Davangere RTO: ಕದ್ದ ಬೈಕ್ಗಳಿಗೆ ದಾವಣಗೆರೆ RTO ಕಚೇರಿಯಲ್ಲಿಯೇ ಸಕ್ರಮ ಭಾಗ್ಯ! ನಾಲ್ವರು ಸಿಬ್ಬಂದಿ ಅರೆಸ್ಟ್
ನಕಲಿ ದಾಖಲೆ ಸೃಷ್ಟಿಸಿ, ಕದ್ದ ಬೈಕ್ಗಳನ್ನು ಬೇರೆಯರ ಹೆಸರಿಗೆ ನೋಂದಣಿ ಮಾಡಿದ್ದ ಆರೋಪ ಈ ನಾಲ್ವರು ಸಿಬ್ಬಂದಿ ವಿರುದ್ಧ ಕೇಳಿಬಂದಿದೆ. ದಾವಣಗೆರೆ ಆರ್ಟಿಒ ಕಚೇರಿಯ ಸಿಬ್ಬಂದಿ ಪ್ರದೀಪ್, ಜಗದೀಶ್, ಶಶಿಕುಮಾರ್ ಮತ್ತು ವಸಂತಕುಮಾರ್ ಬಂಧಿತ ಆರೋಪಿಗಳು.
ದಾವಣಗೆರೆ, ಆಗಸ್ಟ್ 2: ದಾವಣಗೆರೆ ಆರ್ಟಿಒ (Davangere RTO) ಕಚೇರಿ ಸಿಬ್ಬಂದಿ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಆರ್ಟಿಒ ಕಚೇರಿಯ ನಾಲ್ವರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಆರ್ಟಿಒ ಕಚೇರಿಯ ಸಿಬ್ಬಂದಿ ಪ್ರದೀಪ್, ಜಗದೀಶ್, ಶಶಿಕುಮಾರ್ ಮತ್ತು ವಸಂತಕುಮಾರ್ ಬಂಧಿತ ಆರೋಪಿಗಳು. ನಕಲಿ ದಾಖಲೆ (documents) ಸೃಷ್ಟಿಸಿ, ಕದ್ದ ಬೈಕ್ಗಳನ್ನು (Bike Theft) ಬೇರೆಯರ ಹೆಸರಿಗೆ ನೋಂದಣಿ ಮಾಡಿದ್ದ ಆರೋಪ ಈ ನಾಲ್ವರು ಸಿಬ್ಬಂದಿ ವಿರುದ್ಧ ಕೇಳಿಬಂದಿದೆ.
ಮೂಲ ಮಾಲೀಕರ ಬದಲು ಬ್ರೋಕರ್ ಸಹಿ ಮಾಡಿಸಿ ನಕಲಿ ದಾಖಲೆ ಸೃಷ್ಟಿ ಮಾಡಲಾಗುತ್ತಿತ್ತು. ಆರ್ಟಿಒ ಏಜೆಂಟ್ ರಸೂಲ್ ಎಂಬಾತನಿಂದ ಸಹಿ ಮಾಡಿ ದಾಖಲೆ ಸೃಷಿಯಾಗುತ್ತಿತ್ತು. ಹೊನ್ನಾಳಿ ಠಾಣಾ ವ್ಯಾಪ್ತಿಯಲ್ಲಿ ಕಳುವಾಗಿದ್ದ ಬೈಕ್ಗಳ ಪರಿಶೀಲನೆ ವೇಳೆ ದಾವಣಗೆರೆ ಆರ್ಟಿಒ ಕಚೇರಿ ಸಿಬ್ಬಂದಿ ಕೃತ್ಯ ಬಹಿರಂಗವಾಗಿದೆ. ಪ್ರಕರಣ ಸಂಬಂಧ ಆರ್ಟಿಒ ಕಚೇರಿಯ 10 ಸಿಬ್ಬಂದಿ ವಿರುದ್ಧ ಕೇಸ್ ದಾಖಲಾಗಿದೆ. ದಾವಣಗೆರೆ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ .ಅರುಣ್ ಮಾಹಿತಿ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