ದಾವಣಗೆರೆಯಲ್ಲಿ ವೀರಶೈವ ಸಮಾವೇಶಕ್ಕೂ ಮುನ್ನ ಮಹಾಸಭಾದಲ್ಲಿ ಬಣಗಳಾಗುತ್ತಾ? ಎಂಬಿ ಪಾಟೀಲ್ ಹೇಳಿದ್ದೇನು?
ದಾವಣಗೆರೆಯಲ್ಲಿ ಡಿಸೆಂಬರ್ 23, 24 ರಂದು ವೀರಶೈವ ಮಹಾಸಭೆ ಮಹಾಅಧಿವೇಶನ ಹಿನ್ನೆಲೆ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಇಂದು ಪೂರ್ವಭಾವಿ ಸಭೆ ನಡೆಯಿತು. ಈ ಸಭೆಗೆ ಆಗಮಿಸಿದ ಸಚಿವ ಎಂಬಿ ಪಾಟೀಲರು ಅರ್ಧದಲ್ಲೇ ಎದ್ದು ಹೋದರು. ಈ ವೇಳೆ ಮಾತನಾಡಿದ ಅವರು, ಇದು ಪೂರ್ವಭಾವಿ ಸಭೆಯಲ್ಲ. ಸಮಾಜದ ವಿಷಯಗಳ ಕುರಿತು ಚರ್ಚೆ ಮಾಡಲು ಸೇರಲಾಗಿತ್ತು ಎಂದರು.
ಬೆಳಗಾವಿ, ಡಿ.14: ದಾವಣಗೆರೆಯಲ್ಲಿ ಡಿಸೆಂಬರ್ 23, 24 ರಂದು ವೀರಶೈವ ಮಹಾಸಭೆ ಮಹಾಅಧಿವೇಶನ ಹಿನ್ನೆಲೆ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ (Shamanur Shivashankarappa) ನೇತೃತ್ವದಲ್ಲಿ ಬೆಳಗಾವಿಯಲ್ಲಿ ಇಂದು ಪೂರ್ವಭಾವಿ ಸಭೆ ನಡೆಯಿತು. ಈ ಸಭೆಗೆ ಹಲವು ನಾಯಕರು ಆಗಮಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು. ಆದರೆ, ಎಂಬಿ ಪಾಟೀಲ್ (MB Patil) ಅರ್ಧದಲ್ಲೇ ಸಭೆಯಿಂದ ಹೊರ ನಡೆದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾವೇಶದ ಬಗ್ಗೆ ನನಗೆ ಎನೂ ಗೊತ್ತಿಲ್ಲ ಎಂದರು. ಸಮಾವೇಶಕ್ಕೂ ಮುನ್ನವೇ ಮತ್ತೆ ವೀರಶೈವ ಲಿಂಗಾಯತ ಮಹಾಸಭಾದಲ್ಲಿ ಬಣಗಳಾಗುತ್ತವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಹಾ ಅಧಿವೇಶನದ ಬಗ್ಗೆ ಶಾಮನೂರು ಶಿವಸಂಕರಪ್ಪ ಅವರಿಗೆ ಕೇಳಿ. ಸಮಾವೇಶಕ್ಕೆ ನನಗೆ ಕರೆದಿಲ್ಲ, ಕರದರೆ ಹೋಗುವ ವಿಚಾರ ಮಾಡುತ್ತೇನೆ ಎಂದರು.
ಇದು ಮಹಾಅಧಿವೇಶನದ ಪೂರ್ವಭಾವಿ ಸಭೆ ಅಲ್ಲ. ಸಮುದಾಯದ ವಿಚಾರಗಳ ಬಗ್ಗೆ ಚರ್ಚೆ ಮಾಡಲು ನಾವೆಲ್ಲ ಸೇರಿದ್ದೆವು. ನನಗೆ ಆರೋಗ್ಯ ಸರಿ ಇಲ್ಲ. ಹೀಗಾಗಿ ಬೇಗ ಹೋಗುತ್ತಿದ್ದೇನೆ. ಸಭೆಯಲ್ಲಿ ಸಮಾಜದ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.
