ಇರೋದು 4 ಆದ್ರೆ 35 ವಿದ್ಯಾರ್ಥಿನಿಯರ ಹಾಜರಾತಿ ತೋರಿಸಿ ಸರ್ಕಾರಕ್ಕೆ ವಂಚನೆ, ತಹಶೀಲ್ದಾರ್ ದಾಳಿಯಿಂದ ಅಕ್ರಮ ಬಯಲು

| Updated By: ಆಯೇಷಾ ಬಾನು

Updated on: Dec 15, 2021 | 1:45 PM

ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ ಮೇಲೆ ಪೊಲೀಸ್ ಸಿಬ್ಬಂದಿ ಸಹಿತ ಚನ್ನಗಿರಿ ತಹಶೀಲ್ದಾರ್ ಪಟ್ಟರಾಜಗೌಡ ಅನಿರೀಕ್ಷಿತ ದಾಳಿ ನಡೆಸಿದಾಗ ಅಕ್ರಮ ಬಯಲಾಗಿದೆ. ಕೇವಲ ನಾಲ್ಕು ಜನ ವಿದ್ಯಾರ್ಥಿನಿಯರಿಗೆ ಊಟ-ವಸತಿ ನೀಡಿ 35 ಜನ ವಿದ್ಯಾರ್ಥಿಗಳ ಹಾಜರಾತಿ ತೋರಿಸಿ ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ.

ಇರೋದು 4 ಆದ್ರೆ 35 ವಿದ್ಯಾರ್ಥಿನಿಯರ ಹಾಜರಾತಿ ತೋರಿಸಿ ಸರ್ಕಾರಕ್ಕೆ ವಂಚನೆ, ತಹಶೀಲ್ದಾರ್ ದಾಳಿಯಿಂದ ಅಕ್ರಮ ಬಯಲು
ಇರೋದು 4 ವಿದ್ಯಾರ್ಥಿನಿಯರು ಆದ್ರೆ 35 ವಿದ್ಯಾರ್ಥಿನಿಯರ ಹಾಜರಾತಿ ಸರ್ಕಾರಕ್ಕೆ ತೋರಿಸಿ ವಂಚನೆ, ತಹಶೀಲ್ದಾರ್ ದಾಳಿಯಿಂದ ಅಕ್ರಮ ಬಯಲು
Follow us on

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆರೆಬಿಳಚಿಯ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ ಸಿಬ್ಬಂದಿಯಿಂದ ವಂಚನೆ ನಡೆದಿದೆ. ನಾಲ್ವರು ವಿದ್ಯಾರ್ಥಿನಿಯರಿಗೆ ಮಾತ್ರ ಊಟ, ವಸತಿ ನೀಡಿ 35 ವಿದ್ಯಾರ್ಥಿನಿಯರ ಹಾಜರಾತಿ ಸರ್ಕಾರಕ್ಕೆ ತೋರಿಸಿ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ ಸಿಬ್ಬಂದಿ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ ಮೇಲೆ ಪೊಲೀಸ್ ಸಿಬ್ಬಂದಿ ಸಹಿತ ಚನ್ನಗಿರಿ ತಹಶೀಲ್ದಾರ್ ಪಟ್ಟರಾಜಗೌಡ ಅನಿರೀಕ್ಷಿತ ದಾಳಿ ನಡೆಸಿದಾಗ ಅಕ್ರಮ ಬಯಲಾಗಿದೆ. ಕೇವಲ ನಾಲ್ಕು ಜನ ವಿದ್ಯಾರ್ಥಿನಿಯರಿಗೆ ಊಟ-ವಸತಿ ನೀಡಿ 35 ಜನ ವಿದ್ಯಾರ್ಥಿಗಳ ಹಾಜರಾತಿ ತೋರಿಸಿ ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ. ಹಾಸ್ಟೆಲ್ನಲ್ಲಿ ಕೇವಲ ನಾಲ್ಕು ಮಕ್ಕಳು ಮಾತ್ರ ಕಂಡು ಬಂದಿದ್ದಾರೆ. ಆಗ ಅಧಿಕಾರಿಗಳು ವಿದ್ಯಾರ್ಥಿನಿಯರು ಓದುತ್ತಿದ್ದ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹಾಸ್ಟೆಲ್ ಸಿಬ್ಬಂದಿ ಸರಿಯಾಗಿ ಊಟ ತಿಂಡಿ‌ ಕೊಡದೆ ಕಿರುಕುಳ ನೀಡುತ್ತಿರುವುದಾಗಿ ತಹಶೀಲ್ದಾರ್ ಮುಂದೆ ವಿದ್ಯಾರ್ಥಿನಿಯರು ಬಾಯಿ ಬಿಟ್ಟಿದ್ದಾರೆ.

ಬೆಳಿಗ್ಗೆ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ ಮೇಲೆ ದಾಳಿ ಮಾಡಿದ್ವಿ. ಇಲ್ಲಿ 35 ಜನ ವಿದ್ಯಾರ್ಥಿಗಳಿದ್ದಾರೆಂದು ದಾಖಲೆಯಲ್ಲಿದೆ ಆದ್ರೆ 4 ವಿದ್ಯಾರ್ಥಿನಿಯರು ಮಾತ್ರ ಇದ್ದಾರೆ. ಅದಕ್ಕೆ ಬೇಕಾದ ಯಾವುದೇ ರೇಷನ್ ಆಗಲಿ ಸಾಮಾಗ್ರಿಗಳಾಗಲಿ ಖರೀದಿ ಮಾಡಿರುವುದ ಕಂಡು ಬಂದಿಲ್ಲ. ಹಲವಾರು ದಿನಗಳಿಂದ ಇದೇ ರೀತಿ ನಡೆಯುತ್ತಿದೆ. ಇವರು ವಂಚನೆ ಮಾಡಿದ್ದಾರೆ. ವಂಚನೆ ಮಾಡಿದ ಹಿನ್ನೆಲೆಯಲ್ಲಿ ಇವರ ವಿರುದ್ಧ ಕ್ರಮಕ್ಕೆ ನಾನು ಇಲಾಖೆಯ ಮೇಲಾಧಿಕಾರಿಗಳಿಗೆ ಸುಧೀರ್ಘವಾಗಿ ದಾಖಲೆ ಸಹಿತ ಪತ್ರವನ್ನು ಬರೆಯುತ್ತೇನೆ. ಆದಷ್ಟು ಬೇಗ ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ನಾನು ಆಗ್ರಹಿಸುತ್ತೇನೆ ಎಂದು ದಾಳಿ ಬಳಿಕ ತಹಶೀಲ್ದಾರ್ ತಿಳಿಸಿದ್ರು.

ವಿದ್ಯಾರ್ಥಿನಿಯರ ಬಳಿ ಮಾಹಿತಿ ಪಡೆಯುತ್ತಿರುವ ತಹಶೀಲ್ದಾರ್

ಕೆರೆಬಿಳಚಿಯ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌

ಇದನ್ನೂ ಓದಿ: Semiconductor manufacturing PLI: ಸೆಮಿಕಂಡಕ್ಟರ್ ಉತ್ಪಾದನೆಗೆ ಕೇಂದ್ರದಿಂದ 76 ಸಾವಿರ ಕೋಟಿ ರೂ.

Published On - 1:43 pm, Wed, 15 December 21