ದಾವಣಗೆರೆ, ನವೆಂಬರ್ 13: ಉಕ್ಕಡಗಾತ್ರಿ ಅಜ್ಜಯ್ಯ (Ukkadagatri Ajjayya) ಎಂದು ಇಡಿ ರಾಜ್ಯಕ್ಕೆ ಗೊತ್ತು. ದೆವ್ವ, ಭೂತಗಳ ಕಾಟದಿಂದ ಬೇಸತ್ತವರಿಗೆ ಇಲ್ಲಿ ಚಿಕಿತ್ಸೆ. ಜೊತೆಗೆ ಅಜ್ಜಯ್ಯನ ಪವಾಡದಿಂದ ವಿಶೇಷ ಚಮತ್ಕಾರಗಳು ನಡೆಯುತ್ತವೆ. ಇಂತಹ ಅಜ್ಜಯ್ಯ ರಥೋತ್ಸವ ಇಂದು ನಡೆಯಿತು. ಲಕ್ಷಾಂತರ ಜನ ಸೇರಿದ್ದರು. ವಿಶೇಷವಾಗಿ ದೆವ್ವ, ಭೂತಗಳ ಕಾಟ ಇರುವ ಜನ ಮೈ ಚಳಿ ಬಿಟ್ಟು ಕುಣಿಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಇಲ್ಲಿ ವಿವಿಧ ಸೇವೆಗಳು ಇರುತ್ತವೆ. ಇಂತಹ ಸೇವೆಗಳನ್ನ ಮಾಡಿದರೆ ದೆವ್ವ, ಭೂತ ಅಥವಾ ಪ್ರೇತಗಳ ಭೀತಿಯಿಂದ ಬಳಲುತ್ತಿರುವ ಜನರು ವಾಸಿಯಾಗಿ ಮನೆಗೆ ಹೋಗುತ್ತಾರೆ. ಇದು ದೀಪಾವಳಿ ಅಮವಾಸ್ಯೆ ಬಲು ಪ್ರಸಿದ್ಧಿ.
ಇದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿ. ತಂಗಭದ್ರ ನದಿಯ ದಂಡೆ ಮೇಲೆ ಇರುವ ಗ್ರಾಮ ಇತ್ತೀಚಿಗೆ ಜಗತ್ ಪ್ರಸಿದ್ಧವಾಗಿದೆ. ಇಲ್ಲಿನ ದೇವರ ಹೆಸರು ಕರಿ ಬಸವೇಶ್ವರ ಗ್ರಾಮೀಣ ಭಾಷೆಯಲ್ಲಿ ಕರಿಬಸಜ್ಜ ಅಥವಾ ಅಜ್ಜಯ್ಯ ಎನ್ನುತ್ತಾರೆ.
ಇದನ್ನೂ ಓದಿ: ದಾವಣಗೆರೆ: ಅಕಾಲಿಕ ಮಳೆಗೆ ಮಣ್ಣುಪಾಲಾದ ಭತ್ತ, ಕಣ್ಣೀರು ಹಾಕುತ್ತಿರುವ ಅನ್ನದಾತರು
ಇಲ್ಲಿನ ಅಜ್ಜಯ್ಯ ಪ್ರಸಿದ್ಧ ಪವಾಡ ಪುರುಷ. ಇತ ಶತಮಾನದ ಹಿಂದೆ ಇಲ್ಲೊಂದು ಪವಾಡ ಮಾಡಿದ್ದ. ಮಹಿಳೆಯೊಬ್ಬಳು ದೆವ್ವದ ಕಾಟದಿಂದ ಬಳಲುತ್ತಿದ್ದಳು. ಇಂತಹ ಮಹಿಳೆಗೆ ತನ್ನ ಶಕ್ತಿಯಿಂದ ಕಾಯಿಲೆ ವಾಸ ಮಾಡಿದನಂತೆ. ಹೀಗಾಗಿ ಇಲ್ಲಿ ವಿಶೇಷಗಳಿಂದಲೂ ಜನ ಬರುವುದುಂಟು. ಇಂತಹ ಅಜ್ಜಯ್ಯ ಜಾತ್ರೆ ಇಂದು ನಡೆಯಿತು. ವಿಶೇಷವಾಗಿ ಪ್ರತಿ ಅಮವಾಸ್ಯೆ ಅಂದ್ರೆ ಇಲ್ಲಿ ಭಕ್ತ ಸಾಗರವೇ ಸೇರುತ್ತಾರೆ.
