ದಾವಣಗೆರೆ, (ಆಗಸ್ಟ್, 02): ಜಿಲ್ಲೆಯ ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾದ ಬೈಕ್(bike) ಕಳ್ಳತನ ಪ್ರಕರಣದಿಂದ ದಾವಣಗೆರೆ ಆರ್ಟಿಓ ಕಚೇರಿಯ ಬ್ರಹ್ಮಾಂಡ ಭ್ರಷ್ಟಾಚಾರ ಬಟಾಬಯಲಾಗಿದೆ. ಹೌದು…ನಕಲಿ ದಾಖಲೆ ಸೃಷ್ಟಿಸಿ ಒಬ್ಬರ ಬೈಕ್ ಗಳನ್ನ ಇನ್ನೊಬ್ಬರ ಹೆಸರಿಗೆ ಮಾಡಿಕೊಡುತ್ತಿದ್ದ ದಂಧೆ ಬಯಲಿಗೆ ಬಂದಿದೆ. ಬೈಕ್ ಕಳ್ಳತನ ಪ್ರಕರಣದಿಂದ ಈ ಜಾಲ ಪತ್ತೆಯಾಗಿದ್ದು ಈ ಸಂಬಂಧ ದಾವಣಗೆರೆ(ಧಅವಅನಅಗೆರೆ) ಆರ್ ಟಿ ಓ ಕಚೇರಿಯ ಸಿಬ್ಬಂದಿ ಪ್ರದೀಪ, ಜಗದೀಶ, ಶಶಿಕುಮಾರ ಹಾಗೂ ವಸಂತಕುಮಾರ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಅಡಿಕೆ ತೋಟ ನಾಶ ಮಾಡಿದ ದುಷ್ಕರ್ಮಿಗಳು, ವೈಷಮ್ಯಕ್ಕೆ 10 ವರ್ಷದಿಂದ ಪೋಷಣೆ ಮಾಡಿದ ಮರಗಳು ಸರ್ವನಾಶ
ಮೂಲ ಮಾಲೀಕರ ಬದಲು ಬ್ರೋಕರ್ ಸಹಿ ಮಾಡಿಸಿ ಬೇರೆಯವರ ಹೆಸರಿಗೆ ಬೈಕ್ ದಾಖಲು ಮಾಡಿಕೊಟ್ಟಿದ್ದಾರೆ. ಆರ್ ಟಿ ಓ ಎಜೆಂಟ್ ರಸೂಲ್ ಎಂಬಾತನಿಂದ ಸಹಿ ಪಡೆದು ಬೈಕ್ ಗಳ ದಾಖಲಾತಿ ಬದಲಿಸಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾದ ಬೈಕ್ ಕಳ್ಳತನ ಪ್ರಕರಣದಿಂದ ಸಿಬ್ಬಂದಿಯ ಕರ್ಮಕಾಂಡ ಬಯಲಿಗೆ ಬಂದಿದೆ. ಈ ಸಂಬಂಧ ಆರ್ ಟಿಓ ಕಚೇರಿಯ ಹತ್ತು ಜನ ಸಿಬ್ಬಂದಿ ವಿರುದ್ಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ ಮಾಹಿತಿ ನೀಡಿದ್ದಾರೆ.
ಇನ್ನಷ್ಟು ದಾವಣೆಗರೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