ಪವರ್ ಲೈನ್ ಕಾಮಗಾರಿ ಸ್ಥಗಿತಕ್ಕೆ ಆಗ್ರಹಿಸಿ ರೈತರ ಧರಣಿ; ಸ್ಥಳದಲ್ಲಿಯೇ ವಿಷ ಸೇವಿಸಿದ ತಾಯಿ-ಮಗ

| Updated By: ಆಯೇಷಾ ಬಾನು

Updated on: Dec 23, 2021 | 11:57 AM

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿದರಿಕೆರೆ ಗ್ರಾಮದ ರಿನ್ಯೂವ್ ಪಾವರ್ ಎಂಬ ಖಾಸಗಿ ಕಂಪನಿ, ಪವರ್ ಲೈನ್ ಕಾಮಗಾರಿ ಆರಂಭ ಮಾಡಿದೆ. ರೈತರ ಪರವಾನಿಗೆ ಪರಿಹಾರವಿಲ್ಲದೇ ಕಾಮಗಾರಿ ಆರಂಭ ಮಾಡಲಾಗಿದೆ. ಬಹುತೇಕ ಸಣ್ಣ ಹಾಗೂ ಅತಿ ಸಣ್ಣ ರೈತರ ಜಮೀನು ನಾಶವಾಗಿದೆ.

ಪವರ್ ಲೈನ್ ಕಾಮಗಾರಿ ಸ್ಥಗಿತಕ್ಕೆ ಆಗ್ರಹಿಸಿ ರೈತರ ಧರಣಿ; ಸ್ಥಳದಲ್ಲಿಯೇ ವಿಷ ಸೇವಿಸಿದ ತಾಯಿ-ಮಗ
ಪವರ್ ಲೈನ್ ಕಾಮಗಾರಿ ಸ್ಥಗಿತಕ್ಕೆ ಆಗ್ರಹಿಸಿ ರೈತರ ಧರಣಿ; ಸ್ಥಳದಲ್ಲಿಯೇ ವಿಷ ಸೇವಿಸಿದ ತಾಯಿ-ಮಗ
Follow us on

ದಾವಣಗೆರೆ: ಖಾಸಗಿ ಕಂಪನಿ ಪವರ್ ಲೈನ್ ಕಾಮಗಾರಿ ಸ್ಥಗಿತಕ್ಕೆ ಆಗ್ರಹಿಸಿ ರೈತರು ಧರಣಿ ನಡೆಸಿದ್ದು ರೈತರ ಹೋರಾಟಕ್ಕೆ ಕ್ಯಾರೇ ಎನ್ನದ ಕಂಪನಿ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ದು ರೈತ ಮಹಿಳೆ ಹಾಗೂ ಅವಳ ಪುತ್ರ ಸ್ಥಳದಲ್ಲಿಯೇ ವಿಷ ಸೇವಿಸಿದ ಘಟನೆ ನಡೆದಿದೆ. ರೈತ ಮಹಿಳೆ ಸಿದ್ದಮ್ಮ ಶಾಂತವೀರಯ್ಯ (50) ಹಾಗೂ ಆಕೆಯ ಪುತ್ರ ಉಜ್ಜನಗೌಡ (25)ನಿಗೆ ಜಗಳೂರು ತಾಲೂಕಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ರೈತರ ಆಕ್ರೋಶದ ನಡುವೆ ಸಹ ಕಾಮಗಾರಿ ಆರಂಭ
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನಲ್ಲಿ‌ಇತ್ತೀಚಿಗೆ ವಿಂಡ್ ಮಿಲ್ ಕಂಪನಿಗಳ ಕಾಟ ಹೆಚ್ಚಾಗಿದೆ. ಜಗಳೂರು ಸುತ್ತಲಿನ ಗುಡ್ಡದಲ್ಲಿ ಹಾಕಲಾದ ಪವನ ವಿದ್ಯುತ್ ಘಟಕಗಳಿಗೆ ಪವರ್ ಲೈನ್ ನಿರ್ಮಾಣ ಶುರುವಾಗಿದೆ. ವಿದ್ಯುತ್ ಕಾಮಗಾರಿ ಬೇಡ ಎಂದು ವಿರೋಧಿಸಿ ರೈತ ಮಹಿಳೆ ಹಾಗೂ ಅವಳ ಪುತ್ರ ಜಮೀನಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಗಳೂರು ತಾಲೂಕು ಬಿದರಕೆರೆ ಗ್ರಾಮದಲ್ಲಿ ನಡೆದಿದೆ.

