ನೀವು ಹೀಗೆ ಮಾತನಾಡುವುದು ಸರಿಯಲ್ಲ: ಬಿಜೆಪಿ ವಿರುದ್ಧ ಸ್ಟಾಲಿನ್ ಮಾಡಿದ ಟೀಕೆಗಳಿಗೆ ಅಣ್ಣಾಮಲೈ ತಿರುಗೇಟು

ನಿರ್ದಿಷ್ಟ ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯಕ್ತಿಯ ಪರ ಎಂಕೆ ಸ್ಟಾಲಿನ್ ಏಕೆ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ ಅಣ್ಣಾಮಲೈ ಕಳೆದ ತಿಂಗಳು ಬಾಲಾಜಿ ಅವರ ಸಹೋದರ ಮತ್ತು ಪರಿಚಯಸ್ಥರಿಗೆ ಸಂಬಂಧಿಸಿದ ಕೆಲವು ಸ್ಥಳಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಲು ಬಂದಾಗ ಅವರು ಯಾವುದೇ ಹೇಳಿಕೆ ನೀಡಿಲ್ಲ ಎಂದಿದ್ದಾರೆ.

ನೀವು ಹೀಗೆ ಮಾತನಾಡುವುದು ಸರಿಯಲ್ಲ: ಬಿಜೆಪಿ ವಿರುದ್ಧ ಸ್ಟಾಲಿನ್ ಮಾಡಿದ ಟೀಕೆಗಳಿಗೆ ಅಣ್ಣಾಮಲೈ ತಿರುಗೇಟು
ಕೆ ಅಣ್ಣಾಮಲೈ
Follow us
ರಶ್ಮಿ ಕಲ್ಲಕಟ್ಟ
|

Updated on:Jun 16, 2023 | 6:34 PM

ಚೆನ್ನೈ: ಬಿಜೆಪಿ ವಿರುದ್ಧ ಟೀಕಾ ಪ್ರಹಾರ ಮಾಡಿರುವ ತಮಿಳುನಾಡು (Tamil Nadu) ಮುಖ್ಯಮಂತ್ರಿ  ವಿರುದ್ಧ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ (K Annamalai) ವಾಗ್ದಾಳಿ ನಡೆಸಿದ್ದು, ಎಂಕೆ ಸ್ಟಾಲಿನ್ (M K Stalin)  ಸಾಮಾನ್ಯ ವೇದಿಕೆಯ ಭಾಷಣಕಾರರಂತೆ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ, ತಮಿಳುನಾಡು ಸರ್ಕಾರವು ಕೇಂದ್ರೀಯ ತನಿಖಾ ದಳಕ್ಕೆ (CBI) ನೀಡಿದ ಸಾಮಾನ್ಯ ಸಮ್ಮತಿಯನ್ನು ಹಿಂಪಡೆದಿರುವುದನ್ನು ಪ್ರಶ್ನಿಸಿದ್ದು ಅನೇಕ ವಿಷಯಗಳ ಬಗ್ಗೆ ಏಜೆನ್ಸಿ ತನಿಖೆಗೆ ವಿರೋಧ ಪಕ್ಷದ ನಾಯಕರಾಗಿದ್ದಾಗ ಸ್ಟಾಲಿನ್ ಮಾಡಿದ್ದ ಹಲವಾರು ಬೇಡಿಕೆಗಳನ್ನು ನೆನಪಿಸಿದರು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮ ಸಂಪುಟ ಸಹೋದ್ಯೋಗಿ ವಿ ಸೆಂಥಿಲ್ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿರುವ ಕುರಿತು ಬಿಜೆಪಿ ವಿರುದ್ಧ ಎಂಕೆ ಸ್ಟಾಲಿನ್ ಮಾಡಿದ ವಾಗ್ದಾಳಿಗೆ ಅಣ್ಣಾಮಲೈ ಪ್ರತಿಕ್ರಿಯಿಸಿದ್ದಾರೆ.

ನಮ್ಮ ಪಕ್ಷ ಮತ್ತು ಅದರ ಕಾರ್ಯಕರ್ತರನ್ನು ಪ್ರಚೋದಿಸುವುದು ತನ್ನದೇ ಆದ ಪರಿಣಾಮಗಳನ್ನು ಬೀರಬಹುದು. ಇದು ನಾವು ಬಿಜೆಪಿಗೆ ನೀಡುವ ಬೆದರಿಕೆಯಲ್ಲ ಎಚ್ಚರಿಕೆ ಎಂದು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅಣ್ಣಾಮಲೈ, ಕೇಳುಗರ ಗಮನ ಸೆಳೆಯುವುದಕ್ಕಾಗಿ ಸಾಮಾನ್ಯ ಮಾತುಗಾರನೊಬ್ಬ ವೇದಿಕೆಯಲ್ಲಿ ಎಚ್ಚರಿಕೆ ನೀಡುವಂತೆ ಸ್ಟಾಲಿನ್ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.

