AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Davanagere: ಕಂಪೌಂಡ್​ ಮೇಲಿಂದ ಬಿದ್ದು ವಿದ್ಯಾರ್ಥಿನಿ ಸಾವು ಪ್ರಕರಣಕ್ಕೆ ಮರುಜೀವ: ಸಾವಿನ ಸುತ್ತ ಅನುಮಾಗಳ ಹುತ್ತ

ಅದೊಂದು ಪ್ರತಿಷ್ಠಿತ ಶಾಲೆ. ಆ ಶಾಲೆಯ ವಿದ್ಯಾರ್ಥಿನಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿದ್ದಳು. ಶಾಲೆಯ ಕಂಪೌಂಡ ಮೇಲಿಂದ ಬಿದ್ದು ಗಾಯಗೊಂಡು ಕೊನೆಯುಸಿರೆಳೆದಿದ್ದಾಳೆ ಎಂದು ಕೇಸ್ ಆಗಿತ್ತು. ಇದೀಗ ಪ್ರಕರಣ ನಡೆದ ಒಂದು ವಾರದ ಬಳಿಕ ಕೇಸ್​ಗೆ ಮರು ಜೀವ ಬಂದಿದೆ. ಪಾಲಕರು ಎಚ್ಚತ್ತುಕೊಂಡಿದ್ದು, ಮಗಳ ಸಾವಿನ ಸತ್ಯ ತಿಳಿಯಲು ಮುಂದಾಗಿದ್ದಾರೆ.

Davanagere: ಕಂಪೌಂಡ್​ ಮೇಲಿಂದ ಬಿದ್ದು ವಿದ್ಯಾರ್ಥಿನಿ ಸಾವು ಪ್ರಕರಣಕ್ಕೆ ಮರುಜೀವ: ಸಾವಿನ ಸುತ್ತ ಅನುಮಾಗಳ ಹುತ್ತ
ಮೃತ ವಿದ್ಯಾರ್ಥಿ
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on:Jun 25, 2023 | 11:28 AM

Share

ದಾವಣಗೆರೆ: ಪೋಟೋದಲ್ಲಿರುವ ಮುದ್ದಾದ ಹುಡುಗಿಯ ಹೆಸರು ಸಿನಿಕ್ಷಾ, ಉತ್ತಮ ಕ್ರೀಡಾ ಪಟು. ಜೀವನದಲ್ಲಿ ತನ್ನ ಮಗಳು ಎನಾದ್ರು ಸಾಧನೆ ಮಾಡುತ್ತಾಳೆ ಎಂಬ ನಂಬಿಕೆಯಲ್ಲಿದ್ದ ತಂದೆ. ಹೀಗಾಗಿ ಮನೆಯಲ್ಲಿದ್ರೆ, ಮಗಳ ಓದಿಗೆ ಅಡೆತಡೆ ಆಗಬಹುದೆಂದು ತಂದೆ ತಾಯಿ ಸೇರಿ, ದಾವಣಗೆರೆ (Davanagere) ಜಿಲ್ಲೆಯ ಹರಿಹರ ತಾಲೂಕಿನ ಕುರುಬರಹಳ್ಳಿ ಬಳಿ ಇರುವ ಪ್ರತಿಷ್ಠಿತ ಮಾನ್ಯತಾ ಪಬ್ಲಿಕ್ ವಸತಿ ಶಾಲೆ (Manyata Public Residential School) ಗೆ ಸೇರ್ಪಡೆ ಮಾಡಿದ್ದರು. ಆ ಶಾಲೆಗೆ ಸೇರಿದ ನಾಲ್ಕೇ ದಿನಕ್ಕೆ ಸಿನಿಕ್ಷಾ ಸಾವನ್ನಪ್ಪಿದ್ದಳು. ಇಲ್ಲಿ ನಾಲ್ಕನೇ ತರಗತಿಯಿಂದ ಪಿಯುಸಿಯವರೆಗೆ ಬರೊಬ್ಬರಿ 900ರಿಂದ ಒಂದು ಸಾವಿರ ಮಕ್ಕಳು ಹೆಣ್ಣು ಓದುತ್ತಿದ್ದಾರೆ. ಇದೇ ಜೂನ್ 5 ರಂದು ಸಿನಿಕ್ಷಾಗಳನ್ನು ಶಾಲೆಗೆ ಬಿಟ್ಟಿದ್ದಾರೆ. ಮೊದಲ ಸಲ ಮನೆ ಬಿಟ್ಟ ಕಾರಣ, ಮರು ದಿನವೇ ತಂದೆ ತಾಯಿ ಮಗಳನ್ನ ನೋಡಲು ಬಂದಿದ್ದಾರೆ. ಆದ್ರೆ, ಶಾಲೆಯವರು ಒಳಗೆ ಬಿಟ್ಟಿಲ್ಲ. ಮಗಳನ್ನು ಭೇಟಿ ಸಹ ಮಾಡಿಸಿಲ್ಲ. ಇದಾದ ಬಳಿಕ ಜೂನ್.9ರಂದು, ನಿಮ್ಮ ಮಗಳು ಕಂಪೌಂಡ್​ ಮೇಲಿಂದ ಬಿದ್ದಿದ್ದು, ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕರೆ ಮಾಡಿ ತಿಳಿಸಿದ್ದಾರೆ. ಅಲ್ಲಿಯೇ ಸಾವನ್ನಪ್ಪಿದ್ದಾಳೆ. ಆದ್ರೆ, ಪಾಲಕರು ಆಸ್ಪತ್ರೆಗೆ ಬರುವ ಮೊದಲೇ ಸಿನಿಕ್ಷಾ ಸಾವನ್ನಪ್ಪಿದ್ದಳು ಎಂದು ಹೇಳಿದ್ದಾರೆ.

