ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದರೆ ಸೂಕ್ತ ಕ್ರಮ: ಈಶ್ವರ ಖಂಡ್ರೆ

|

Updated on: Jun 16, 2023 | 11:09 PM

ಬಗರ್‌ಹುಕುಂ ಸಾಗುವಳಿದಾರರ ಹಿತ ಕಾಪಾಡಲು ಚಿಂತನೆ ನಡೆದಿದೆ. ಕಂದಾಯ, ಅರಣ್ಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸುತ್ತೇವೆ. ಸಮೀಕ್ಷೆ ವರದಿ ಸುಪ್ರೀಂ ಕೋರ್ಟ್​​ ಮುಂದೆ ಇಟ್ಟು ಹಿತ ಕಾಪಾಡುತ್ತೇವೆ. ಅನುಮತಿ ಇಲ್ಲದೆ ವಿಂಡ್‌ ಮಿಲ್ ಫ್ಯಾನ್‌ ಹಾಕಿದರೇ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ

ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದರೆ ಸೂಕ್ತ ಕ್ರಮ: ಈಶ್ವರ ಖಂಡ್ರೆ
ಸಚಿವ ಈಶ್ವರ್ ಖಂಡ್ರೆ
Follow us on

ದಾವಣಗೆರೆ: ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ (Illegal mining) ನಡೆಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ (Eshwar Khandre) ಹೇಳಿದ್ದಾರೆ. ಬಗರ್‌ಹುಕುಂ ಸಾಗುವಳಿದಾರರ ಹಿತ ಕಾಪಾಡಲು ಚಿಂತನೆ ನಡೆದಿದೆ. ಕಂದಾಯ, ಅರಣ್ಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸುತ್ತೇವೆ. ಸಮೀಕ್ಷೆ ವರದಿ ಸುಪ್ರೀಂ ಕೋರ್ಟ್​​ ಮುಂದೆ ಇಟ್ಟು ಹಿತ ಕಾಪಾಡುತ್ತೇವೆ. ಅನುಮತಿ ಇಲ್ಲದೆ ವಿಂಡ್‌ ಮಿಲ್ ಫ್ಯಾನ್‌ ಹಾಕಿದರೇ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ದಾವಣಗೆರೆಯಲ್ಲಿ ದಾವಣಗೆರೆ ಪ್ರಾದೇಶಿಕ ಅರಣ್ಯ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಶೇ.21ರಷ್ಟುವಿರುವ ಅರಣ್ಯ ಪ್ರದೇಶ ಶೇ.31ರಷ್ಟು ಹೆಚ್ಚಿಸಲು ಯೋಜನೆ ರೂಪಿಸಲಾಗುತ್ತದೆ. ಇದಕ್ಕೆ ಪೂರಕವಾಗಿ 5 ಕೋಟಿ ಸಸಿ ನೆಡುವ ಯೋಜನೆ ಸಿದ್ಧವಿದೆ. ಬರಗ್ ಹುಕುಂ ಬಗ್ಗೆ ಈಗಾಗಲೇ ಕಂದಾಯ ಸಚಿವರು ನಮ್ಮ ಅರಣ್ಯ ಇಲಾಖೆಗೆ ಸುತ್ತೋಲೆ ಕಳುಹಿಸಿದ್ದಾರೆ. ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಂಡ ಬಡವರಿಗೆ ಅನುಕೂಲ ಮಾಡಲಾಗುವುದು. ಇದಕ್ಕಾಗಿ ಕಾಲ‌ಮಿತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬಲವಂತದ ಮತಾಂತರ ನಿಷೇಧ ಕಾಯ್ದೆ ವಾಪಸ್ಸು ಪಡೆಯುವ ವಿಚಾರವಾಗಿ ಮಾತನಾಡಿದ ಅವರು ಬಿಜೆಪಿಯವರು ಜಾತಿ ಜಾತಿಗಳ‌ ನಡುವೆ ಜಗಳ ಹಚ್ಚಿ ಸಮಾಜದ ಶಾಂತಿಗೆ ದಕ್ಕೆ ಬರುವಂತೆ ನಡೆದುಕೊಳ್ಳುತ್ತಿದ್ದನ್ನ ನಾವು ಸರಿ ಮಾಡುತ್ತಿದ್ದೇವೆ. ಈ ಬಗ್ಗೆ ಯಾವುದೇ ವಿರೋಧವಿಲ್ಲ. ಈಗ ಬಿಜೆಪಿಯವರು ನಿರುದ್ಯೋಗಿಗಳಾಗಿದ್ದಾರೆ. ಹೀಗಾಗಿ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ಎಂಟಿಬಿ ನಾಗರಾಜ್ ಹೇಳಿಕೆಗೆ ಜಾಮಿಯಾ ಮಸೀದಿ ವತಿಯಿಂದ ಪ್ರತಿಭಟನೆ: ಕ್ಷಮೆ ಕೇಳುವಂತೆ ಮುಸ್ಲಿಂ ಸಮುದಾಯ ಒತ್ತಾಯ

