನಡೆದುಕೊಂಡು ರಥವನ್ನ ಎಳೆಯುತ್ತಾರೆ. ಇಷ್ಟೇ ಮಾತ್ರವಲ್ಲದೆ ಇಲ್ಲಿಗೆ ಮುಸ್ಲಿಂ ಧರ್ಮಿಯರು ಬಂದು ಕರಿಬಸವೇಶ್ವರನ ರಥಕ್ಕೆ ಹೂ ಮಾಲೆ ಸಮರ್ಪಣೆ ಮಾಡಿ, ಆ ದೇವರಿಗೆ ನಡೆದುಕೊಳ್ಳುತ್ತಾರೆ. ಜೊತೆಗೆ ಇಲ್ಲಿ, ಅಲ್ಲಾ, ದೇವರು ಎಲ್ಲಾ ಒಂದೇ ದೇವರು ಒಂದು ನಾಮ ಹಲವು ಎಂಬ ನಂಬಿಕೆಯನ್ನ ಇಟ್ಟುಕೊಂಡು ಜೀವನ ಮಾಡುತ್ತೇವೆ. ಯರಗುಂಟೆಯಲ್ಲಿ ರಥೋತ್ಸವ ನಡೆಯುತ್ತ ಎಂದು ಗೊತ್ತಾದ ಕೂಡಲೇ ಎರಡು ದಿನದ ಮುಂಚಿತವಾಗಿ ಆಗಮಿಸಿ ಸಂಪ್ರದಾಯದಂತೆ ಎಲ್ಲಾ ಪೂಜಾ ಕಾರ್ಯಗಳಲ್ಲಿ ತೊಡಗಿಕೊಳ್ಳುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:ಮಲ್ಲೇಶ್ವರಂ ಕಡಲೆಕಾಯಿ ಪರಿಷೆಗೆ ಜಾತ್ರೆ ವೈಭವ, ಹೇಗಿದ್ದಾನೆ ಗೊತ್ತ ಕಡಲೆಕಾಯಿ ಬಸವ

ಅಲ್ಲದೆ ಇಲ್ಲಿ ಮಹಿಳೆಯರು ಚಿಕ್ಕವರು ದೊಡ್ಡವರು ಎನ್ನದೆ ರಥದ ಅಗ್ಗ ಹಿಡಿದು ಎಳೆದುಕೊಂಡು ಹೋಗಿ ಬನ್ನಿ ಮುಡಿದು ವಾಪಸ್ ಬರುತ್ತಾರೆ. ಹೀಗೆ ರಥ ಎಳೆಯುವುದು ಹಾಗೂ ಕರಿಬಸವೇಶ್ವರನ ಪೂಜೆ ಹಾಗೂ ತೊಟ್ಟಿಲು ತೂಗುವುದರಿಂದ ತಾವು ಬೇಡಿಕೊಂಡು ಇಷ್ಟರ್ಥಗಳು ಈಡೇರುತ್ತವೆ. ಜೊತೆಗೆ ನಮ್ಮನ್ನ ಕರಿಬಸವೇಶ್ವರ ಕಾಪಾಡುತ್ತಾನೆ ಎಂಬ ನಂಬಿಕೆ ಇಲ್ಲಿನ ಮಹಿಳೆಯರದ್ದು. ಒಟ್ಟಾರೆಯಾಗಿ ರಾಜ್ಯದ ಯಾವುದೇ ಸ್ಥಳಗಳಲ್ಲಿ ನಡೆಯದಂತ ವಿಶಿಷ್ಟ ಆಚರಣೆ ಮಹಿಳಾ ರಥೋತ್ಸವ ಈ ಗ್ರಾಮದಲ್ಲಿ ನಡೆಯುತ್ತೆ, ಜೊತೆಗೆ ಹಿಂದು ಮುಸ್ಲಿಂ ನಡುವೆ ಧಾರ್ಮಿಕ ಭಾವನೆ ಕದಡುವ ಇಂದಿನ ದಿನಮಾನದಲ್ಲಿ ಹಿಂದು ಮುಸ್ಲಿಂ ಒಂದೇ ರಥೋತ್ಸವದಲ್ಲಿ ಕೂಡಿ ಹಬ್ಬ ಆಚರಣೆ ಮಾಡಿರುವುದು ನಿಜಕ್ಕು ಒಳ್ಳೆಯ ಬೆಳವಣಿಗೆಯೇ ಸರಿ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published On - 5:36 pm, Sun, 10 December 23

ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More
Loading...
Unable to load recommendations.
Follow Us