ಇದನ್ನೂ ಓದಿ: ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ: ಪ್ರಧಾನಿ ಮೋದಿಗೆ ಆಹ್ವಾನ ನೀಡಲಾಗಿದೆ ಎಂದ ಎಂಬಿ ಪಾಟೀಲ್
ಸಮುದಾಯ ಸಮಸ್ಯೆ, ಮೀಸಲಾತಿ, ಉಪ ಪಂಗಡಗಳಿಗೆ ನ್ಯಾಯ ಸಿಗುವ ಬಗ್ಗೆ ಚರ್ಚೆ ಮಾಡುತ್ತೇವೆ. ಸಭೆಯಲ್ಲಿ ಜಾತಿ ಜನಗಣತಿ ವಿಷಯ ಕೂಡ ಚರ್ಚೆ ಆಗುತ್ತಿದೆ. ಜಾತಿ ಗಣತಿಗೆ ಯಾರೂ ವಿರೋಧವಿಲ್ಲ ಸರಿಯಾದ ಗಣತಿ ಆಗಬೇಕು ಸೂಕ್ತ ನ್ಯಾಯ ಸಿಗಬೇಕು. ನಮ್ಮಲ್ಲಿ ಪಂಗಡಗಳಿವೆ ಅವರು ಹಿಂದೂ ಅಂತಾ ಬರೆಸಿರುತ್ತಾರೆ. ಅದನ್ನ ಕೌಂಟ್ ಮಾಡದಿದ್ದರೆ ಸಮುದಾಯ ಸಂಖ್ಯೆ ಕಡಿಮೆ ಆಗುತ್ತದೆ. ಅವರು ಹಿಂದೂ ಬರೆಸಿದ್ದಾರೆ ಅಂತಾ ಬಿಟ್ಟರೆ ತಪ್ಪಾಗುತ್ತದೆ ಎಂದರು.
ನೂರಾರು ಕೋಟಿ ಕೊಟ್ಟು ಸಮೀಕ್ಷೆ ಮಾಡಿದ್ದೀರಿ. ನಮ್ಮ ಬಳಿ ಅಂಕಿ ಅಂಶಗಳಿವೆ. ರಾಜ್ಯ ಸರ್ಕಾರ ಸರ್ವೇ ಮಾಡಿದೆ, ಈ ವೇಳೆ ಡಾಟಾ ಕಲೆಕ್ಟ್ ಮಾಡಿದೆ. ಹಿಂದೂ ಗಾಣಿಗ ಅಂತಾ ಬರೆಸಿದರೂ ಆತ ಲಿಂಗಾಯತ. ಅವನನ್ನೂ ಕೌಂಟ್ ಮಾಡಬೇಕು. ಇಲ್ಲವಾದರೆ ಜನಸಂಖ್ಯೆ ಕಡಿಮೆ ಆಗುತ್ತದೆ. ಎಲ್ಲವನ್ನೂ ಸೇರಿಸಿಕೊಂಡು ಮತ್ತೊಮ್ಮೆ ಜನಗಣತಿ ಮಾಡಿದರೆ ಯಾರ ತೊಂದರೆ ಇಲ್ಲ ಎಂದರು.
ಖಾಸಗಿ ಹೋಟೆಲ್ನಲ್ಲಿ ಪೂರ್ವಭಾವಿ ಸಭೆ
ದಾವಣಗೆರೆಯಲ್ಲಿ ಡಿಸೆಂಬರ್ 23, 24, ರಂದು ವೀರಶೈವ ಮಹಾಸಭೆ ಮಹಾಅಧಿವೇಶನ ಹಿನ್ನೆಲೆ ಇಂದು ಬೆಳಗಾವಿಯಲ್ಲಿ ಖಾಸಗಿ ಹೋಟೆಲ್ನಲ್ಲಿ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರ ಶಿವಶಂಕರಪ್ಪ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಸಚಿವರಾದ ಈಶ್ವರ ಖಂಡ್ರೆ, ಶಿವಾನಂದ ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್ ಭಾಗಿಯಾದರು.
ಶಾಸಕರಾದ ಅಲ್ಲಮಪ್ರಭು ಪಾಟೀಲ್, ಶಾಸಕ ಅರವಿಂದ್ ಬೆಲ್ಲದ್, ವಿಜಯಾನಂದ ಕಾಶಪ್ಪನವರ್, ಲತಾ ಮಲ್ಲಿಕಾರ್ಜುನ, ಮಹಾಂತೇಶ್ ಕೌಜಲಗಿ, ವಿನಯ್ ಕುಲಕರ್ಣಿ, ಶರಣಗೌಡ ಕಂದಕೂರ, ಎಂ.ವೈ ಪಾಟೀಲ್, ಬಾಬಾಸಾಹೇಬ್ ಪಾಟೀಲ್, ಬಿ.ಆರ್ ಪಾಟೀಲ್, ಶರಣು ಸಲಗರ, ಎಂಎಲ್‌ಸಿಗಳಾದ ಬಿಜಿ ಪಾಟೀಲ್, ಚನ್ನರಾಜ್ ಹಟ್ಟಿಹೊಳಿ, ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಭಾಗಿಯಾದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