ದಾವಣಗೆರೆ, ಮಾ.01: ಕಲ್ಯಾಣ ಮಂಟಪಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರ(Davanagere) ನಗರದ ಶಾಂತಿ ನಗರದ ನಿವಾಸಿ ಕಿರಣ್ (26) ಬಂಧಿತ ಆರೋಪಿ. ಇತನಿಂದ 74 ಸಾವಿರ ರೂಪಾಯಿ ಮೌಲ್ಯದ 13.25 ಗ್ರಾಂ ತೂಕದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ಫೆಬ್ರವರಿ 11 ರಂದು ದಾವಣಗೆರೆ ನಗರದ ಶಾಮನೂರು ರಸ್ತೆಯಲ್ಲಿ ಇರುವ ಬಾಪೂಜಿ ಸಮುದಾಯ ಭವನ ಕಲ್ಯಾಣ ಮಂಟಪದಲ್ಲಿ ಈ ಘಟನೆ ನಡೆದಿತ್ತು.
ದಾವಣಗೆರೆ ನಗರದ ಸರಸ್ವತಿ ಬಡಾವಣೆಯ ಚಿದಾನಂದಗೌಡ ಎಂಬುವರ ಪತ್ನಿಗೆ ಸೇರಿದ ಚಿನ್ನ ಇದಾಗಿದ್ದು, ನಕಲಿ ಕೀ ಬಳಸಿ ಕಲ್ಯಾಣ ಮಂಟಪದ ರೂಮ್ ಪ್ರವೇಶ ಮಾಡಿದ್ದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಇದೇ ರೀತಿ ಕಳೆದ ಎರಡು ಎರಡು ವರ್ಷಗಳಲ್ಲಿ ಮೂರು ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಯಾಣ ಮಂಟಪದಲ್ಲಿ ಕಳ್ಳತನ ಮಾಡಿದ್ದ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ಬಂಧಿಸಿದ ಪೊಲೀಸರು, ಚಿನ್ನದ ಆಭರಣವನ್ನು ವಾರಸುದಾರರಿಗೆ ನೀಡಿದ್ದಾರೆ.
ಇದನ್ನೂ ಓದಿ:Viral Video: ಮದುವೆ ಮಂಟಪದಲ್ಲಿ ಫೋಟೋ ತೆಗೆಸಿಕೊಳ್ಳುವ ವೇಳೆ ವರನ ಕಾಲಿನಲ್ಲಿದ್ದ ಶೂ ಕಳ್ಳತನ; ವೈರಲ್ ವಿಡಿಯೋ ನೋಡಿ
ಬೆಳಗಾವಿ: ನಗರದ ವಾದಿರಾಜ್ ಕಲ್ಯಾಣ ಮಂಟಪದಲ್ಲಿ ಜ.6 ರಂದು ದಾವಣಗೆರೆಯಿಂದ ಪಂಚಾಕ್ಷರಿ-ಲತಾ ದಂಪತಿ ಮದುವೆಗೆ ಬಂದಿದ್ದರು. ತಾಳಿ ಕಟ್ಟಿದ ಬಳಿಕ ವೇದಿಕೆ ಮೇಲೆ ಹೋಗಿ ನವ ಜೋಡಿಗೆ ಶುಭ ಹಾರೈಸಲು ಪಂಚಾಕ್ಷರಿ ಲತಾ ದಂಪತಿ ಹೋಗುವಾಗ ತಾವು ಕುಳಿತಿದ್ದ ಕುರ್ಚಿಯ ಮೇಲೆಯೇ ತಮ್ಮ ವ್ಯಾನಿಟಿ ಬ್ಯಾಗ್ ಇಟ್ಟು ವೇದಿಕೆಗೆ ಹೋಗಿದ್ದಾರೆ. ಇದನ್ನ ನೋಡಿದ ಖದೀಮ, ಆ ವ್ಯಾನಿಟಿ ಬ್ಯಾಗ್ ಪಕ್ಕದ ಕುರ್ಚಿಯಲ್ಲಿ ಬಂದು ಕುಳಿತು ಯಾರಿಗೂ ಗೊತ್ತಾಗದಂತೆ ಬ್ಯಾಗ್ ಎಗರಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದ. ಇತ್ತ ನೂತನ ವಧು-ವರರಿಗೆ ಶುಭ ಹಾರೈಸಿ ಕೆಳಗೆ ಬಂದ ಲತಾ ದಂಪತಿ ವ್ಯಾನಿಟಿ ಬ್ಯಾಗ್ಗಾಗಿ ಹುಡುಕಿ, ಬಳಿಕ ಸಿಸಿಟಿವಿ ಪರಿಶೀಲನೆ ಮಾಡಲಾಗಿದೆ. ಆಗ ಬ್ಯಾಗು ಕಳ್ಳತನ ಮಾಡಿಕೊಂಡು ಹೋಗಿರುವುದು ಗೊತ್ತಾಗಿದೆ. ತಕ್ಷಣ ಸ್ಥಳೀಯ ಮಾಳಮಾರುತಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಲರ್ಟ್ ಆದ ಪೊಲೀಸರು, ಕೇಸ್ ದಾಖಲಿಸಿಕೊಂಡು ಕೇವಲ ಆರೇ ಗಂಟೆಗಳಲ್ಲಿ ಆರೋಪಿಯನ್ನ ಬಂಧಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