ದಾವಣಗೆರೆ: ನಿದ್ದೆ ಮಾತ್ರೆ ನೀಡಲು ನಿರಾಕರಿಸಿದಕ್ಕೆ ಮೆಡಿಕಲ್ ಶಾಪ್ ಒಡೆದು ಮಾಲೀಕನ ಮೇಲೆ ಹಲ್ಲೆ ಮಾಡಿದ ಯುವಕ
ದಾವಣಗೆರೆಯ ಇಕ್ರಾ ಮೆಡಿಕಲ್ ಶಾಪ್ಗೆ ಬಂದ ಯುವಕನೋರ್ವ ವೈದ್ಯರ ಚೀಟಿ ತೋರಿಸದೆ ನಿದ್ದೆ ಮಾತ್ರ ಕೇಳಿದ್ದ. ಮೆಡಿಕಲ್ ಶಾಪ್ ಮಾಲೀಕ ಮಾತ್ರೆ ನೀಡಲು ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಯುವಕ ಹತ್ತೇ ನಿಮಿಷದಲ್ಲಿ ಇಡೀ ಮೆಡಿಕಲ್ ಶಾಪ್ನ ಗ್ಲಾಸ್ ಒಡೆದು ಹಾಕಿದ್ದಾನೆ. ಬಳಿಕ ಮೆಡಿಕಲ್ ಶಾಪ್ ಮಾಲೀಕ ಅಮಾನುದ್ದೀನ್ ಮೇಲೆ ಹಲ್ಲೆ ಮಾಡಿದ್ದಾನೆ.

ದಾವಣಗೆರೆ, ಅ.02: ವೈದ್ಯರ ಚೀಟಿ ಇಲ್ಲದಿದ್ದಕ್ಕೆ ನಿದ್ದೆ ಮಾತ್ರೆಯನ್ನು (Sleeping Tablet) ನೀಡಲು ನಿರಾಕರಿಸಿದಕ್ಕೆ ಸಿಟಿಗೆದ್ದ ಯುವಕನೋರ್ವ ಮೆಡಿಕಲ್ ಶಾಪ್ (Medical Shop) ಗ್ಲಾಸ್ ಒಡೆದು ಮಾಲೀಕನ ಮೇಲೆ ಹಲ್ಲೆ ನಡೆಸಿದ ಘಟನೆ ದಾವಣಗೆರೆ ಜಿಲ್ಲೆ ಹರಿಹರ ನಗರದ ಇಕ್ರಾ ಮೆಡಿಕಲ್ ಶಾಪ್ನಲ್ಲಿ ನಡೆದಿದೆ. ಇನ್ನು ಹಲ್ಲೆ ಮಾಡಿ ಓಡಿ ಹೋಗುತ್ತಿದ್ದ ಯುವಕನನ್ನು ಸ್ಥಳೀಯರು ಹಿಡಿದು ಧರ್ಮದೇಟು ನೀಡಿ ಬುದ್ದಿ ಕಲಿಸಿದ್ದು ಪೊಲೀಸರ ಕೈಗೆ ಒಪ್ಪಿಸಿದ್ದಾರೆ. ಮೆಡಿಕಲ್ ಶಾಪ್ ಮಾಲೀಕ ಅಮಾನುದ್ದೀನ್ ಹಲ್ಲೆಗೊಳಗಾದ ವ್ಯಕ್ತಿ. ಸದ್ಯ ಯುವಕನನ್ನು ಹರಿಹರ ನಗರ ಪೊಲೀಸರು (Harihara Rural Police Station) ವಶಕ್ಕೆ ಪಡೆದಿದ್ದಾರೆ.
ಇಕ್ರಾ ಮೆಡಿಕಲ್ ಶಾಪ್ಗೆ ಬಂದ ಯುವಕನೋರ್ವ ವೈದ್ಯರ ಚೀಟಿ ತೋರಿಸದೆ ನಿದ್ದೆ ಮಾತ್ರ ಕೇಳಿದ್ದ. ಆದರೆ ಚೀಟಿ ಇಲ್ಲದೆ ನಿದ್ದೆ ಮಾತ್ರ ನೀಡುವಂತಿಲ್ಲ. ಹೀಗಾಗಿ ಮೆಡಿಕಲ್ ಶಾಪ್ ಮಾಲೀಕ ಮಾತ್ರೆ ನೀಡಲು ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಯುವಕ ಹತ್ತೇ ನಿಮಿಷದಲ್ಲಿ ಇಡೀ ಮೆಡಿಕಲ್ ಶಾಪ್ನ ಗ್ಲಾಸ್ ಒಡೆದು ಹಾಕಿದ್ದಾನೆ. ಬಳಿಕ ಮೆಡಿಕಲ್ ಶಾಪ್ ಮಾಲೀಕ ಅಮಾನುದ್ದೀನ್ ಮೇಲೆ ಹಲ್ಲೆ ಮಾಡಿದ್ದಾನೆ. ಹ್ಲಲೆ ಮಾಡಿದ ನಂತರ ಸ್ಥಳದಿಂದ ಕಾಲ್ಕಿತ್ತಿದ್ದು ಸ್ಥಳೀಯರು ಯುವಕನನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವಕನ ವರ್ತನೆಯಿಂದ ಸ್ಥಳದಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಸೌಹಾರ್ದ ಸಭೆ – ಶಾಂತಿ ಹಾಳಾಗುತ್ತಿರುವ ಮೂಲ ಎಲ್ಲಿದೆ, ಅದರ ತಾಯಿ ಬೇರನ್ನು ಚಿವುಟಿಹಾಕಿ -ವಿನಯ್ ಗುರೂಜಿ
ಮಾರಮ್ಮ ದೇಗುಲ ಪ್ರವೇಶ ಸಂಬಂಧ 2 ಗುಂಪುಗಳ ಮಧ್ಯೆ ಗಲಾಟೆ
ಇನ್ನು ಮತ್ತೊಂದೆಡೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಗದಹಳ್ಳಿಯಲ್ಲಿ 2 ಗುಂಪುಗಳ ಮಧ್ಯೆ ಗಲಾಟೆ ನಡೆದಿದ್ದು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಮಾರಮ್ಮ ದೇಗುಲ ಪ್ರವೇಶ ಸಂಬಂಧ 2 ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ. ಗ್ರಾಮಕ್ಕೆ ತಹಶೀಲ್ದಾರ್ ಭೇಟಿ ನೀಡಿದ್ದು 2 ಗುಂಪುಗಳ ನಡುವೆ ಶಾಂತಿ ಮಾತುಕತೆ ನಡೆಸಿದ್ದಾರೆ. ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯಿಂದ ತ್ಯಾಗದಹಳ್ಳಿಯಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ. ಗ್ರಾಮದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ



