Sign In

By signing in or creating an account, you agree with Associated Broadcasting Company's Terms & Conditions and Privacy Policy.

Davanagere News: ನಗರ ಸಭೆ ಸದಸ್ಯೆಯ ಬಳಿಕ ಲೋಕಾಯುಕ್ತ ಬಲೆಗೆ ಬಿದ್ದ ಮತ್ತೊಬ್ಬ ಅಧಿಕಾರಿ

ಜಿಲ್ಲೆಯ ಹರಿಹರ ನಗರ ಸಭೆ ಕಾಂಗ್ರೆಸ್ ಸದಸ್ಯೆ ನಾಗರತ್ನ ಎಂಬುವರು ನಿನ್ನೆ(ಜೂ.15) ಗುತ್ತಿಗೆದಾರನಿಂದ 20 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಇದೀಗ ನಗರ ಸಭೆ ಸದಸ್ಯೆ ಜೊತೆಗೆ ಇಲ್ಲಿನ ಸಹಾಯಕ ಇಂಜಿನೀಯರ್ ಅಬ್ದುಲ್ ಹಮೀದ್ ಸಹ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

Davanagere News: ನಗರ ಸಭೆ ಸದಸ್ಯೆಯ ಬಳಿಕ ಲೋಕಾಯುಕ್ತ ಬಲೆಗೆ ಬಿದ್ದ ಮತ್ತೊಬ್ಬ ಅಧಿಕಾರಿ
ಸಹಾಯಕ ಇಂಜಿನೀಯರ್ ಅಬ್ದುಲ್ ಹಮೀದ್
Follow us
ಕಿರಣ್ ಹನುಮಂತ್​ ಮಾದಾರ್
|

Updated on: Jun 16, 2023 | 8:41 AM

ದಾವಣಗೆರೆ: ಜಿಲ್ಲೆಯ ಹರಿಹರ ನಗರ ಸಭೆ ಕಾಂಗ್ರೆಸ್ ಸದಸ್ಯೆ ನಾಗರತ್ನ ಎಂಬುವರು ನಿನ್ನೆ(ಜೂ.15) ಗುತ್ತಿಗೆದಾರನಿಂದ 20 ಸಾವಿರ ರೂಪಾಯಿ ಲಂಚ(Bribe) ಸ್ವೀಕರಿಸುವಾಗ ಲೋಕಾಯುಕ್ತ(Lokayukta) ಬಲೆಗೆ ಬಿದ್ದಿದ್ದರು. ಇದೀಗ ನಗರ ಸಭೆ ಸದಸ್ಯೆ ಜೊತೆಗೆ ಇಲ್ಲಿನ ಸಹಾಯಕ ಇಂಜಿನೀಯರ್ ಅಬ್ದುಲ್ ಹಮೀದ್ ಸಹ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಹೌದು ಮಹಮದ್ ಮಜಿದ್ ಎಂಬ ಗುತ್ತಿಗೆದಾರನಿಂದ ಕಾಮಗಾರಿಗೆ 5 ಪರ್ಸೆಂಟ್ ಕಮಿಷನ್ ರೂಪದಲ್ಲಿ 20 ಸಾವಿರ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾನೆ.

ಸಹಾಯಕ ಇಂಜಿ‌ನೀಯರ್ ಅಬ್ದುಲ್ ಹಮೀದ್ 10 ಲಕ್ಷ ಕಾಮಗಾರಿಗೆ 5 ಪರ್ಸೆಂಟ್ ಎಂದು ಫಿಕ್ಸ್‌‌ ಮಾಡಿದ್ದ. ಅದರಂತೆ ಈಗಾಗಲೇ 20 ಸಾವಿರ ರೂಪಾಯಿ ನೀಡಿದ್ದು, ಮತ್ತೇ 20 ಸಾವಿರಕ್ಕೆ ಬೇಡಿಕೆಯಿಟ್ಟಿದ್ದನಂತೆ. ಖಚಿತ ಮಾಹಿತಿ ಮೇರೆಗೆ ಹರಿಹರ ನಗರದ ಅವರ ಮನೆಯಲ್ಲಿ ಲಂಚ ಸ್ವೀಕರಿಸುವಾಗ ದಾವಣಗೆರೆ ಲೋಕಾಯಕ್ತ ಎಸ್ಪಿ ಎಂ.ಎಸ್ ಕೌಲಾಪುರೆ ನೇತ್ರತ್ವದಲ್ಲಿ ಇನ್ಸ್ ಪೇಕ್ಟರ್​ಗಳಾದ ಎಚ್ ಎನ್ ಆಂಜನೇಯ ಹಾಗೂ ಎಚ್ಎಸ್ ರಾಷ್ಟ್ರಪತಿ ಹಮೀದ್​ರನ್ನ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ಲಾರಿ ತಡೆದು ಹಣ ವಸೂಲಿ; ಓರ್ವ ASI ಸೇರಿ ಇಬ್ಬರು ಪೊಲೀಸರು ಅಮಾನತು, ಇತ್ತ ಲೋಕಾಯುಕ್ತ ಬಲೆಗೆ ಬಿದ್ದಇಂಜಿನಿಯರ್

ನಿನ್ನೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಹರಿಹರ ನಗರ ಸಭೆ ಸದಸ್ಯೆ ನಾಗರತ್ನ

ಇನ್ನು ಜಿಲ್ಲೆಯ ಹರಹರ ನಗರ ಸಭೆ ಕಾಂಗ್ರೆಸ್ ಸದಸ್ಯೆ ನಾಗರತ್ನ ಜೊತೆಗೆ ಅವಳ ಪತಿ ಮಂಜುನಾಥ, ಪುತ್ರ ರೇವಂತ ಸೇರಿ ಗುತ್ತಿಗೆದಾರ ಮಜೀದ್ ಎಂಬುವರಿಂದ ಲಂಚ ಸ್ವೀಕಾರ ಮಾಡುವ ವೇಳೆ ಹರಿಹರ ನಗರದ ನಾಗರತ್ನ ಅವರ ಮನೆಯಲ್ಲಿಯೇ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಹೌದು ಹಣ ಕೊಡುವಂತೆ ಗುತ್ತಿಗೆದಾರಿಗೆ ಪೀಡಿಸುತ್ತಿದ್ದ ನಾಗರತ್ನ ಮತ್ತು ಅವಳ‌ ಪತಿ ಮಂಜುನಾಥನ ಕಿರುಕಳಕ್ಕೆ ಬೇಸತ್ತು ಗುತ್ತಿಗೆದಾರ ಮಜೀದ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಕೂಡಲೇ ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ನೇತ್ರತ್ವದಲ್ಲಿ ದಾಳಿ ನಡೆಸಿ ನಗರ ಸಭೆ ಸದಸ್ಯೆ, ಪತಿ ಮಂಜುನಾಥ ಹಾಗೂ‌ ಪುತ್ರ ರೇವಂತ ಮೂರು ಜನರನ್ನ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