ದಾವಣಗೆರೆ: ಕಳೆದ ಐದಾರು ವರ್ಷಗಳಿಂದ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದರು. ಇದನ್ನು ಅರಿತು ಇತ್ತೀಚಿಗೆ ದೆಹಲಿಯಲ್ಲಿ ಕೇಂದ್ರ ಗೃಹ, ವಾಣಿಜ್ಯ ಇಲಾಖೆ ಸಚಿವರ ಭೇಟಿ ಮಾಡಿ ವಿದೇಶಗಳಿಂದ ಬರುವ ಅಡಿಕೆ ಆಮದು ನಿಲ್ಲಿಸಲು ಮನವಿ ಮಾಡಿದ್ದೆ. ಮೇಲಾಗಿ ಕೊರೊನಾ ಸಂಕಷ್ಟ ಕಾಲದಲ್ಲಿ ರೈತರ ಸ್ಥಿತಿ ಕುರಿತು ವಿವರಿಸಲಾಗಿತ್ತು. ಈ ಮನವಿಯನ್ನು ಪರಿಗಣಿಸಿದ ಕೇಂದ್ರ ಸರ್ಕಾರ ವಿದೇಶಿ ಅಡಿಕೆ ಆಮದಿಗೆ ಬ್ರೇಕ್ ಹಾಕಿದೆ. ಇದರಿಂದ ಅಡಿಕೆ ಬೆಲೆ 50 ಸಾವಿರದತ್ತ ಧಾವಿಸುತ್ತಿದೆ ಎಂದು ಸಂಸದ ಜಿಎಂ ಸಿದ್ದೇಶ್ವರ ತಿಳಿಸಿದರು.
ಕಳೆದ ಐದಾರು ವರ್ಷಗಳಿಂದ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದರು. ಈ ಹಿನ್ನೆಲೆ ಇತ್ತೀಚಿಗೆ ದೆಹಲಿಯಲ್ಲಿ ಕೇಂದ್ರ ಗೃಹ, ವಾಣಿಜ್ಯ ಇಲಾಖೆ ಸಚಿವರ ಭೇಟಿ. ವಿದೇಶಗಳಿಂದ ಬರುವ ಅಡಿಕೆ ಆಮದು ನಿಲ್ಲಿಸಲು ಮನವಿ ನೀಡಿದ್ದೆ. ಮೇಲಾಗಿ ಕೊರೊನಾ ಸಂಕಷ್ಟ ಕಾಲದಲ್ಲಿ ರೈತರ ಸ್ಥಿತಿ ಕುರಿತು ವಿವರಿಸಲಾಗಿತ್ತು. ತಮ್ಮ ಮನವಿಯಿಂದ ಕೇಂದ್ರ ಸರ್ಕಾರ ವಿದೇಶಿ ಅಡಿಕೆ ಆಮದಿಗೆ ಬ್ರೇಕ್ ಹಾಕಿದೆ. ಈ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ಉತ್ತಮ ದರವಿದೆ. ಇಡಿ ದೇಶದ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕ ಹೆಚ್ಚು ಅಡಿಕೆ ಬೆಳೆಯುವ ಪ್ರದೇಶವಾಗಿರುವುದು ಹೆಮ್ಮೆಯ ವಿಷಯ ಎಂದು ಸಹ ಅವರು ಇದೇ ಸಂದರ್ಭದಲ್ಲಿ ವಿವರಿಸಿದರು.
ದಾವಣಗೆರೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ದೇವರಮನೆ ಶಿವಕುಮಾರ್ ಅಧಿಕಾರ ಸ್ವೀಕಾರ
ದಾವಣಗೆರೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ದೇವರಮನೆ ಶಿವಕುಮಾರ್ ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ದೇವರಮನೆ ಶಿವಕುಮಾರ್, ನಾನು ಕೂಡ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮನೆ ಪಡೆದಿದ್ದೇನೆ. ಕಾನೂನು ರೀತಿಯಲ್ಲಿ ಎಲ್ಲ ದಾಖಲೆ ಕೊಟ್ಟು ಮನೆ ಪಡೆದಿರುವೆ. ಇದರಲ್ಲಿ ನನ್ನಿಂದ ತಪ್ಪಾಗಿದ್ದರೆ ರಾಜಕೀಯ ನಿವೃತ್ತಿ ಪಡೆಯುವೆ ಎಂದು ಅವರು ಅಧಿಕಾರ ಸ್ವೀಕರಿಸಿದ ನಂತರ ತಿಳಿಸಿದರು. ಈ ಹಿಂದೆ ನಾನು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಪಡೆದಿರುವೆ. ಜೊತೆಗೆ ನಮ್ಮ ಸಹೋದರರು ಸಹ ನಿವೇಶನ ಪಡೆದಿದ್ದಾರೆ. ನಾನು ನನ್ನ ಕುಟುಂಬದಿಂದ 1996ರಿಂದ ಪ್ರತ್ಯೇಕ ಆಗಿದ್ದೇನೆ. ನಮ್ಮ ತಂದೆ ಮತ್ತು ಸಹೋದರ ಪ್ರತ್ಯೇಕ ಆಗಿ ಇದ್ದಾರೆ. ಅವರು ನಿವೇಶನ ಪಡೆದಿರಬಹುದು. ಇದಕ್ಕೆ ನನಗೂ ಸಂಬಂಧ ಇಲ್ಲ. ನಾನು ಪಡೆದ ನಿವೇಶನ ಕಾನೂನು ರೀತಿ ದಾಖಲೆ ನೀಡಿ ದುಡ್ಡು ಕಟ್ಟಿ ಪಡೆದಿರುವೆ. ಇದರಲ್ಲಿ ನನ್ನಿಂದ ತಪ್ಪಾಗಿದೆ ಎಂದು ಸಾಬೀತಾದ್ರೆ ರಾಜಕೀಯ ನಿವೃತ್ತಿ ಪಡೆಯುವೆ ಎಂದು ಅವರು ಸ್ಪಷ್ಟಪಡಿಸಿದರು. ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಶಾಸಕ ಎಸ್ ಎ. ರವೀಂದ್ರನಾಥ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಅಧಿಕಾರ ಸ್ವೀಕಾರ ಕಶಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ:
35 ಅಡಿಕೆ ಮರ ಕಡಿದ ದುಷ್ಕರ್ಮಿಗಳು; ದೂರು ನೀಡಿದರೂ ಕ್ರಮ ಕೈಗೊಳ್ಳದೆ ಪೊಲೀಸರ ನಿರ್ಲಕ್ಷ್ಯ
(Davanagere MP GM Siddeshwar says central government rushed to the arecanut growers for my request)
Published On - 5:02 pm, Thu, 26 August 21