ಮಗಳ ಸಾವಿನ ಬಗ್ಗೆ ಶುರುವಾದ ಅನುಮಾನ

ಇನ್ನು ಮೃತ ಬಾಲಕಿ ತಂದೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಪ್ರಸಿದ್ಧ ವ್ಯಾಪಾರಿ, ಇವರಿಗೆ ಇದ್ದ ಓರ್ವ ಮಗಳನ್ನು ಕಳೆದುಕೊಂಡು ಇದೀಗ ಸೂತಕದಲ್ಲಿದ್ದಾರೆ. ಈ ಮಧ್ಯೆ ಮಗಳ ಸಾವಿನ ಬಗ್ಗೆ ಹತ್ತಾರು ಸಂಶಯಗಳು ಶುರುವಾಗಿವೆ. ಹಾಸ್ಟೆಲ್​ ಪಕ್ಕದಲ್ಲಿ ಮೂರು ಅಡಿ ಕಂಪೌಂಡ ಇದ್ದು, ಇದರ ಮೇಲಿಂದ ಬಿದ್ದರೇ ಸಾವನ್ನಪ್ಪುವ ಸಾದ್ಯತೆ ಕಡಿಮೆ. ಸಿನಿಕ್ಷಾಗಳ ಶವವನ್ನ ನೋಡಿದಾಗ ಅದು ಹಳದಿ ಬಣ್ಣಕ್ಕೆ ತಿರುಗಿತ್ತು. ಜೊತೆಗೆ ಕಂಪೌಂಡಗಳ ಕಡೆ ಇರುವ ಸಿಸಿ ಕ್ಯಾಮರಾ ಕೆಲಸ ಮಾಡುತ್ತಿಲ್ಲವಂತೆ. ಹೀಗೆ ಸಾವಿನ ಸುತ್ತ ಹತ್ತಾರು ಸಂಶಯಗಳು ಕೇಳಿ ಬರುತ್ತಿವೆ ಎಂದು ಪಾಲಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಗೀತಮ್ ಕಾಲೇಜಿನ ಮೇಲೆ ವಿದ್ಯಾರ್ಥಿಗಳು ಕಲ್ಲುತೂರಾಟ ನಡೆಸಿದ್ದಕ್ಕೆ ವಿದ್ಯಾರ್ಥಿನಿ ಸಾವು ಬಿಟ್ಟು ಬೇರೆ ಕಾರಣಗಳಿವೆಯೇ?

