
ದಾವಣಗೆರೆ, ಮೇ 06: ರೌಡಿಶೀಟರ್ ಸಂತೋಷ್ ಕುಮಾರ್ ಹತ್ಯೆ ಪ್ರಕರಣದ 10 ಮಂದಿ ಆರೋಪಿಗಳು ಹೊಳಲ್ಕೆರೆ ಠಾಣೆ ಪೊಲೀಸರ ಎದುರು ಶರಣಾಗಿದ್ದಾರೆ. ಪ್ರಕರಣ ಸಂಬಂಧ 12 ಜನರ ವಿರುದ್ಧ ದಾವಣಗೆರೆಯ (Davangere) ವಿದ್ಯಾನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮೃತ ಸಂತೋಷ್ ಕುಮಾರ್ ಪತ್ನಿ ಶ್ರುತಿ ದೂರಿನ ಮೇರೆಗೆ ಆರೋಪಿಗಳಾದ ಕಾರ್ತಿಕ್(22), ಚವಳಿ ಸಂತು(30), ನವೀನ್(26) ನವೀನ್(26), ಗುಂಡಪ್ಪ(32), ಬಸವರಾಜ್(22), ಹನುಮಂತಪ್ಪ(23), ಗಿಡ್ಡ ವಿಜಿ(27), ಚಿಕ್ಕಮ್ಮನಹಳ್ಳಿ ಶಿವು(30), ಕಡ್ಡಿ ರಾಘು(27), ಪ್ರಶಾಂತ್(28) ಮತ್ತು ನಿಟ್ಟುವಳ್ಳಿಯ ಗಣಿ ಸೇರಿದಂತೆ ಇತರರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬಹುತೇಕ ಆರೋಪಿಗಳು ಹತ್ಯೆಯಾದ ಸಂತೋಷ್ ಕುಮಾರ್ನ ಆಪ್ತರಾಗಿದ್ದಾರೆ. ರೌಡಿಶೀಟರ್ ಬುಳ್ಳ ನಾಗನ ಹತ್ಯೆಯಲ್ಲೂ ಇದೇ ಆರೋಪಿಗಳು ಭಾಗಿಯಾಗಿದ್ದರು. ಇದೇ ಗ್ಯಾಂಗ್ನಿಂದ ಸಂತೋಷ್ ಕುಮಾರ್ ಅಲಿಯಾಸ್ ಕಣುಮಾ ಹತ್ಯೆಯಾಗಿದೆ. ಸೋಮವಾರ ದಾವಣಗೆರೆಯ ಸೋಮೇಶ್ವರ ಆಸ್ಪತ್ರೆ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಸಂತೋಷ್ ಕುಮಾರ್ನನ್ನು ಆರೋಪಿಗಳು ಹತ್ಯೆಗೈದಿದ್ದರು.
ಕೊಲೆಯಾದ ರೌಡಿಶೀಟರ್ ಕಣುಮ ಸಂತೋಷ್ ಕುಮಾರ್ ಮೂಲತಃ ಚಿತ್ರದುರ್ಗ ಜಿಲ್ಲೆಯ ಹಿರಿಯೂರ ಬಳಿಯ ಮಾರಿ ಕಣವಿ ನಿವಾಸಿಯಾಗಿದ್ದನು. ಸಂತೋಷ ಕುಮಾರ್ ತಾಯಿಯ ತವರು ದಾವಣಗೆರೆಯಾದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ನೆಲೆಸಿದ್ದರು. ಕಣುಮ ಬೆಳೆಯುವುದರ ಜೊತೆಗೆ ಸೊಪ್ಪು ಮಾರುತ್ತಿದ್ದನು. ನಂತರ, ರೌಡಿಸಂಗೆ ಇಳಿದ ಕಣುಮ ಸಂತೋಷ ಕುಮಾರ್ ದಾವಣಗೆರೆ ಜಿಲ್ಲೆಯಲ್ಲಿನ ರೌಡಿಶೀಟರ್ ಗಳಾದ ಬುಳ್ಳ್ ನಾಗಾ, ಜೈಮ್ ಯೋಗಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದನು.
ಇದನ್ನೂ ಓದಿ: ಕೊಡಗು: ಕಾಫಿ ತೋಟದಲ್ಲಿ ಗುಂಡಿಕ್ಕಿ ವ್ಯಕ್ತಿಯ ಕೊಲೆ
ಅವರೆಲ್ಲ ಹತರಾದ ಮೇಲೆ ಇತನೇ ದಾವಣಗೆರಯಲ್ಲಿ ಕಿಂಗ್ ಆಗಿದ್ದನು. ಅಡಿಕೆ ತೋಟ ಮಾಡಿಕೊಂಡು, ರಿಯಲ್ ಎಸ್ಟೇಟ್ ಉದ್ಯಮ ಮಾಡಿಕೊಂಡಿದ್ದನು. ಆದರೆ, ತನ್ನ ಸಹಚರರಿಗೆ ನೀಡಿದ್ದ ವಾಗ್ದಾನ್ ಪೂರೈಸಿರಲಿಲ್ಲ. ಈ ಕಾರಣಕ್ಕೆ ರೌಡಿಶೀಟರ್ ಸಂತೋಷ ಕುಮಾರ್ನನ್ನು ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