ಎಂಟಿಬಿ ನಾಗರಾಜ್ ಹೇಳಿಕೆಗೆ ಜಾಮಿಯಾ ಮಸೀದಿ ವತಿಯಿಂದ ಪ್ರತಿಭಟನೆ: ಕ್ಷಮೆ ಕೇಳುವಂತೆ ಮುಸ್ಲಿಂ ಸಮುದಾಯ ಒತ್ತಾಯ

ಮುಸ್ಲಿಮರು ಮತ ಹಾಕದಿದ್ದಕ್ಕೆ ನನಗೆ ಸೋಲಾಯಿತು ಎಂಬ ಮಾಜಿ ಸಚಿವ ಎಂಟಿಬಿ ನಾಗರಾಜ್​ ಹೇಳಿಕೆಗೆ ಸದ್ಯ ಮುಸ್ಲಿಂ ಸಮುದಾಯ ಆಕ್ರೋಶಗೊಂಡಿದೆ. ನಗರದಲ್ಲಿ ಇಂದು ಜಾಮಿಯಾ ಮಸೀದಿ ವತಿಯಿಂದ ಪ್ರತಿಭಟನೆ ಮಾಡಿದ್ದು, ಕೂಡಲೇ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ.

ಎಂಟಿಬಿ ನಾಗರಾಜ್ ಹೇಳಿಕೆಗೆ ಜಾಮಿಯಾ ಮಸೀದಿ ವತಿಯಿಂದ ಪ್ರತಿಭಟನೆ: ಕ್ಷಮೆ ಕೇಳುವಂತೆ ಮುಸ್ಲಿಂ ಸಮುದಾಯ ಒತ್ತಾಯ
ಮಾಜಿ ಸಚಿವ ಎಂಟಿಬಿ ನಾಗರಾಜ್
Follow us
|

Updated on:Jun 16, 2023 | 7:29 PM

ದೇವನಹಳ್ಳಿ: ಮುಸ್ಲಿಮರ ವಿರುದ್ಧ ಮಾಜಿ ಸಚಿವ ಎಂಟಿಬಿ ನಾಗರಾಜ್​​ (MTB Nagaraj)​ ನೀಡಿರುವ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದ್ದು, ಎಂಟಿಬಿ ನಾಗರಾಜ್ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಜಾಮಿಯಾ ಮಸೀದಿ ವತಿಯಿಂದ ಪ್ರತಿಭಟನೆ ಮಾಡಲಾಗಿದೆ. ಜೂನ್ 10ರಂದು ಹೊಸಕೋಟೆ ನಗರದ ಕನಕಭವನದಲ್ಲಿ ನಡೆದಿದ್ದ ಸಭೆಯಲ್ಲಿ ಮುಸ್ಲಿಮರು ಮತ ಹಾಕದಿದ್ದಕ್ಕೆ ನನಗೆ ಸೋಲಾಯಿತು ಎಂದಿದ್ದರು. ಅಲ್ಲಾ, ಕುರಾನ್‌ ಮೇಲೆ ಆಣೆ ಪ್ರಮಾಣ ಮಾಡಿ ನನಗೆ ವೋಟ್‌ ಹಾಕಿಲ್ಲ. ಇನ್ಮೇಲೆ ನಿಮಗೆ ಕೇರ್ ಮಾಡಲ್ಲ. ನಂಬಿಸಿ ಹಣ ಪಡೆದು‌ ನನಗೆ ಮೋಸ ಮಾಡಿದ್ದೀರೆಂದು ವಾಗ್ದಾಳಿ ಮಾಡಿದ್ದರು.

ಸದ್ಯ MTB ನಾಗರಾಜ್ ಹೇಳಿಕೆಯಿಂದ ಆಕ್ರೋಶಗೊಂಡಿರುವ ಮುಸ್ಲಿಂ ಸಮುದಾಯ ಎಲ್ಲಿ, ಯಾರಿಗೆ, ಹೇಗೆ ಹಣ ಕೊಟ್ಟಿದ್ದಾರೆಂದು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದ್ದಾರೆ. MTB ನಾಗರಾಜ್‌ ವಿರುದ್ಧ ಮುಸ್ಲಿಂ ಸಮುದಾಯ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ನಿಮ್ಮನ್ನು ಅಲ್ಲಾ ಎಂದಿಗೂ ಕ್ಷಮಿಸಲ್ಲ, ಮುಸ್ಲಿಂ ಸಮುದಾಯದ ವಿರುದ್ಧ ಬುಸುಗುಟ್ಟಿದ ಎಂಟಿಬಿ ನಾಗರಾಜ್‌

ನನ್ನ ಸೋಲಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಕಾರಣ

ಮಾಜಿ ಸಚಿವ ಎಂಟಿಬಿ ನಾಗರಾಜ್​ ಕೇವಲ ಮುಸ್ಲಿಂರ ವಿರುದ್ಧ ಮಾತ್ರ ಆರೋಪಿಸದೇ ನಾನು ಸೋಲಲು ಡಾ.ಕೆ.ಸುಧಾಕರ್ ಮಾತ್ರವಲ್ಲ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯೂ ಸಹ ಕಾರಣ ಎಂದಿದ್ದರು.

ಇದರ ಬೆನ್ನಲ್ಲೇ ಅವರ ತಮ್ಮ ಸೋಲಿಗೆ ಮುಸ್ಲಿಂ ಸಮುದಾಯ ಕೂಡ ಕಾರಣ ಎಂದಿದ್ದರು. ನನ್ನ ಸೋಲಿಗೆ ಮುಸ್ಲಿಂ ಸಮುದಾಯವೇ ಕಾರಣ ಎಂದಿದ್ದರು. ಆ ಹೇಳಿಕೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು.

ಇದನ್ನೂ ಓದಿ: ಅಪರಾಧ ಕೃತ್ಯ ತಡೆಗೆ ಗೃಹ ಇಲಾಖೆ ದಿಟ್ಟ ಕ್ರಮ: ಬೆಂಗಳೂರಿನಲ್ಲಿ ಹೈ ರೆಸ್ಯೂಲೇಷನ್ ಕ್ಯಾಮೆರಾ ಅಳವಡಿಕೆ

ಮಾತು ಕೊಟ್ಟು ನನಗೆ ಮೋಸ 

ಕಳೆದ ಎರಡು ಚುನಾವಣೆಗಳಲ್ಲಿ ನನಗೆ ಓಟ್ ಹಾಕದೇ ಮೋಸ ಮಾಡಿದ್ದಾರೆ. ಈ ಸಲ ನಾನು ನಿಮ್ಮನ್ನ ನಂಬಿದ್ದೆ. ಆದರೆ ಮಾತು ಕೊಟ್ಟು ನನಗೆ ಮೋಸ ಮಾಡಿದ್ದಿರಿ. ಇಷ್ಟು ದಿನ ಸಮುದಾಯ ಪಕ್ಷಾಂತರ ಆಗುತ್ತೆ ಅಂತ ಭಯ ಪಟ್ಟಿದ್ದಾಯ್ತು. ಇನ್ನು ಮುಂದೆ ಭಯ ಪಡುವ ಪ್ರಶ್ನೆಯೇ ಇಲ್ಲ ಎಂದು ಸೋಲಿನ‌ ಆತ್ಮಾವಲೋಕನ ಸಭೆಯಲ್ಲಿ ಎಂಟಿಬಿ ನಾಗರಾಜ್​ ಗುಡುಗಿದ್ದರು. ಇದರ ವಿಡಿಯೋ ಕೂಡ ವೈರಲ್ ಆಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:28 pm, Fri, 16 June 23