ಗೌರವಾನ್ವಿತ ಸ್ಟಾಲಿನ್ ಅವರೇ, ನೀವು ಈ ರೀತಿ ಮಾತನಾಡುವುದು ನೀವಿರುವ ಮುಖ್ಯಮಂತ್ರಿ ಸ್ಥಾನಕ್ಕೆ ಸರಿಹೊಂದುತ್ತದೆಯೇ ಎಂದು ಯೋಚಿಸಿ ಎಂದಿದ್ದಾರೆ.

1949 ರಲ್ಲಿ ಸ್ಥಾಪನೆಯಾದ ಡಿಎಂಕೆ, ಹಲವು ವರ್ಷಗಳಿಂದ ಆಡಳಿತ ಮತ್ತು ವಿರೋಧ ಪಕ್ಷದಲ್ಲಿದೆ. ಎಲ್ಲಾ ಕಾನೂನುಗಳು ಮತ್ತು ತನಿಖಾ ಕಾರ್ಯವಿಧಾನಗಳ ಬಗ್ಗೆ ಚೆನ್ನಾಗಿ ತಿಳಿದಿರುವ ಮತ್ತು 30 ವರ್ಷಗಳ ಶಾಸಕಾಂಗ ಅನುಭವ ಹೊಂದಿರುವ ನೀವು ಐದು ಪಕ್ಷಗಳನ್ನು ಬದಲಾಯಿಸಿದ ಯಾರನ್ನಾದರೂ (ಬಾಲಾಜಿ) ರಕ್ಷಿಸಲು ಎರಡನೇ ದರ್ಜೆಯ ಭಾಷಣಕಾರನಂತೆ ಮಾತನಾಡುವುದು ನ್ಯಾಯವೇ ಎಂದು ಅಣ್ಣಾಮಲೈ ಕೇಳಿದ್ದಾರೆ.

ನಿರ್ದಿಷ್ಟ ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯಕ್ತಿಯ ಪರ ಎಂಕೆ ಸ್ಟಾಲಿನ್ ಏಕೆ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ ಅಣ್ಣಾಮಲೈ ಕಳೆದ ತಿಂಗಳು ಬಾಲಾಜಿ ಅವರ ಸಹೋದರ ಮತ್ತು ಪರಿಚಯಸ್ಥರಿಗೆ ಸಂಬಂಧಿಸಿದ ಕೆಲವು ಸ್ಥಳಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಲು ಬಂದಾಗ ಅವರು ಯಾವುದೇ ಹೇಳಿಕೆ ನೀಡಿಲ್ಲ ಎಂದಿದ್ದಾರೆ.

ಬಾಲಾಜಿ ವಿರುದ್ಧ ಇಡಿ ಹುಡುಕಾಟಗಳು 2016 ರಲ್ಲಿ ಆಗ ಡಿಎಂಕೆಯಲ್ಲಿಲ್ಲದ ಬಾಲಾಜಿ ವಿರುದ್ಧ ಕ್ರಮ ಕೋರಿ ಸ್ಟಾಲಿನ್ ಎತ್ತಿದ ಆರೋಪಗಳಿಗೆ ಸಂಬಂಧಿಸಿವೆ. ಏಳು ವರ್ಷಗಳಲ್ಲಿ ಬದಲಾಗಿದ್ದು ಏನು ಅಂದರೆ ನಿಮ್ಮ ಮನವಿಯ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ, ಅದನ್ನು ನಿಮ್ಮ ಪಕ್ಷದ ಪರವಾಗಿ ಸ್ವಾಗತಿಸಬೇಕಿತ್ತಲ್ಲವೇ ಎಂದು ಅಣ್ಣಾಮಲೈ ಹೇಳಿದ್ದಾರೆ.

ಎಐಎಡಿಎಂಕೆ ಆಡಳಿತದಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಸ್ಟಾಲಿನ್, ಅಂದಿನ ಸಿಎಂ ಜೆ ಜಯಲಲಿತಾ ಸಾವು, ನಗರದಲ್ಲಿ ಕಟ್ಟಡ ಕುಸಿತ, ಅಂದಿನ ಸಚಿವರ ವಿರುದ್ಧದ ತನಿಖೆ, ಗುಟ್ಕಾ ಹಗರಣ, ಸ್ಟೆರ್ಲೈಟ್ ವಿರೋಧಿ ಪ್ರತಿಭಟನಾಕಾರರ ಮೇಲೆ ತೂತ್ತುಕುಡಿ ಪೊಲೀಸರು ಗೋಲಿಬಾರ್ ಸೇರಿದಂತೆ ವಿಷಯಗಳ ಬಗ್ಗೆ ಸಿಬಿಐ ತನಿಖೆಗೆ ಕೋರಿದ್ದರು.