ರೈತರ ಜಮೀನಿನಲ್ಲಿ ರಿನ್ಯೂವ್ ಪವರ್ ಖಾಸಗಿ ಕಂಪನಿಯವರು 220 ಹೈ ಪವರ್ ವೋಲ್ಟೇಜ್ ಲೈನ್ ಕಾಮಗಾರಿಯನ್ನು ನಡೆಸುತ್ತಿದ್ದರು. ಮೊದಲು ಗುರ್ತಿಸಿದ ಮಾರ್ಗ ಬೇರೆ. ಈಗ ಕೆಲ ಪ್ರಭಾವಿಗಳ ಮಾತು ಕೇಳಿ ಲೈನ್ ಮಾರ್ಗ ಬದಲಾಗಿದೆ. ನಮಗೂ ಕೂಡಾ ಸಣ್ಣ ಕೈಗಾರಿಕೆ ಆರಂಭ ಮಾಡುವ ಉದ್ದೇಶವಿದೆ. ಆದ್ರೆ ಲೈನ್ ನಮ್ಮ‌ ಜಮೀನಿನಲ್ಲಿ‌ಬಂದ್ರೆ ಎನು ಮಾಡಲು ಆಗಲ್ಲ ಎಂಬುದು ಆತ್ಮಹತ್ಯೆಗೆ ಯತ್ನಿಸಿದ ಉಜ್ಜನಗೌಡ ಮಾತು. ತಮ್ಮ ಜಮೀನಿನಲ್ಲಿ ಯಾವುದೇ ವಿದ್ಯುತ್ ಕಾಮಗಾರಿ ಬೇಡ ಮಾರ್ಗ ಬದಲಾವಣೆ ಮಾಡಿ ಎಂದು ಕಂಪನಿಯವರಿಗೆ ಹಾಗೂ ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದರು. ಜಿಲ್ಲಾಧಿಕಾರಿ ಅವರಿ ಕಚೇರಿಗೆ ಬರಲು ತಿಳಿಸಿದ್ದರು.

ಆದ್ರೆ ಖಾಸಗಿ ಕಂಪನಿಯವರು ವಿದ್ಯುತ್ ಕಾಮಗಾರಿ ಮುಂದುವರೆಸಿದೆ ಇದನ್ನ ಖಂಡಿಸಿ ತಾಯಿ‌ ಮತ್ತು ಪುತ್ರ ಉಜ್ಜನಗೌಡ ಶಾಂತವೀರಯ್ಯ ಮತ್ತು ಸಿದ್ದಮ್ಮ ಶಾಂತವಿರಯ್ಯ ಅವರು ಕಾಮಗಾರಿ ಸ್ಥಳದಲ್ಲಿ ವಿಷ ಸೇವನೆ ಮಾಡಿದ್ದಾರೆ. ಇವರ ಜೊತೆ ನೂರಾರು ರೈತರು ಹೋರಾಟಕ್ಕೆ ಸಜ್ಜಾಗಿದ್ದಾರೆ. ವಿಷ ಸೇವಿಸಿದ ರೈತ ಮಹಿಳೆ ಹಾಗೂ ಪುತ್ರನಿಗೆ ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಈ ಕುರಿತು ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಮುಖಂಡರು ಮತ್ತು ಇತರೆ ರೈತ ಮುಖಂಡರು ಉಪಸ್ಥಿತರಿದ್ದರು. ಬರುವ ದಿನಗಳಲ್ಲಿ ವಿಂಡ ಮಿಲ್ ಕಂಪನಿಗಳ ವಿರುದ್ಧ ಸಂಘಟಿತ ಹೋರಾಟಕ್ಕೆ ನಿರ್ಧರಿಸಿದ್ದಾರೆ.

ಇದನ್ನೂ ಓದಿ: Karnataka Assembly Session Live: ವಿಧಾನಸಭೆಯಲ್ಲಿ ಇಂದು ಮತಾಂತರ ನಿಷೇಧ ಕಾಯ್ದೆ ಚರ್ಚೆ

Published On - 9:45 am, Thu, 23 December 21