ಇನ್ನು ವಿದ್ಯುತ್ ಬಿಲ್ ಬಿಜೆಪಿಯವರೇ ಹೆಚ್ಚಿಸಿದ್ದು. ರಾಜ್ಯದಲ್ಲಿ ವಿದ್ಯುತ್ ಬಿಲ್ ಹೆಚ್ಚಾದ ಬಗ್ಗೆ ಚರ್ಚೆಗಳು‌ ನಡೆಯತ್ತಿದೆ. ಈ ವಿದ್ಯುತ್​ ಬಿಲ್​ ಅನ್ನು ಹೆಚ್ಚಿಸಿದ್ದು ಬಿಜೆಪಿಯವರೇ. ಆಗಸ್ಟ್ ಒಂದರಿಂದ ನಾವು ಉಚಿತ ವಿದ್ಯುತ್ ಪೂರೈಕೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಕೇಂದ್ರ ರಾಜಕೀಯ ದುರುದ್ದೇಶದಿಂದ ಅಕ್ಕಿ‌ ಪೂರೈಸಲು ನಿರಾಕರಿಸಿದೆ. ರಾಜ್ಯಕ್ಕೆ ಅಕ್ಕಿ ಪೂರೈಕೆ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಕೇಂದ್ರ ಏನೇ ಮಾಡಿದರೂ ಅನ್ನಭಾಗ್ಯ ಯೋಜನೆ ನಿಲ್ಲುವುದಿಲ್ಲ. ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ. 4 ದಿನ ತಡ ಆಗಬಹುದು, ಆದರೆ 10 ಕೆಜಿ ಅಕ್ಕಿ ಕೊಟ್ಟೇ ಕೊಡುತ್ತೇವೆ. ಮುಖ್ಯಮಂತ್ರಿಗಳು, ಸಚಿವರು ವಿವಿಧ ರಾಜ್ಯ ಸರ್ಕಾರಗಳ ಜತೆ ಚರ್ಚಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಲಿಂಗಾಯತರನ್ನು ಓಬಿಸಿ ಪಟ್ಟಿಗೆ ಸೇರಿಸುವ ವಿಚಾರವಾಗಿ ಮಾತನಾಡಿ ಈ ಬಗ್ಗೆ ಹಿಂದೆಯೂ ನಾವು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಬಹು ದಿನಗಳ ನ್ಯಾಯಯುತ ಬೇಡಿಕೆ ಇದಾಗಿದೆ. ಈಗಿನ ಸರ್ಕಾರಕ್ಕೂ ಮನದಟ್ಟು ಮಾಡುವ ಕೆಲಸ ಮಾಡುತ್ತೇವೆ. ಲಿಂಗಾಯತ ವೀರಶೈವ ಮಹಾಸಭೆಯಿಂದ ಮನವಿ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