AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದಂಕಿ ಲಾಟರಿ ಹಗರಣದಲ್ಲಿ ಸಸ್ಪೆಂಡ್ ಆದವರು ಬೋಗಸ್ ತನಿಖೆ ಮಾಡ್ತಿದ್ದಾರೆ- ಎಡಿಜಿಪಿ ಅಲೋಕ್ ವಿರುದ್ದ ರೇಣುಕಾಚಾರ್ಯ ನೇರ ವಾಗ್ದಾಳಿ

ನನ್ನ ಮಗ ಮನೆಯಿಂದ ಹೋಗುವಾಗ ಒಳ ಉಡುಪು ಇತ್ತು. ಆದ್ರೆ ಶವ ಸಂಸ್ಕಾರ ಮಾಡುವಾಗ ಒಳ ಉಡುಪು‌ ಇರಲಿಲ್ಲ. ಜೊತೆಗೆ ಮರ್ಮಾಂಗ ಬಾತುಕೊಂಡಿತ್ತು. ನನ್ನ ಮಗನಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ - ಎಂಪಿ‌ ರಮೇಶ್ 

ಒಂದಂಕಿ ಲಾಟರಿ ಹಗರಣದಲ್ಲಿ ಸಸ್ಪೆಂಡ್ ಆದವರು ಬೋಗಸ್ ತನಿಖೆ ಮಾಡ್ತಿದ್ದಾರೆ- ಎಡಿಜಿಪಿ ಅಲೋಕ್ ವಿರುದ್ದ ರೇಣುಕಾಚಾರ್ಯ ನೇರ ವಾಗ್ದಾಳಿ
ಒಂದಂಕಿ ಲಾಟರಿ ಹಗರಣದಲ್ಲಿ ಸಸ್ಪೆಂಡ್ ಆದವರು ಬೋಗಸ್ ತನಿಖೆ ಮಾಡ್ತಿದ್ದಾರೆ- ಎಡಿಜಿಪಿ ಅಲೋಕ್ ವಿರುದ್ದ ರೇಣುಕಾಚಾರ್ಯ ನೇರ ವಾಗ್ದಾಳಿ
TV9 Web
| Edited By: |

Updated on:Nov 05, 2022 | 4:19 PM

Share

ದಾವಣಗೆರೆ: ತಮ್ಮ ತಮ್ಮನ ಪುತ್ರ ಚಂದ್ರಶೇಖರ್​ ಅಕಾಲಿಕ ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರ ವಿರುದ್ಧ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ನೇರವಾಗಿ ಎಡಿಜಿಪಿ ಅಲೋಕ್ ಕುಮಾರ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ತನಿಖೆ ಮಾಡುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಸರಿಯಾದ ತನಿಖೆ ಮಾಡದೆಯೇ ಒಬ್ಬ ಅಧಿಕಾರಿ ಹೇಳಿಕೆ ಕೊಟ್ಟಿದ್ದಾರೆ. ಆ ಅಧಿಕಾರಿ ಒಂದಂಕಿ ಲಾಟರಿ ಹಗರಣದಲ್ಲಿ ಸಸ್ಪೆಂಡ್ ಆಗಿದ್ದರು. ಅವರಿಂದ ಯಾವ ರೀತಿ ಉತ್ತಮ ತನಿಖೆ ಆಗುತ್ತದೆ? ಪೊಲೀಸರು ಬೋಗಸ್ ತನಿಖೆ ಮಾಡಿದ್ದಾರೆ. ಚಂದ್ರು ಶವ ಪತ್ತೆ ಮಾಡಿದ್ದು ನಮ್ಮ ಕಾರ್ಯಕರ್ತರು. ಸಿದ್ದರಾಮಯ್ಯ ಕಾಲದಲ್ಲಿ ಸಸ್ಪೆಂಡ್ ಆದ ಅಧಿಕಾರಿ ತನಿಖೆ ಹಾಳು ಮಾಡಿದ್ದಾರೆ. ಚಂದ್ರ ಕಾರು ಓವರ್ ಸ್ಪೀಡ್ ಆಂತಾ ಹೇಳುತ್ತಿದ್ದಾರೆ. ಅದರೆ ಇದು ಕೊಲೆ. ಕೆಲವು ಫೋಟೋ ವಿಡಿಯೋಗಳನ್ನು ಸಿಎಂ ಹಾಗೂ ಗೃಹ ಸಚಿವರಿಗೆ ಕಳುಹಿಸುತ್ತೇನೆ. ಪಾರದರ್ಶಕ ತನಿಖೆ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಚಂದ್ರಶೇಖರ್ ಸೇವಾ ಕಾರ್ಯಗಳನ್ನ ಮುಂದುವರಿಸುತ್ತೇವೆ. ಆ ಮೂಲಕ ಅವನ ಆತ್ಮಕ್ಕೆ ಶಾಂತಿ ಸಿಗುವ ಕೆಲಸ ಮಾಡ್ತೇವೆ ಎಂದೂ ರೇಣುಕಾಚಾರ್ಯ ಇದೇ ವೇಳೆ ಹೇಳಿದರು.

