ರಾಜ್ಯ ಸರ್ಕಾರದ ವಿರುದ್ಧ ಮತ್ತೊಮ್ಮೆ ಗುಡುಗಿದ ಹಿರಿಯ ಶಾಸಕ ಶಾಮನೂರ ಶಿವಶಂಕರಪ್ಪ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 16, 2023 | 4:49 PM

ಹಿರಿಯ ಶಾಸಕ ಹಾಗೂ ಅಖಲ ಭಾರತ ವೀರಶೈವ ಮಹಾ ಸಭೆಯ ಅಧ್ಯಕ್ಷ ಶಾಮನೂರ ಶಿವಶಂಕರಪ್ಪ ರಾಜ್ಯ ಸರ್ಕಾರದ ವಿರುದ್ಧ ಮತ್ತೊಮ್ಮೆ ಗುಡುಗಿದ್ದು, ಸಿಎಂ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ ನಾನೇ ಜಾತಿ ಗಣತಿ ವರದಿ ನೋಡಿಲ್ಲ ಅಂತ. ವರದಿ ಜಾರಿ ಮಾಡುವುದು ಬಿಡುವುದು ಅವರನ್ನೆ ಕೇಳಿ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಮತ್ತೊಮ್ಮೆ ಗುಡುಗಿದ ಹಿರಿಯ ಶಾಸಕ ಶಾಮನೂರ ಶಿವಶಂಕರಪ್ಪ
ಶಾಸಕ ಶಾಮನೂರ ಶಿವಶಂಕರಪ್ಪ
Follow us on

ದಾವಣಗೆರೆ, ಡಿಸೆಂಬರ್​ 16: ಸಿಎಂ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ ನಾನೇ ಜಾತಿ ಗಣತಿ ವರದಿ ನೋಡಿಲ್ಲ ಅಂತ. ವರದಿ ಜಾರಿ ಮಾಡುವುದು ಬಿಡುವುದು ಅವರನ್ನೆ ಕೇಳಿ. ಅವರು ಅಲ್ಲಿ ಮಾಡಲಿ, ನಾವು ಇಲ್ಲಿ ಮಾಡುತ್ತೇವೆ ಎಂದು ಹಿರಿಯ ಶಾಸಕ ಹಾಗೂ ಅಖಲ ಭಾರತ ವೀರಶೈವ ಮಹಾ ಸಭೆಯ ಅಧ್ಯಕ್ಷ ಶಾಮನೂರ ಶಿವಶಂಕರಪ್ಪ (Shamanur Shivashankarappa) ರಾಜ್ಯ ಸರ್ಕಾರದ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ಬೆಳಗಾವಿಯಲ್ಲಿ ಜಾತಿ ಗಣತಿ ನಡೆದಿದೆ. ಈಗ ಆಗಿರುವ ಜಾತಿ ಗಣತಿ ಸರಿಯಿಲ್ಲ, ಇನ್ನೊಮ್ಮೆ ಜಾತಿ ಗಣತಿ ಆಗಲಿ ಎಂದು ಸಿಎಂ ಸಿದ್ದರಾಮಯ್ಯಗೆ ಪಕ್ಷಾತೀತವಾಗಿ 60 ಜನ ಶಾಸಕರು ಸಹಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ದಾವಣಗೆರೆಯಲ್ಲಿ ವೀರಶೈವ ಸಮಾವೇಶಕ್ಕೂ ಮುನ್ನ ಮಹಾಸಭಾದಲ್ಲಿ ಬಣಗಳಾಗುತ್ತಾ? ಎಂಬಿ ಪಾಟೀಲ್ ಹೇಳಿದ್ದೇನು?

ಜಾತಿ ಗಣತಿ ಜಾರಿಗೆ ಆಗ್ರಹಿಸಿ ಚಿತ್ರದುರ್ಗದಲ್ಲಿ ಅಹಿಂದಾ ಸಮಾವೇಶ ನಡೆಯುತ್ತಿದೆ.‌ ಇದರಲ್ಲಿ ಸಿಎಂ ಸಿದ್ದರಾಮಯ್ಯ ಸಹ ಪಾಲ್ಗೊಳ್ಳಲಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಅವರು ಅಲ್ಲಿ ಮಾಡಲಿ‌. ನಾವು ಇಲ್ಲಿ ದಾವಣಗೆರೆಯಲ್ಲಿ‌ ವೀರಶೈವ ಸಮಾವೇಶ ಮಾಡುತ್ತೇವೆ ಎಂದಿದ್ದಾರೆ.

ದಾವಣಗೆರೆಯಲ್ಲಿ ಡಿ. 23 ಮತ್ತು 24 ರಂದು ಅಖಿಲ ಭಾತರ ವೀರಶೈವ ಮಹಾ ಸಭೆಯ 24 ನೇ ಮಹಾ ಅಧಿವೇಶನ ನಡೆಯಲಿದೆ. ಇದಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅವರನ್ನ ಆಹ್ವಾನಿಸಲಾಗಿದೆ. ನೋಡಬೇಕು ಬರುತ್ತಾರಾ ಅಂತಾ. ಆದರೆ ಸಿಎಂ ಸಿದ್ದರಾಮಯ್ಯ ಅವರನ್ನ ಮಾತ್ರ ಆಹ್ವಾನಿಸಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜಾತಿ ಗಣತಿ ಬೇಕಿದ್ದರೇ ಸಿದ್ದರಾಮಯ್ಯ ಮಾಡಲಿ ನಮಗೇನೂ ಬೇಸರವಿಲ್ಲ: ಶಾಸಕ ಶಾಮನೂರ ಶಿವಶಂಕರಪ್ಪ

ದಾವಣಗೆರೆಯಲ್ಲಿ ಡಿಸೆಂಬರ್‌ 23, 24, ರಂದು ವೀರಶೈವ ಮಹಾಸಭೆ ಮಹಾ‌ಅಧಿವೇಶನ ಹಿನ್ನೆಲೆ ಇತ್ತೀಚೆಗೆ ಬೆಳಗಾವಿಯ ಖಾಸಗಿ ಹೋಟೆಲ್​ನಲ್ಲಿ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರ ಶಿವಶಂಕರಪ್ಪ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಮಾಡಲಾಗಿದೆ. ಸಭೆಯಲ್ಲಿ ಸಚಿವರಾದ ಈಶ್ವರ ಖಂಡ್ರೆ, ಶಿವಾನಂದ ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್ ಭಾಗಿಯಾದ್ದರು.

ಶಾಸಕರಾದ ಅಲ್ಲಮಪ್ರಭು ಪಾಟೀಲ್, ಶಾಸಕ ಅರವಿಂದ್ ಬೆಲ್ಲದ್, ವಿಜಯಾನಂದ ಕಾಶಪ್ಪನವರ್, ಲತಾ ಮಲ್ಲಿಕಾರ್ಜುನ, ಮಹಾಂತೇಶ್ ಕೌಜಲಗಿ, ವಿನಯ್ ಕುಲಕರ್ಣಿ, ಶರಣಗೌಡ ಕಂದಕೂರ, ಎಂ.ವೈ ಪಾಟೀಲ್, ಬಾಬಾಸಾಹೇಬ್ ಪಾಟೀಲ್, ಬಿ.ಆರ್ ಪಾಟೀಲ್, ಶರಣು ಸಲಗರ, ಎಂಎಲ್‌ಸಿಗಳಾದ ಬಿಜಿ ಪಾಟೀಲ್, ‌ಚನ್ನರಾಜ್ ಹಟ್ಟಿಹೊಳಿ, ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಭಾಗವಹಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.