ದಾವಣಗೆರೆ, ಸೆಪ್ಟೆಂಬರ್ 6: ಮಾಮೂಲಾಗಿ ಶಾಲೆ (Government school) ಅಂದರೆ ಮಕ್ಕಳಿಗೆ ಭಯಾ ಇದ್ದೇ ಇರುತ್ತದೆ. ಆದರೆ ಜೀವ ಭಯ ಮಾತ್ರ ಇರಲಿಲ್ಲ. ತಪ್ಪಿದ್ದರೇ ಶಿಕ್ಷಕರು ನಾಲ್ಕು ಏಟು ಹಾಕಬಹುದು. ಇದನ್ನ ಬಿಟ್ಟರೇ ಹೆಚ್ಚಿನದ್ದೇನು ಆಗುವುದಿಲ್ಲ. ಆದರೆ ಇಲ್ಲೊಂದು ಕಡೆ ಮಕ್ಕಳು ಹಾಗೂ ಶಿಕ್ಷಕರಿಗೂ ಸೇರಿ ಜೀವ ಭಯ ಶುರುವಾಗಿದೆ. ಇದೇ ಕಾರಣಕ್ಕೆ 80 ಇದ್ದ ಮಕ್ಕಳ ಸಂಖ್ಯೆ ಈಗ 40ಕ್ಕೆ ಇಳಿಕೆ ಆಗಿರುವುದು. ಅದೇ ರೀತಿಯಾದರೆ ಶಾಲೆ ಖಾಲಿ ಆಗುತ್ತದೆ. ಹಾಗಾದರೇ ಯಾಕೆ ಮಕ್ಕಳು ಸೇರಿದಂತೆ ಶಿಕ್ಷಕರಿಗೂ ಜೀವ ಭಯ ಶುರುವಾಗಿದೆ ಎಂಬುದಕ್ಕೆ ಮುಂದೆ ಓದಿ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನರೇ ಬೊಮ್ಮನಹಳ್ಳಿ ಎಂಬ ಹಿಂದುಳಿದ ಪ್ರದೇಶದ ಸರ್ಕಾರಿ ಶಾಲೆಯೊಂದು ಶಿಥಿಲಾವಸ್ಥೆಗೆ ತಲುಪಿದೆ. ಇಡಿ ಶಾಲಾ ಕಟ್ಟಡವೇ ಅಪಾಯದಲ್ಲಿದೆ. ಶಾಲೆಯ ಕಟ್ಟಡದ ಕಲ್ಲುಗಳು ಉದುರಿ ಕೆಳಗೆ ಬಿಳುತ್ತಿವೆ. ಯಾವಾಗ ಶಾಲೆ ಕುಸಿದು ಬಿಳ್ಳುತ್ತದೆ ಎಂಬ ಭಯ ಪ್ರತಿಯೊಬ್ಬರಲ್ಲಿ ಆವರಿಸಿದೆ.
ಪಾಲಕರು ಮಕ್ಕಳನ್ನ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಇದೇ ಕಾರಣಕ್ಕೆ ಕಳೆದ ವರ್ಷ 80 ಜನ ಇದ್ದ ಈ ಶಾಲೆಯಲ್ಲಿ ಈ ವರ್ಷ 40 ಜನ ಮಾತ್ರ ಉಳಿದಿದ್ದಾರೆ. ಹೀಗೆ ಶಾಲೆ ಹಾಳಾದ ಬಗ್ಗೆ ಹತ್ತಾರು ಸಲ ಸಂಬಂಧ ಪಟ್ಟ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಜೊತೆಗೆ ಜನ ಪ್ರತಿನಿಧಿಗಳ ಗಮನಕ್ಕೂ ತರಲಾಗಿದೆ.
ಇದನ್ನೂ ಓದಿ: ದಾವಣಗೆರೆ: ಗದ್ದೆಗೆ ಸೇರಿದ ಕೆಮಿಕಲ್ ನೀರು; ಸಾಲಸೋಲ ಮಾಡಿ ಬೆಳೆದಿದ್ದ ಬೆಳೆ ಸಂಪೂರ್ಣ ನಾಶ
ಇಂತಹ ಪರಿಸ್ಥಿತಿಯಲ್ಲಿ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯಾವುದೇ ಸಹಾಯ ಮಾಡುವ ಸ್ಥಿತಿಯಲ್ಲಿ ಇಲ್ಲ. ಕಾರಣ ಜನರ ಬೇಡಿಕೆಗೆ ಅವರು ಸ್ಪಂದಿಸುತ್ತಿಲ್ಲ. ಇಲ್ಲಿ ಪಾಲಕರು, ಶಿಕ್ಷಕರು ಹಾಗೂ ಮಕ್ಕಳು ಮಾತ್ರ ಶಾಲೆಯ ಸ್ಥಿತಿ ನೋಡಿ ಭಯಗೊಂಡಿದ್ದಾರೆ.
ಶಾಲೆಯ ಮೇಲ್ಚಾವಣಿ ಶಿಥಿಲಗೊಂಡಿದೆ. ಶಾಲೆಯ ಕೆಲಸವೇ ಬೇಡ ಎಂದು ಕೆಲ ಸ್ಥಿತಿವಂತರು ದೂರದ ಖಾಸಗಿ ಶಾಲೆಗಳಿಗೆ ಮಕ್ಕಳನ್ನ ಕಳುಹಿಸುತ್ತಿದ್ದಾರೆ. ಉಳಿದ ಬಡವರು ತಮ್ಮ ಮಕ್ಕಳನ್ನ ಒಳ್ಳೆಯ ಶಾಲೆಗೆ ಕಳುಹಿಸುವುದು ಕಷ್ಟ ಸಾಧ್ಯವಾಗಿದೆ. ಜೀವ ಕೈಯಲ್ಲಿ ಹಿಡಿದುಕೊಂಡು ಪಾಠ ಕೇಳುವುದು ಮಕ್ಕಳ ಸ್ಥಿತಿಯಾದರೆ, ಇತ್ತ ಶಿಕ್ಷಕರ ಸ್ಥಿತಿ ವಿಭಿನ್ನವೇನು ಇಲ್ಲಾ. ಸರ್ಕಾರ ಇಂತಹ ಶಾಲೆಗಳ ಬಗ್ಗೆ ಗಮನ ಹರಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:20 pm, Wed, 6 September 23