ಇನ್ನು ಮೃತ ಚಂದ್ರಶೇಖರ್​ ಅವರ ತಂದೆ ಎಂಪಿ‌ ರಮೇಶ್ ಟಿವಿ 9 ಜೊತೆ ಮಾತನಾಡುತ್ತಾ ಪೊಲೀಸರು ಶುದ್ಧ ಸುಳ್ಳು ಹೇಳುತ್ತಿದ್ದಾರೆ. ನನ್ನ ಮಗನ ಕೊಲೆ ಆಗಿದೆ. ಮನೆಯಿಂದ ಹೋಗುವಾಗ ಒಳ ಉಡುಪು (ಚಡ್ಡಿ) ಇತ್ತು. ಆದ್ರೆ ಶವ ಸಂಸ್ಕಾರ ಮಾಡುವಾಗ ಒಳ ಉಡುಪು‌ ಇರಲಿಲ್ಲ. ಜೊತೆಗೆ ಮರ್ಮಾಂಗ ಬಾತುಕೊಂಡಿತ್ತು. ನನ್ನ ಮಗನಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ. ಕಾರ್ ಹಿಂಭಾಗದ ಇಂಡಿಕೇಟರ್ ಸಹ ಒಡೆದಿದೆ. ಬೇರೆ ಕಡೆ ಚಿತ್ರ ಹಿಂಸೆ ಕೊಟ್ಟು ಕೊಲೆ ಮಾಡಿ ಹಾಕಿದ್ದಾರೆ. ನಾವು ದೇವರನ್ನ ಕೇಳಿದ್ದೆವು. ನೀರಿನ ಸುತ್ತ ಮುತ್ತ ಹುಡುಕಾಡಿ ಎಂದು ಹೇಳಿದ್ದರು. ನಮ್ಮ ಕಾರ್ಯಕರ್ತರೇ ಕಾರು ಪತ್ತೆ ಹಚ್ಚಿದ್ದು. ಪೊಲೀಸರೇನೂ ಪ್ರಕರಣ ಪತ್ತೆ ಹಚ್ಚಿಲ್ಲ. ಯಾರದ್ದೋ ಪ್ರಭಾವಕ್ಕೆ ಒಳಗಾಗಿ ಪ್ರಕರಣದ ದಾರಿ ತಪ್ಪಿಸಬೇಡಿ. ಪ್ರಕರಣ ತನಿಖೆ ನಡೆಸಿ ಆರೋಪಿಗಳನ್ನ ಪತ್ತೆ ಹಚ್ಚಿ ಎಂದು ರಮೇಶ ಆಗ್ರಹಿಸಿದ್ದಾರೆ.

