ದಾವಣಗೆರೆ ವಿವಿ ಸಿಬ್ಬಂದಿ ಎಡವಟ್ಟು: ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ಬದಲು ಉತ್ತರ ಪತ್ರಿಕೆ ನೀಡಿ ನಿರ್ಲಕ್ಷ್ಯ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 06, 2024 | 5:03 PM

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಮಹಾ ಎಡವಟ್ಟು ನಡೆದಿದ್ದು, ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಕೊಡುವ ಬದಲು ಉತ್ತರ ಇರುವ ಪೇಪರ್ ಕೊಟ್ಟು ನಿರ್ಲಕ್ಷ್ಯ ಮೆರೆಯಲಾಗಿದೆ. ಇಂದು ನಡೆದ ಬಿ.ಕಾಂ ನ ಇ- ಕಾಮರ್ಸ್ ಪರೀಕ್ಷೆಯಲ್ಲಿ ಈ ಎಡವಟ್ಟು ನಡೆದಿದೆ. ಈ ಹಿನ್ನಲೆ ದಾವಣಗೆರೆ ವಿಶ್ವವಿದ್ಯಾಲಯ ಪರೀಕ್ಷಾಂಗ ಕುಲಸಚಿವ ರಮೇಶ್ ಅವರು ಪರೀಕ್ಷೆಯನ್ನು ಮುಂದೂಡಿದ್ದಾರೆ.

ದಾವಣಗೆರೆ ವಿವಿ ಸಿಬ್ಬಂದಿ ಎಡವಟ್ಟು: ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ಬದಲು ಉತ್ತರ ಪತ್ರಿಕೆ ನೀಡಿ ನಿರ್ಲಕ್ಷ್ಯ
ಪ್ರಶ್ನೆಪತ್ರಿಕೆ ಬದಲು ಉತ್ತರ ಪತ್ರಿಕೆ ನೀಡಿದ ದಾವಣಗೆರೆ ವಿವಿ ಸಿಬ್ಬಂದಿ
Follow us on

ದಾವಣಗೆರೆ, ಆ.06: ದಾವಣಗೆರೆ ವಿಶ್ವವಿದ್ಯಾಲಯ(Davanagere University) ವ್ಯಾಪ್ತಿಯಲ್ಲಿ ಇಂದು ನಡೆದ ಬಿ.ಕಾಂ ನ ಇ- ಕಾಮರ್ಸ್ ಪರೀಕ್ಷೆಯಲ್ಲಿ ಎಡವಟ್ಟಾಗಿದ್ದು, ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಕೊಡುವ ಬದಲು ಉತ್ತರ ಇರುವ ಪೇಪರ್ ಕೊಟ್ಟು ನಿರ್ಲಕ್ಷ್ಯ ಮೆರೆಯಲಾಗಿದೆ. ಆರನೇ ಸೆಮಿಸ್ಟರ್ ವಿಧ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡುವ ಬದಲು ಉತ್ತರ ಇರುವ ಪತ್ರಿಕೆ ನೀಡಿದ್ದಾರೆ. ಇದನ್ನು ನೋಡಿದ ವಿದ್ಯಾರ್ಥಿಗಳು ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದ್ದಾರೆ.

ವ್ಯಾಲ್ಯೂಯೇಟರ್​ಗಳಿಗೆ ನೀಡುವ ಪ್ರತಿ ಇದು

ಮೌಲ್ಯಮಾಪನ ಮಾಡುವ ಸಂದರ್ಭದಲ್ಲಿ ಮೌಲ್ಯಮಾಪಕರುಗಳಿಗೆ ನೀಡುವ ಉತ್ತರ ಪ್ರತಿ ಇದಾಗಿದ್ದು, ವಿದ್ಯಾರ್ಥಿಗಳಿಗೆ ನೀಡಿ ಎಡವಟ್ಟು ಮಾಡಿಕೊಂಡಿದ್ದಾರೆ. ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ 60 ಕಾಲೇಜುಗಳ ಪೈಕಿ 15 ಕಾಲೇಜುಗಳಿಗೆ ಪರೀಕ್ಷೆಯಲ್ಲಿ ಈ ತೊಂದರೆ ಉಂಟಾಗಿದೆ. ಈ ಹಿನ್ನಲೆ ದಾವಣಗೆರೆ ವಿಶ್ವವಿದ್ಯಾಲಯ ಪರೀಕ್ಷಾಂಗ ಕುಲಸಚಿವ ರಮೇಶ್ ಅವರು ಪರೀಕ್ಷೆಯನ್ನು ಮುಂದೂಡಿದ್ದಾರೆ.

ಇದನ್ನೂ ಓದಿ:ಕೋಚಿಂಗ್ ಇಲ್ಲದೇ ದಾವಣಗೆರೆ ಯುವತಿ UPSC ಪರೀಕ್ಷೆಯಲ್ಲಿ ಸಾಧನೆ: ರಾಜ್ಯಕ್ಕೆ 101ನೇ ರ್‍ಯಾಂಕ್

2017 ರಲ್ಲಿ ನಡೆದಿತ್ತು ಇಂತಹುದೆ ಘಟನೆ

ಇನ್ನು ದಾವಣಗೆರೆ ವಿಶ್ವವಿದ್ಯಾಲಯ  ಮಾಡುವ ಎಡವಟ್ಟು ಇದೇ ಮೊದಲಲ್ಲ, 2017 ರಲ್ಲೂ ಕೂಡ ಬಿಎ ಪದವಿಯ ಮೂರನೇ ಸೆಮಿಸ್ಟರ್​ನ ಸಮಾಜಶಾಸ್ತ್ರ ಪ್ರಶ್ನೆಪತ್ರಿಕೆ ಅದಲು ಬದಲು ಆಗಿರುವ ಘಟನೆ ನಡೆದಿತ್ತು. ಅಂದು ಕೂಡ ಪರೀಕ್ಷಾ ಸಿಬ್ಬಂದಿಗಳ ಎಡವಟ್ಟಿಗೆ ವಿದ್ಯಾರ್ಥಿಗಳು ನಷ್ಟ ಅನುಭವಿಸಬೇಕಾಗಿತ್ತು. ಪರೀಕ್ಷಾ ಮೇಲ್ವಿಚಾರಕರ ಎಡವಟ್ಟಿನಿಂದ ಪ್ರಶ್ನೆಪತ್ರಿಕೆ ಅದಲು ಬದಲಾಗಿದ್ದು, ಮೂರು ಗಂಟೆ ವಿದ್ಯಾರ್ಥಿಗಳು ಹಳೆಯ ಪಠ್ಯ ಕ್ರಮದ ಪ್ರಶ್ನೆಪತ್ರಿಕೆಗೆ ಉತ್ತರ ಬರೆದಿದ್ದರು. ಇದೀಗ ಪ್ರಶ್ನೆ ಪತ್ರಿಕೆ ಬದಲು ಉತ್ತರ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಮತ್ತೊಮ್ಮೆ ಎಡವಟ್ಟು ಮಾಡಿಕೊಂಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ ಮಾಡಿ