ಇದರಲ್ಲಿ ನಮ್ಮದೇನು ತಪ್ಪಿಲ್ಲ ಎಂದ ಶಾಲಾ ಮುಖ್ಯಸ್ಥರು

ಈ ಕುರಿತು ಶಾಲೆ ಮುಖ್ಯಸ್ಥರಾದ ನಾಡಗೌಡರ ಅವರು ಮಾತನಾಡಿ ‘ಇದರಲ್ಲಿ ನಮ್ಮದೇನು ತಪ್ಪಿಲ್ಲ. ಓದುತ್ತಿದ್ದವಳು ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೋಗಿದ್ದಳು. ಬಳಿಕ ಕಂಪೌಂಡ ಮೇಲಿಂದ ಬಿದ್ದಿದ್ದಾಳೆ. ನಾವು ಮೊದಲು ಹರಿಹರ ಖಾಸಗಿ ಆಸ್ಪತ್ರೆ ತೋರಿಸಿ ಸ್ಥಿತಿ ಗಂಭೀರವಿದೆ ಅಂದಾಗ ದಾವಣಗೆರೆ ಬಾಪೂಜಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದೇವೆ ಎನ್ನುತ್ತಾರೆ. ಹೀಗಾಗಿ ಹರಿಹರ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿನಿಕ್ಷಾ ಬಿದ್ದ ಸ್ಥಳದ ಮಹಜರು ಸಹ ಇನ್ನೊಮ್ಮೆ ಮಾಡಿದರು. ಸಿನಿಕ್ಷಾ ಜೊತೆಗೆ ರೂಮ್ ನಲ್ಲಿ ಇದ್ದ ವಿದ್ಯಾರ್ಥಿನಿಯರಿಂದಲೂ ಮಾಹಿತಿ ಸಂಗ್ರಹಿಸಿದರು. ಸಿನಿಕ್ಷಾ ಸಾವಿನ ಸತ್ಯಕ್ಕಾಗಿ ಪಾಲಕರು ಹೋರಾಟ ಸುರು ಮಾಡಿದ್ದಾರೆ. ಇದೇ ಶಾಲೆಯಲ್ಲಿ 2015ರಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ಮೂಲದ ವಿದ್ಯಾರ್ಥಿ ಮಾಲಾಶ್ರೀ ಸಾವನ್ನಪ್ಪಿದ್ದಳು. ಈ ಘಟನೆ ಇದಕ್ಕೆ ಇನ್ನಷ್ಟು ಶಕ್ತಿ ಬರುವಂತೆ ಮಾಡಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:28 am, Sun, 25 June 23

ಫ್ಯಾನ್ಸ್​ಗೆ ಸಿಹಿ ಸುದ್ದಿ ನೀಡಿ ಮನೆಗೆ ಮರಳಿದ ವಿರಾಟ್ ಕೊಹ್ಲಿ
ಫ್ಯಾನ್ಸ್​ಗೆ ಸಿಹಿ ಸುದ್ದಿ ನೀಡಿ ಮನೆಗೆ ಮರಳಿದ ವಿರಾಟ್ ಕೊಹ್ಲಿ
‘ಧುರಂಧರ್’ ಸಿನಿಮಾದ ಭಯಂಕರ ದೃಶ್ಯದ ಶೂಟಿಂಗ್ ಆಗಿದ್ದು ಹೀಗೆ.. ವಿಡಿಯೋ ನೋಡಿ
‘ಧುರಂಧರ್’ ಸಿನಿಮಾದ ಭಯಂಕರ ದೃಶ್ಯದ ಶೂಟಿಂಗ್ ಆಗಿದ್ದು ಹೀಗೆ.. ವಿಡಿಯೋ ನೋಡಿ
ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