ವಿಳಂಬವಾಗಲಿದೆ ಚಂದ್ರು ದೇಹದ ವೈದ್ಯಕೀಯ ಪರೀಕ್ಷೆ ವರದಿ:

ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರನ ಶವದ ಕೈಗೆ ಹಗ್ಗ ಕಟ್ಟಲಾಗಿದೆ ಎಂದು ವಿಡಿಯೋ ಹಂಚಿಕೊಂಡ ರೇಣುಕಾಚಾರ್ಯ ಹೇಳಿದ್ದಾರೆ. ಆದರೆ ಚಂದ್ರಶೇಖರ ಶವ ಕಾರ್ ನಿಂದ ಹೊರ ತೆಗೆಯುವಾಗ ಕೈ ಬಳಿಯ ಚರ್ಮ ಕಿತ್ತುಕೊಂಡು ಬಂದಿರುವ ಶಂಕೆಯಿದೆ. ಇದು ಹಗ್ಗನಾ, ಚರ್ಮನಾ ಎಂಬುದರ ಬಗ್ಗೆ ವೈದ್ಯಕೀಯ ವರದಿಯಿಂದ ತಿಳಿದುಬರಬೇಕಿದೆ. ಆದರೆ ಶವ ಐದು ದಿನ ನೀರಿನಲ್ಲಿ ಇದ್ದಿದ್ದರಿಂದ ವೈದ್ಯಕೀಯ ವರದಿ ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದೆ. ಚಂದ್ರಶೇಖರ ಶವ ಐದು ದಿನ ನೀರಿನಲ್ಲಿ ಇದ್ದ ಹಿನ್ನೆಲೆ ವೈದ್ಯಕೀಯ ಪರೀಕ್ಷೆ ವರದಿ ವಿಳಂಬವಾಗಲಿದೆ. ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮಾದರಿಗಳ ರವಾನೆ ಮಾಡಿದ್ದಾರೆ. ಕನಿಷ್ಠ ಮೂರು ದಿನವಾದ್ರು ಬೇಕು ವರದಿ ಬರಲು. ಸೋಮವಾರ ಸಂಜೆ ವೇಳೆಗೆ ಶವ ಪರೀಕ್ಷೆ ವರದಿ ಪೊಲೀಸರ ಕೈಗೆ ಸೇರುವ ಸಾಧ್ಯತೆಯಿದೆ.

ಚಂದ್ರಶೇಖರ ಸಾವಿನ ಪ್ರಕರಣ ಪತ್ತೆ ಹಚ್ಚಿದ ಅನುಭವೀ ಫೋಟೋಗ್ರಾಫರ್:

ಐದು ದಿನಗಳಿಂದ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರೂ ಪೊಲೀಸರಿಂದ ಅದನ್ನು ಪತ್ತೆ ಹಚ್ಚಲು ಆಗಿರಲಿಲ್ಲ. ಆದ್ರೆ ಹಗಲು ರಾತ್ರಿ ಬೈಕ್ ನಲ್ಲಿ ಡ್ರೋಣ್ ಕ್ಯಾಮರಾ ಹಿಡಿದುಕೊಂಡು ಸುತ್ತಾಡುತ್ತಿದ್ದ ಹೊನ್ನಾಳಿ ಮೂಲದ ಶ್ರೀಕಾಂತ್ ಎಂಬ ಹೆಸರಿನ ಫೋಟೋಗ್ರಾಫರ್ ತುಂಗಾ ಕಾಲುವೆಯಲ್ಲಿ ಕಾರ್ ಇರುವುದು ಪತ್ತೆ ಹಚ್ಚಿ ಪ್ರಕರಣ ಬೇಧಿಸಲು ನೆರವಾದರು. ಫೋಟೋಗ್ರಾಫರ್ ಶ್ರೀಕಾಂತ್ 25 ವರ್ಷಗಳಿಂದ ಫೋಟೋಗ್ರಫಿ ಮಾಡಿಕೊಂಡು ಬಂದಿದ್ದಾರೆ. ಶ್ರೀಕಾಂತ್, ಕಾರ್ ಇರುವುದರ ಬಗ್ಗೆ ಸಂಶಯಗೊಂಡು ಸೇತುವೆ ಕೆಳಗೆ ಡ್ರೋಣ್ ಕ್ಯಾಮರಾ ಬಿಟ್ಟು ಚಂದ್ರಶೇಖರ ಸಾವಿನ ಪ್ರಕರಣ ಬೆಳಕಿಗೆ ತಂದಿದ್ದಾರೆ.