ಅದರಲ್ಲಿ ವಿಶೇಷವಾಗಿ ದೀಪಾವಳಿ ಅಮವಾಸ್ಯೆ ಅಂದ್ರೆ ಕೆಲವರ ಬಾಳಿನಲ್ಲಿ ಕವಿದ ಕತ್ತಲೇ ದೂರವಾಗಿ ಬೆಳಕು ಬರುತ್ತದೆ ಎಂಬ ನಂಬಿಕೆ. ಇಲ್ಲಿಗೆ ಬರುವ ಬಹುತೇಕರು ಪಕ್ಕದ ತುಂಗ ಭದ್ರ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ಹರಕೆ ಒಪ್ಪಿಸುತ್ತಾರೆ. ವ್ಯಕ್ತಿಯ ಜೀವನದ ಪ್ರತಿಯೊಂದು ಕಷ್ಟಗಳಿಗೆ ಇಲ್ಲಿ ಪರಿಹಾರ ಸಿಗುತ್ತದೆ ಎಂಬುದು ಜನರ ನಂಬಿಕೆ.
ಇದನ್ನೂ ಓದಿ: ಸೇತುವೆ ದಾಟಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಶಿಕ್ಷಕ; ಗ್ರಾಮಸ್ಥರ ನೆರವಿನಿಂದ ಉಳಿಯಿತು ಶಿಕ್ಷಕನ ಪ್ರಾಣ
ಇಲ್ಲಿನ ಸೇವೆಗಳು ಕಾಯಿಲೆ ಇರುವ ಜನರು ದೇವಸ್ಥಾನದಲ್ಲಿಯೇ ಬಂದು ಒಂದು ತಿಂಗಳ ಅಥವಾ ಆರು ತಿಂಗಳ ಕಾಲ ಇರುತ್ತಾರೆ. ಇಲ್ಲಿ ನೋಡಿ ಕಲ್ಲು ತೆಲೆ ಮೇಲೆ ಹಾಕಿಕೊಂಡು ಗಂಟೆ ಗಟ್ಟಲೇ ಕೂಡುವುದು ಈ ಕ್ಷೇತ್ರದಲ್ಲಿ ನೀಡುವ ಒಂದು ರೀತಿಯ ವಿಭಿನ್ನ ರೀತಿಯ ಚಿಕಿತ್ಸೆ. ಅಜ್ಜಯ್ಯನ ಸನ್ನಿಧಿಯಲ್ಲಿ ಹೀಗೆ ಕಲ್ಲಿನ ಹರಕೆ ತಿರಿಸಿದರು ರೋಗಗಳು ವಾಸಿಯಾಗುತ್ತದೆ ಎಂಬುದು ನಂಬಿಕೆ. ಜೊತೆಗೆ ಮೈಯಲ್ಲಿ ದೆವ್ವ ಬಂದವರಂತೆ ಹಲವಾರು ಮಹಿಳೆಯರರ ವಿಚಿತ್ರ ರೀತಿಯಲ್ಲಿ ಇಲ್ಲಿ ನೃತ್ಯ ಮಾಡುತ್ತಿದ್ದರು.
ಒಟ್ಟಾರೆ ಇಲ್ಲಿ ನಟ ಸುದೀಪ್ ಸೇರಿದಂತೆ ವರ್ಷವಿಡಿ ಲಕ್ಷಾಂತರ ಜನ ಬರುತ್ತಾರೆ. ಮೇಲಾಗಿ ತಮ್ಮ ರೋಗ ವಾಸಿಯಾಗುವ ತನಕ ನೂರಾರು ರೋಗಿಗಳು ಇದೇ ಸ್ಥಳದಲ್ಲಿ ತಿಂಗಳ ಗಟ್ಟಲೆ ವಾಸವಾಗಿರುತ್ತಾರೆ. ಇಂತಹವರಿಗೆ ದೀಪಾವಳಿ ಅಮವಾಸ್ಯೆ ದಿನ ಕಾಯಿಲೆ ವಾಸಿಯಾಗುತ್ತದೆ ಎಂಬುದು ನಂಬಿಕೆ. ಹೀಗಾಗಿ ದೀಪಾವಳಿ ಅಮವಾಸ್ಯೆಗೆ ಭಾರೀ ಮಹತ್ವವಿದೆ.
ಮತ್ತಷ್ಟು ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.