ಪದೇಪದೆ ಪೆಟ್ರೋಲ್ ಬೆಲೆ ಬಗ್ಗೆ ಪ್ರಶ್ನಿಸಬೇಡಿ ಎಂದ ಜಿಎಂ ಸಿದ್ದೇಶ್ವರ್‌ಗೆ ಪ್ರತಿಭಟನೆ ಬಿಸಿ; ಉಚಿತ ಪೆಟ್ರೋಲ್ ಕೊಡಲು ಆಗ್ರಹ
Petrol Price Hike: ಜಿ.ಎಂ ಸಿದ್ದೇಶ್ವರ್, ಪದೇಪದೆ ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ನನ್ನನ್ನು ಪ್ರಶ್ನಿಸಬೇಡಿ ಎಂದು ಹೇಳಿದ್ದರು. ನಿಮಗೆ ಪೆಟ್ರೋಲ್ ಬೇಕಿದ್ದರೆ ಕೇಳಿ ನಾನು ಹಾಕಿಸ್ತೇನೆ ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ಉಚಿತವಾಗಿ ಪೆಟ್ರೋಲ್ ನೀಡಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಈಗ ಆಗ್ರಹಿಸಿದ್ದಾರೆ.
ದಾವಣಗೆರೆ: ಜಿಲ್ಲೆಯ ಜನರಿಗೆ ಉಚಿತವಾಗಿ ಪೆಟ್ರೋಲ್ ಕೊಡಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ಗೆ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹ ವ್ಯಕ್ತಪಡಿಸಿದ್ದಾರೆ. ಜಿ.ಎಂ. ಸಿದ್ದೇಶ್ವರ್ ಕಚೇರಿಯ ಬಳಿ ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ದಾವಣಗೆರೆಯ ಪಿಬಿ ರಸ್ತೆ ಬಳಿ ಇರುವ ಸಿದ್ದೇಶ್ವರ್ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪೆಟ್ರೋಲ್ ನೀಡುವಂತೆ ಆಗ್ರಹಿಸಿದ್ದಾರೆ. ಶಾಮನೂರು ಶಿವಶಂಕರಪ್ಪ ಉಚಿತವಾಗಿ ಲಸಿಕೆ ಕೊಡುತ್ತಿದ್ದಾರೆ. ಹೀಗಾಗಿ ಸಿದ್ದೇಶ್ವರ್ ಉಚಿತವಾಗಿ ಪೆಟ್ರೋಲ್ ಕೊಡಬೇಕು ಎಂದು ಹೇಳಿದ್ದಾರೆ.
ಈ ಹಿಂದೆ ಪೆಟ್ರೋಲ್ ಏರಿಕೆ ಬಗ್ಗೆ ಸಿದ್ದೇಶ್ವರ್‌ಗೆ ಪ್ರಶ್ನೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿ.ಎಂ ಸಿದ್ದೇಶ್ವರ್, ಪದೇಪದೆ ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ನನ್ನನ್ನು ಪ್ರಶ್ನಿಸಬೇಡಿ ಎಂದು ಹೇಳಿದ್ದರು. ನಿಮಗೆ ಪೆಟ್ರೋಲ್ ಬೇಕಿದ್ದರೆ ಕೇಳಿ ನಾನು ಹಾಕಿಸ್ತೇನೆ ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ಉಚಿತವಾಗಿ ಪೆಟ್ರೋಲ್ ನೀಡಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಈಗ ಆಗ್ರಹಿಸಿದ್ದಾರೆ.
ಪದೇಪದೆ ಪೆಟ್ರೋಲ್ ದರ ಏರಿಕೆಯ ಬಗ್ಗೆ ಪ್ರಶ್ನೆ ಕೇಳಿ ಇಕ್ಕಟ್ಟಿಗೆ ಸಿಲುಕಿಸಬೇಡಿ ಎಂದು ಜಿ.ಎಂ.ಸಿದ್ದೇಶ್ವರ್ ಮಾಧ್ಯಮದವರಿಗೆ ಕೈಮುಗಿದು ಮನವಿ ಮಾಡಿದ್ದರು. ಪೆಟ್ರೋಲ್ ಬೆಲೆ ಅಂತರಾಷ್ಟ್ರೀಯ ವಿಚಾರ. ಸಾರ್ವಜನಿಕರು ಪೆಟ್ರೋಲ್ ಬೆಲೆ ಹೆಚ್ಚಾಗಿದೆ ಎಂದು ಆಕ್ರೋಶಗೊಂಡಿಲ್ಲ. ಪೆಟ್ರೋಲ್ ಬೆಲೆ ಹೆಚ್ಚಳದಿಂದ (Petrol Price Hike) ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ ಎಂಬುದು ಕೇವಲ ಮಾಧ್ಯಮಗಳ ಸೃಷ್ಟಿ. ಕೊರೊನಾ ಸಂಕಷ್ಟ ಕಾಲ ಮುಗಿದ ಮೇಲೆ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಕಡಿಮೆ ಮಾಡುತ್ತದೆ. ಬರೀ ಪೆಟ್ರೋಲ್ ಬಗ್ಗೆ ಕೇಳಿ ನನ್ನ ಹೇಳಿಕೆ ವೈರಲ್ ಆಗುವಂತೆ ಮಾಡಬೇಡಿ. ನಿಮಗೆ ಯಾರಿಗಾದ್ರು ಪೆಟ್ರೋಲ್ ಕಷ್ಟ ಇದ್ರೆ ವೈಯಕ್ತಿಕವಾಗಿ ನಾನೇ ಕೊಡಿಬಹುದು ಎಂದು ಅವರು ವಿನಂತಿಯನ್ನೂ ಸಹ ಮಾಡಿಕೊಂಡಿದ್ದರು. ಈ ವಿಚಾರವಾಗಿ ಇಂದು (ಆಗಸ್ಟ್ 11) ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ.
ನೀರಜ್ ಹೆಸರಿನ ಎಲ್ಲ ಗ್ರಾಹಕರ ವಾಹನಗಳಿಗೆ ಎರಡು ದಿನ ಉಚಿತ ಪೆಟ್ರೋಲ್ ತುಂಬಿಸಿದ ಗುಜರಾತಿನ ಪ್ರೆಟ್ರೋಲ್ ಬಂಕಿನ ಮಾಲೀಕ!
(Congress Workers orders to give Free Petrol to MP GM Siddheshwar at Davanagere)
Published On - 6:31 pm, Wed, 11 August 21