ಶಾಸಕ ಎಂಪಿ ರೇಣುಕಾಚಾರ್ಯ ಸಹೋದರ ಪುತ್ರನ ಸಾವಿನ ಪ್ರಕರಣದಲ್ಲಿ ಪೊಲೀಸರ ವಿರುದ್ದ ಶಾಸಕ ರೇಣುಕಾಚಾರ್ಯ ರೊಚ್ಚಿಗೆದ್ದಿರುವುದು ಯಾಕೆ?

ಪೊಲೀಸರ ಇನ್ವೆಷ್ಟಿಗೇಷನ್ ಬಗ್ಗೆ ಶಾಸಕರು ಅಪಸ್ವರ ಎತ್ತಿರುವುದರ ಇನ್ ಸೈಡ್ ಡಿಟೇಲ್ಸ್ ಇಲ್ಲಿದೆ. ಟೆಕ್ನಿಕಲ್ ಎವಿಡೆನ್ಸ್ ಕಲೆ ಹಾಕುವಲ್ಲಿ ದಾವಣಗೆರೆ ಪೊಲೀಸರು ಎಡವಿದ್ದಾರೆಂದು ಅಸಮಾಧಾನ. ಇಲ್ಲಿಯವರೆಗೂ ಲಾಸ್ಟ್ ಡೆ ಕಾಲ್ ಲೀಸ್ಟ್ ಮಾತ್ರ ಕಲೆ ಹಾಕಿದ್ದಾರೆ. ಆದ್ರೆ ಅವರನ್ನ ಕರೆದು ವಿಚಾರಣೆ ನಡೆಸಿಲ್ಲವೆಂದು ಕುಟುಂಬಸ್ಥರು ಸಿಟ್ಟಿಗೆದ್ದಿದ್ದಾರೆ. ಆದ್ರೆ ಪೊಲೀಸ್ ಮೂಲಗಳು ಹೇಳುವುದೇ ಬೇರೆ. ಸದ್ಯ ಚಂದ್ರಶೇಖರ್ ಸಾವಿನ ಕುರಿತು ತನಿಖೆ ನಡೆಸುತ್ತಿರುವ ದಾವಣಗೆರೆ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದಾರೆ.

ಮೂರು ತಂಡಗಳಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ: ಮೂರು ತಂಡಗಳಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಟೆಕ್ನಿಕಲ್ ಎವಿಡೆನ್ಸ್ ಗಾಗಿ ಟವರ್ ಡಂಪ್, ಸಿಡಿಆರ್, ಚಾಟ್ ಹಿಸ್ಟರಿ ಬಗ್ಗೆ ಒಂದು ತಂಡದ ವರ್ಕ್ ಔಟ್ ಮಾಡುತ್ತಿದೆ. ಮತ್ತೊಂದು ತಂಡದಿಂದ ಕೃತ್ಯ ನಡೆದ ಸ್ಥಳದ ಫಿಸಿಕಲ್ ಎವಿಡೆನ್ಸ್ ಗಳ ಕುರಿತು ಸಾಕ್ಷ್ಯ ಸಂಗ್ರಹ ನಡೆದಿದೆ. ಮೂರನೇ ತಂಡದಿಂದ ಚಂದ್ರು ಜೊತೆಗಿದ್ದ ಸ್ನೇಹಿತರ ವಿಚಾರಣೆ ಮಾಡುತ್ತಿದ್ದಾರೆ. ಇದೆಲ್ಲದರ ಹೊರತಾಗಿ ಪೋಸ್ಟ್ ಮಾರ್ಟಂ ವರದಿ ಬಂದ ಬಳಿಕವಷ್ಟೇ ಸತ್ಯಾಂಶ ಹೊರ ಬರಬೇಕಿದೆ. ಹಾಗಾಗಿ ಎಲ್ಲರ ಚಿತ್ತ ಈಗ ಪೋಸ್ಟ್ ಮಾರ್ಟಂ ವರದಿಯತ್ತ.

Published On - 3:57 pm, Sat, 5 November 22

ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