AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀರಜ್ ಹೆಸರಿನ ಎಲ್ಲ ಗ್ರಾಹಕರ ವಾಹನಗಳಿಗೆ ಎರಡು ದಿನ ಉಚಿತ ಪೆಟ್ರೋಲ್ ತುಂಬಿಸಿದ ಗುಜರಾತಿನ ಪ್ರೆಟ್ರೋಲ್ ಬಂಕಿನ ಮಾಲೀಕ!

ನೀರಜ್ ಹೆಸರಿನ ಎಲ್ಲ ಗ್ರಾಹಕರ ವಾಹನಗಳಿಗೆ ಎರಡು ದಿನ ಉಚಿತ ಪೆಟ್ರೋಲ್ ತುಂಬಿಸಿದ ಗುಜರಾತಿನ ಪ್ರೆಟ್ರೋಲ್ ಬಂಕಿನ ಮಾಲೀಕ!

TV9 Web
| Edited By: |

Updated on: Aug 10, 2021 | 10:18 PM

Share

ಆಗಸ್ಟ್ 9 ಮತ್ತು 10 ರಂದು ಅವರು ನೀರಜ್ ಹೆಸರಿನ ಎಲ್ಲ ಗ್ರಾಹಕರ ವಾಹನಗಳಿಗೆ 501 ರೂಪಾಯಿಗಳ ಪೆಟ್ರೋಲ್ ಅನ್ನು ಅಯ್ಯುಬ್ ಉಚಿತವಾಗಿ ತುಂಬಿಸಿದ್ದಾರೆ. ಅವರ ಮೇಲಿನ ಅಭಿಮಾನಕ್ಕೆ ಹೀಗೆ ಮಾಡಿದ್ದು ಅವರು ಹೇಳಿದ್ದಾರೆ.

ಕ್ರೀಡೆ ಮತ್ತು ಕ್ರೀಡಾಪಟುಗಳ ಬಗ್ಗೆ ಅಭಿಮಾನ ಅಂದರೆ ಇದೇ ಇರಬೇಕು. ಟೊಕಿಯೋ ಒಲಂಪಿಕ್ಸ್ನಲ್ಲಿ ಪದಕ ಗೆದ್ದು ತಂದವರಿಗೆ ಸರ್ಕಾರಗಳು, ಉದ್ದಿಮೆಗಳು ಮತ್ತು ಸಾರ್ವಜನಿಕರು ತಮಗೆ ತೋಚಿದ ರೀತಿಯಲ್ಲಿ ಪುರಸ್ಕರಿಸುತ್ತಿದ್ದಾರೆ. ಟ್ರ್ಯಾಕ್ ಮತ್ತು ಫೀಲ್ಡ್ನಲ್ಲಿ ಭಾರತಕ್ಕೆ ಮೊಟ್ಟ ಮೊದಲ ಪದಕ ಕೊಡಿಸಿದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಉಳಿದ ಪದಕ ವಿಜೇತರಿಗಿಂತ ಜಾಸ್ತಿ ಲೈಮ್ಲೈಟ್ ಬಾಚಿಕೊಳ್ಳುತ್ತಿರುವುದು ಸುಳ್ಳಲ್ಲ. ದೇಶದ ಎಲ್ಲ ಮೂಲೆಗಳಲ್ಲಿ ಅವರಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಅವರೊಂದಿಗೆ ಜಾವೆಲಿನ್ ಎಸೆಯುವ ಕ್ರೀಡೆಯೂ ಜನಪ್ರಿಯಗೊಳ್ಳುತ್ತಿದೆ.

ಗುಜರಾತಿನ ಭರೂಚ್​ನಲ್ಲಿ ಅಯ್ಯುಬ್ ಖಾನ್ ಹೆಸರಿನ ವ್ಯಕ್ತಿಯೊಬ್ಬರು ಪೆಟ್ರೋಲ್ ಬಂಕ್ ನಡೆಸುತ್ತಾರೆ. ಅದರಲ್ಲೇನು ವಿಶೇಷ ಅಂದಿರಾ? ವಿಶೇಷ ಇದೆ ಮಾರಾಯ್ರೇ. ಆಗಸ್ಟ್ 9 ಮತ್ತು 10 ರಂದು ಅವರು ನೀರಜ್ ಹೆಸರಿನ ಎಲ್ಲ ಗ್ರಾಹಕರ ವಾಹನಗಳಿಗೆ 501 ರೂಪಾಯಿಗಳ ಪೆಟ್ರೋಲ್ ಅನ್ನು ಅಯ್ಯುಬ್ ಉಚಿತವಾಗಿ ತುಂಬಿಸಿದ್ದಾರೆ. ಅವರ ಮೇಲಿನ ಅಭಿಮಾನಕ್ಕೆ ಹೀಗೆ ಮಾಡಿದ್ದು ಅವರು ಹೇಳಿದ್ದಾರೆ. ನೀರಜ್ ಹೆಸರಿನವರು ಅದನ್ನು ಪ್ರೂವ್ ಮಾಡಲು ಯಾವುದಾದರೂ ಡಾಕ್ಯುಮೆಂಟ್ (ಆಧಾರ್, ಡಿಎಲ್) ತೋರಿಸಬೇಕಿತ್ತು. ಅವರ ವಾಹನಗಳಿಗೆ ಇಂಧನ ತುಂಬಿಸುವ ಮೊದಲು ಹೂಗುಚ್ಛ ನೀಡಿ ಅಭಿನಂದಿಸುವ ಕೆಲಸವೂ ನಡೆದಿದೆ.

ಮೂಲಗಳ ಪ್ರಕಾರ ಹಲವಾರು ಜನ ಈ ಆಫರ್ನ ಪ್ರಯೋಜನ ಪಡೆದುಕೊಂಡಿದ್ದಾರೆ. ಹಾಗೆ ಪ್ರಯೋಜನ ಪಡೆದವರೆಲ್ಲ ನೀರಜ್ ಅಂತ ಹೆಸರಿಟ್ಟುಕೊಂಡಿದ್ದು ಹೆಮ್ಮೆಯೆನಿಸುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:  ಸಾಸಿವೆ ಕಾಳುಗಳಂತೆ ಉದುರಿ ಬಿದ್ದ ಸಾವಿರಾರು ಜನ! ಮೈನವಿರೇಳಿಸುವ ಈ ವಿಡಿಯೋ ಮಿಸ್​ ಮಾಡ್ಕೋಬೇಡಿ​