ಅರವಕುರಿಚಿ ಮತ್ತು ತಂಜಾವೂರಿನಲ್ಲಿ ಹಣ ಹಂಚಿಕೆಗೆ ಸಂಬಂಧಿಸಿದಂತೆ ನೀವು 2016 ರ ಮೇನಲ್ಲಿ ಚುನಾವಣಾ ಸಮಯದಲ್ಲಿ ಸಿಬಿಐ ತನಿಖೆಗೆ ಕೋರಿದ್ದೀರಿ. ಆಗ ಅರವಕುರಿಚಿಯಲ್ಲಿ ಸೆಂಥಿಲ್ ಬಾಲಾಜಿ ವಿರುದ್ಧ ನೀವು ಆರೋಪಗಳನ್ನು ಮಾಡಿದ್ದೀರಿ ಎಂದು ಅಣ್ಣಾಮಲೈ ನೆನಪಿಸಿದ್ದಾರೆ.

ಈಗ ನೀವು ಸಿಬಿಐ ತನಿಖೆ ನಡೆಸಲು ರಾಜ್ಯ ಸರ್ಕಾರದ ಪೂರ್ವಾನುಮತಿ ಪಡೆಯುವಂತೆ ಹೇಳುತ್ತಿರುವುದು ಈ ಆಡಳಿತದ ಶೋಚನೀಯ ಸ್ಥಿತಿಯನ್ನು ತೋರಿಸುತ್ತದೆ. ತಮ್ಮ ವಿಡಿಯೊದಲ್ಲಿ ಸ್ಟಾಲಿನ್ ಬಳಸಿದ ಪದಗಳ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ ಅಣ್ಣಾಮಲೈ, ನೀವು ಯಾರನ್ನು ಗುರಿಯಾಗಿಸಿಕೊಂಡಿದ್ದೀರಿ? ನಿಮ್ಮ ಪಕ್ಷದ ಕಾರ್ಯಕರ್ತರನ್ನು ನೀವು ಹೇಗೆ ಮುನ್ನಡೆಸುತ್ತೀರಿ? ಎಂದು ಕೇಳಿದ್ದಾರೆ. ಇಂತಹ ಪದಗಳನ್ನು ಬಳಸುವುದು ಹಲವು ವಿಶೇಷತೆಗಳಿಗೆ ಹೆಸರಾದ ನಮ್ಮ ರಾಜ್ಯಕ್ಕೆ ತಕ್ಕುದಲ್ಲ.

ನೀವು 8.5 ಕೋಟಿ ತಮಿಳು ಜನರಿಗೆ ಮುಖ್ಯಮಂತ್ರಿಯಾಗಿದ್ದೀರಾ ಅಥವಾ ನಿಮ್ಮ ಕುಟುಂಬ ಮತ್ತು ನಿಮ್ಮ ಸುತ್ತಲಿನ ಸಣ್ಣ ವಲಯಕ್ಕೆ ಮುಖ್ಯಮಂತ್ರಿಯಾಗಿದ್ದೀರಾ ಎಂಬುದನ್ನು ನೀವು ನಿರ್ಧರಿಸಬೇಕು. ಇತರರು ಮಾಡಿದ ತಪ್ಪುಗಳಿಗಾಗಿ ನೀವು ಸಿಬಿಐ ತನಿಖೆಗೆ ಕೋರಿದಾಗ, ನಿಮ್ಮ ತಪ್ಪುಗಳಿಗೆ ನಾವು ಅದೇ ರೀತಿ ಮಾಡುವಾಗ ನೀವು ಏನು ತಪ್ಪು ಮಾಡಿದ್ದೀರಿ ಎಂಬುದು ಗೊತ್ತು. ನೀವು ಯಾಕೆ ಭಯಭೀತರಾಗಿ ಈ ರೀತಿ ಆರೋಪ ಮಾಡುತ್ತಿದ್ದೀರಿ ಎಂದು ಅಣ್ಣಾಮಲೈ, ಸ್ಟಾಲಿನ್ ಅವರನ್ನು ಪ್ರಶ್ನಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:58 pm, Fri, 16 June 23

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್